ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೀಜಿಂಗ್ನ ಟೆಂಪಲ್ ಆಫ್ ಹೆವನ್ನಲ್ಲಿ ನಡೆದ ಯೋಗ-ಥಾಯ್ಚಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಅವರಿಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸಾಥ್ ನೀಡಿದರು.
ಅಲ್ಲಿನ ವಿದ್ಯಾರ್ಥಿಗಳು ಮೋದಿಗಾಗಿ ವಿಭಿನ್ನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲಿನ ಮಕ್ಕಳೊಂದಿಗೆ ಬೆರೆತ ಅವರು ಸೆಲ್ಫಿ ಕ್ಲಿಕಿಸಿದರು.
ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ ‘ಭಾರತೀಯ ವಿದ್ಯಾರ್ಥಿಗಳು ಥಾಯ್ಚಿ ಮಾಡುತ್ತಿರುವುದನ್ನು, ಚೀನಿ ವಿದ್ಯಾರ್ಥಿಗಳು ಯೋಗ ಮಾಡುತ್ತಿರುವುದನ್ನು ನೋಡುವುದೇ ಒಂದು ಅದ್ಭುತ’ ಎಂದಿದ್ದಾರೆ.
ಅಲ್ಲದೇ ವಿಶ್ವ ಆರೋಗ್ಯದ ಸಮಗ್ರ ಅಗತ್ಯತೆಯನ್ನು ಯೋಗ ಪೂರ್ಣಗೊಳಿಸುತ್ತದೆ ಎಂದರು. ಅಲ್ಲದೇ ವಿಭಿನ್ನ ಕಾರ್ಯಕ್ರಮವನ್ನು ತನಗಾಗಿ ಆಯೋಜಿಸಿದಕ್ಕಾಗಿ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಧಾರ್ಮಿಕ ಸಂಸ್ಥೆಗಳ ಸಮೂಹವೇ ಟೆಂಪಲ್ ಆಫ್ ಹೆವೆನ್ ಆಗಿದ್ದು, ಇದು ಬೀಜಿಂಗ್ನ ಮಧ್ಯಭಾಗದಲ್ಲಿದೆ. ಇಲ್ಲಿಗೆ ಮಿಂಗ್ ಮತ್ತು ಕಿಂಗ್ ರಾಜಮನೆತನದವರು ಆಗಮಿಸುತ್ತಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.