ನವದೆಹಲಿ: ಚುನಾವಣಾ ಆಯೋಗ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಮುಂದಿನ ವರ್ಷದ ಸಪ್ಟೆಂಬರ್ನಲ್ಲಿ ನಾವು ಸಮರ್ಥರಾಗಲಿದ್ದೇವೆ ಎಂದು ಹೇಳಿದೆ. ಆದರೆ ಇದೊಂದು ಮಹತ್ವದ ರಾಜಕೀಯ ವಿಷಯವಾಗಿದ್ದು. ಎಲ್ಲಾ ರಾಜಕೀಯ ಪಕ್ಷಗಳ ನಿಲುವುಗಳು ಇಲ್ಲಿ ಮಹತ್ವದಾಗುತ್ತದೆ.
ಹಾಗಾದರೆ ಯಾವ ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಯುವ ಪರವಾಗಿದೆ ಮತ್ತು ಯಾವೆಲ್ಲಾ ಪಕ್ಷಗಳು ವಿರುದ್ಧವಾಗಿದೆ ಎಂಬುದು ಮುಖ್ಯ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಏಕಕಾಲಕ್ಕೆ ಚುನಾವನೆ ನಡೆಸುವ ಪರವಾಗಿದೆ. ಹಿಂದಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಇದನ್ನು ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. 18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅದರಲ್ಲಿ 13 ಮಂದಿ ಬಿಜೆಪಿ ಸಿಎಂಗಳೇ ಆಗಿದ್ದಾರೆ. ಇವರು ಏಕಕಾಲಕ್ಕೆ ಚುನಾವಣೆ ನಡೆಸುವ ಸಲುವಾಗಿ ಅವಧೀಗೂ ಮುನ್ನವೇ ಅಧಿಕಾರ ತ್ಯಜಿಸಲು ಸಿದ್ಧರಿದ್ದಾರೆ.
ಬಿಜೆಪಿ ಮೈತ್ರಿ ಆಂಧ್ರದ ತೆಲುಗು ದೇಶಂ ಪಕ್ಷ ಕೂಡ ಏಕಕಾಲಕ್ಕೆ ಚುನಾವಣೆ ನಡೆಸುವ ಪರವಾಗಿದೆ. ಅದಕ್ಕಾಗಿ ಒಂದು ವರ್ಷ ಮುಂಚಿತವಾಗಿಯೇ ಚಂದ್ರಬಾಬು ನಾಯ್ಡು ಸರ್ಕಾರ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.
ಬಿಜೆಪಿ ಮೈತ್ರಿ ಜೆಡಿಯು ಕೂಡ ಪರವಾದ ನಿಲುವನ್ನು ಹೊಂದಿದೆ.
ಆದರೆ ತ್ರಿಪುರ ಮತ್ತು ಕೇರಳದಲ್ಲಿರುವ ಎಡಪಕ್ಷ ಸಿಪಿಎಂ, ಸಿಪಿಐಗಳು ಇದು ಸಾಧ್ಯವೇ ಇಲ್ಲ. ಏಕಕಾಲಕ್ಕೆ ಚುನಾವಣೆ ಎನ್ನುವುದು ಅವಾಸ್ತವ ಎನ್ನುತ್ತಿದೆ. ಇನ್ನು ಲಾಲೂ ಪ್ರಸಾದ್ ಅವರ ಆರ್ಜೆಡಿ, ತಮಿಳುನಾಡಿನ ಡಿಎಂಕೆ, ತೆಲಂಗಾಣದ ಟಿಆರ್ಎಸ್ ಕೂಡ ವಿರೋಧ ವ್ಯಕ್ತಪಡಿಸುತ್ತಿವೆ.
ಇನ್ನು ಕಾಂಗ್ರೆಸ್ ತನ್ನ ನಿಲುವನ್ನು ಇದುವರೆಗೆ ಸ್ಪಷ್ಟಪಡಿಸಿಲ್ಲ.