ನವದೆಹಲಿ: ಜಿಎಸ್ಟಿ ಜಾರಿಗೆ ಬಂದ ಮೂರು ವಾರಗಳ ತರುವಾಯ ಜಿಎಸ್ಟಿ ಕೌನ್ಸಿಲ್, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ತೆರಿಗೆ ಪಾವತಿ, ರಿಟರ್ನ್ಸ್ ಫಿಲ್ಲಿಂಗ್ನಲ್ಲಿ ನಿರಾಳತೆ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.
ಶುಕ್ರವಾರ ಸಭೆ ಸೇರಿದ ಜಿಎಸ್ಟಿ ಕೌನ್ಸಿಲ್, ವಾರ್ಷಿಕ 1.5 ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮಗಳಿಗೆ ತ್ರೈಮಾಸಿಕ ಆದಾಯ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಪ್ರಸ್ತುತ ಇರುವಂತೆ ಪ್ರತಿ ತಿಂಗಳು ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ.
ಅಲ್ಲದೇ ಬ್ರಾಂಡ್ ರಹಿತ ಆರ್ಯುವೇದಿಕ್ ಔಷಧಗಳು ಸೇರಿದಂತೆ 27 ವಸ್ತುಗಳ ಮೇಲಿನ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಲಾಗಿದೆ.
ಆಭರಣ ಮತ್ತು ರತ್ನಗಳ ಮೇಲಿನ ಜಿಎಸ್ಟಿ ಅಧಿಸೂಚನೆಯನ್ನೂ ಸರ್ಕಾರ ತೆಗೆದು ಹಾಕಿದೆ. ಇದರ ಸಂಬಂಧ ಪ್ರತ್ಯೇಕ ಅಧಿಸೂಚನೆ ಬಿಡುಗಡೆಯಾಗಲಿದೆ. ಅಲ್ಲದೇ ರೂ.50ಸಾವಿರದಿಂದ 2 ಲಕ್ಷದವರೆಗೆ ಚಿನ್ನಾಭರಣಗಳನ್ನು ಖರೀದಿ ಮಾಡುವವರು ಪಾನ್ ಅಥವಾ ಆಧಾರ್ನ್ನು ಸಲ್ಲಿಸಬೇಕಿಲ್ಲ.