Date : Wednesday, 13-05-2015
ಕರಾಚಿ: ಪಾಕಿಸ್ಥಾನದಲ್ಲಿ ಮತ್ತೆ ಉಗ್ರರು ಪೈಶಾಚಿಕ ಕೃತ್ಯ ಎಸಗಿದ್ದಾರೆ. ಕರಾಚಿಯ ಸಫೂರ ಚೌಕ್ ಪ್ರದೇಶದಲ್ಲಿ ಬಸ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು 43 ಮಂದಿ ಹತ್ಯೆಯಾಗಿದ್ದಾರೆ. ಈ ಬಸ್ನಲ್ಲಿ ಶಿಯಾ ಸಮುದಾಯಕ್ಕೆ ಸೇರಿದ ಜನರು ಪ್ರಯಾಣಿಸುತ್ತಿದ್ದರು, ಈ ವೇಳೆ 3 ಬೈಕ್ನಲ್ಲಿ...
Date : Tuesday, 12-05-2015
ಲಂಡನ್: ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್ ಅವರು ಬ್ರಿಟನ್‌ನಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ನೂತನ ಸಂಪುಟದಲ್ಲಿ ಉದ್ಯೋಗ ಖಾತೆಯ ರಾಜ್ಯ ಸಚಿವೆಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಸಂಪುಟ ದರ್ಜೆಯ ಸ್ಥಾನಮಾನ ಪಡೆದುಕೊಂಡ ಭಾರತೀಯ ಮೂಲದ ಬ್ರಿಟನ್ ಪ್ರಜೆ ಎಂಬ...
Date : Monday, 11-05-2015
ಇಸ್ಲಾಮಾಬಾದ್: ಭಯೋತ್ಪಾದಕ ಒಸಾಮ ಬಿನ್ ಲಾಡೆನ್ಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ಥಾನದ ಗುಪ್ತಚರ ಇಲಾಖೆಯ ಅಧಿಕಾರಿಗಳು ಅಮೆರಿಕಾಗೆ 25 ಮಿಲಿಯನ್ ಡಾಲರ್ಗೆ ಮಾರಾಟ ಮಾಡಿದ್ದರು ಎಂದು ಖ್ಯಾತ ತನಿಖಾ ವರದಿಗಾರ ಸೆಮೌರ್ ಹೆರ್ಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಒಸಾಮನ ಹತ್ಯೆಯ ಬಗ್ಗೆ...
Date : Saturday, 09-05-2015
ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆಗೊಳಿಸಿರುವುದು ದೊಡ್ಡ ಪ್ರಮಾದ, ಈ ವಿಷಯದ ಬಗ್ಗೆ ಅಮೆರಿಕಾದ ಕಾಳಜಿಯನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ರಿಚರ್ಡ್ ವರ್ಮಾ ತಿಳಿಸಿದ್ದಾರೆ. ‘ಮುಂಬಯಿ ದಾಳಿಯ ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು,...
Date : Saturday, 09-05-2015
ವಿಶ್ವಸಂಸ್ಥೆ: ರೋಗಗಳಿಗೆ ಇಲಿಜ್ವರ, ಹಂದಿಜ್ವರ, ಹಕ್ಕಿ ಜ್ವರ ಎಂಬಿತ್ಯಾದಿ ಪ್ರಾಣಿಗಳ, ಸ್ಥಳಗಳ ಅಥವಾ ಮನುಷ್ಯರ ಹೆಸರುಗಳನ್ನು ಇಡದಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಸ್ಪಾನಿಶ್ ಫ್ಲೂ, ರಿಫ್ಟ್ ವ್ಯಾಲಿ ಫಿವರ್, ವೆಸ್ಟ್ ನೈಲ್ ವೈರಸ್, ಲೈಮ್ ಡಿಸೀಸ್, ಎಬೋಲಾ ಮುಂತಾದ...
Date : Saturday, 09-05-2015
ವಾಷಿಂಗ್ಟನ್: ಏಷ್ಯಾದ ಪ್ರಬಲ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವಿನ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ಗಟ್ಟಿಗೊಂಡರೂ, ಗಡಿ ಸಮಸ್ಯೆ ಹಾಗೆಯೇ ಮುಂದುವರೆಯಲಿದೆ ಎಂದು ಅಮೆರಿಕ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ತಮ್ಮ ಚೊಚ್ಚಲ ಚೀನಾ ಪ್ರವಾಸ ಕೈಗೊಳ್ಳಲಿರುವ ಹಿನ್ನಲೆಯಲ್ಲಿ...
Date : Friday, 08-05-2015
ಲಂಡನ್: ಬ್ರಿಟನ್ ಸಂಸತ್ತಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಜಯಭೇರಿ ಬಾರಿಸಿದೆ. ಈ ಮೂಲಕ ಡೇವಿಡ್ ಕ್ಯಾಮರೂನ್ ಮತ್ತೆ ಬ್ರಿಟನ್ ಪ್ರಧಾನಿಯಾಗಿ 5 ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು...
Date : Friday, 08-05-2015
ಲಂಡನ್: ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 20 ವರ್ಷದ ವಿದ್ಯಾರ್ಥಿನಿಯೋರ್ವಳು ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾಳೆ. ಸ್ಕಾಟಿಶ್ ನ್ಯಾಷನಲ್ ಪಕ್ಷದ ವಿದ್ಯಾರ್ಥಿನಿ ಹೈರಿ ಬ್ಲಾಕ್ ಎಂಬಾಕೆ ಲೇಬರ್ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ ದೌಗ್ಲಸ್ ಅಲೆಗ್ಸಾಂಡರ್ ಅವರನ್ನು ಮಣಿಸುವ ಮೂಲಕ...
Date : Friday, 08-05-2015
ಇಸ್ಲಾಮಾಬಾದ್: ವಿವಿಧ ದೇಶಗಳ ರಾಜತಾಂತ್ರಿಕರಿದ್ದ ಪಾಕ್ ಸೇನಾ ಹೆಲಿಕಾಫ್ಟರ್ ಪತನಗೊಳ್ಳಲು ನಾವೇ ಕಾರಣ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ವಿಮಾನ ನಿರೋಧಕ ಕ್ಷಿಪಣಿಯ ಮೂಲಕ ಹೆಲಿಕಾಫ್ಟರನ್ನು ಹೊಡೆದುರುಳಿಸಲಾಯಿತು. ಪ್ರಧಾನಿ ನವಾಝ್ ಶರೀಫ್ ನಮ್ಮ ಟಾರ್ಗೆಟ್ ಆಗಿದ್ದರು ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಖೊರಾಸನಿ...
Date : Friday, 08-05-2015
ಇಸ್ಲಾಮಾಬಾದ್: ಪಾಕಿಸ್ತಾನದ ಮಿಲಿಟರಿ ಹೆಲಿಕಾಫ್ಟರ್ ಎಂಐ-17 ಶುಕ್ರವಾರ ಪತನಗೊಂಡಿದ್ದು ಆರು ಜನರು ಮೃತರಾಗಿದ್ದಾರೆ. ಮೃತರಲ್ಲಿ ನಾರ್ವೆ ಮತ್ತು ಫಿಲಿಫೈನ್ಸ್ ರಾಯಭಾರಿಗಳು, ಮಲೇಷ್ಯಾ ಮತ್ತು ಇಂಡೋನೇಷ್ಯಾ ರಾಯಭಾರಿಗಳ ಪತ್ನಿಯರು ಸೇರಿದ್ದಾರೆ. ಉತ್ತರ ಪಾಕಿಸ್ತಾನದಲ್ಲಿ ಯೋಜನೆಯೊಂದರ ಉದ್ಘಾಟನಾ ಸಮಾರಂಭಕ್ಕಾಗಿ ಈ ಹೆಲಿಕಾಫ್ಟರ್ ರಾಜತಾಂತ್ರಿಕರನ್ನು ಕೊಂಡೊಯ್ಯುತ್ತಿತ್ತು...