ಗುವಾಹಟಿ: ಅಸ್ಸಾಂನ 15 ಜಿಲ್ಲೆಗಳಲ್ಲಿ ಮುಂದಿನ ವರ್ಷದಿಂದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ಟಾಟಾ ಸನ್ಸ್ ಅಸ್ಸಾಂನ ಸರ್ಕಾರದೊಂದಿಗೆ ಕೈಜೋಡಿಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ತಿಳಿಸಿದ್ದಾರೆ.
ಗುವಾಹಟಿಯಲ್ಲಿ ನಡೆಯುತ್ತಿರುವ ಅಡ್ವಂಟೇಜ್ ಅಸ್ಸಾಂ-ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಅಸ್ಸಾಂನೊಂದಿಗೆ ಟಾಟಾ ಗ್ರೂಪ್ಗೆ ಸುದೀರ್ಘ ಸಮಯ ಅವಿನಾಭಾವ ಸಂಬಂಧವಿದೆ. ಅಸ್ಸಾಂ ನಮಗೆ ಅತ್ಯಂತ ಹತ್ತಿರವಾಗಿದೆ. ನಮ್ಮ ಕ್ಯಾನ್ಸರ್ ಚಿಕಿತ್ಸಾ ಕಾರ್ಯಕ್ರಮ ಮುಂಬರುವ ದಿನಗಳಲ್ಲಿ ಇಲ್ಲಿಯೂ ಆರಂಭಗೊಳ್ಳಲಿದೆ’ ಎಂದು ನಟರಾಜನ್ ಹೇಳಿದ್ದಾರೆ.
ಈ ಸಲುವಾಗಿ ಅಡ್ವಂಟೇಜ್ ಅಸ್ಸಾಂ ಸಮಿತ್ನಲ್ಲಿ ಅಸ್ಸಾಂ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.