ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಭವಿಷ್ಯದ ಕನಸು, ಗುರಿಗಳಿಗೆ ನೀರೆರೆದರೆ, ಪಠ್ಯೇತರ ಚಟುವಟಿಕೆ ಅಥವಾ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವರ್ಷವೀಡಿ ಅಸೈನ್ಮೆಂಟ್, ಪರೀಕ್ಷೆ, ಸೆಮಿನಾರ್ಗಳೆಂದು ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಲು ಮತ್ತು ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಕವಿವಿ ಯೂಥ್ ಫೆಸ್ಟಿವಲ್ ಎಂಬ ಅದ್ಭುತ ಮತ್ತು ಅವಕಾಶಗಳುಳ್ಳ ವೇದಿಕೆಯನ್ನು ಸಜ್ಜುಗೊಳಿಸಿದೆ.
ಈ ಕಾರ್ಯಕ್ರಮವು ಅಕ್ಟೋಬರ್ 6 ಮತ್ತು 7 ರಂದು ಕವಿವಿ ಕ್ಯಾಂಪಸ್ನಲ್ಲಿಯ ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಇದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶ್ರೀ ಎಮ್. ಎನ್ ನಾಗರಾಜ್, ಗೌರವಾರ್ಥ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಪ್ರೋ. ಪಿ. ಎಮ್ ಹೊನಕೇರಿ ಮತ್ತು ಅಧ್ಯಕ್ಷತೆಯನ್ನು ಕವಿವಿಯ ಉಪಕುಲಪತಿಗಳಾದ ಪ್ರೋ. ಪ್ರಮೋದ ಗಾಯ್ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯು ಅಕ್ಟೋಬರ್ 6 ರಂದು ಬೆಳಿಗ್ಗೆ 10.30 ಕ್ಕೆ ಸೆನೆಟ್ ಹಾಲ್ನಲ್ಲಿ ನಡೆಯಲಿದ್ದು ನಂತರ ಬೇರೆ ಬೇರೆ ಕಾರ್ಯಕ್ರಮಗಳು ಅಂಬೇಡ್ಕರ್ ಭವನದಲ್ಲಿ ಲಲಿತ ಕಲೆ (ಫೈನ್ ಆರ್ಟ್ಸ್), ರಂಗೋಲಿ, ಕಾರ್ಟೂನಿಂಗ್, ಕೊಲಾಜ್ಪೋಸ್ಟರ್ ಮೇಕಿಂಗ್ ಮತ್ತು ಸೆನೆಟ್ ಹಾಲ್ನಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ತಾಳವಾದ್ಯ, ಗ್ರೂಪ್ ಸಾಂಗ್, ಜಾನಪದ ಗೀತೆ ಮತ್ತೀತರ ಸಂಗೀತ ಕಾರ್ಯಕ್ರಮಗಳು, ಗಾಂಧಿ ಭವನದಲ್ಲಿ ಶಾಸ್ತ್ರೀಯ ನೃತ್ಯ, ಬುಡಕಟ್ಟು ಪ್ರಕಾರದ ನೃತ್ಯ ಪ್ರಕಾರಗಳು, ಮತ್ತು ಕನ್ನಡ ಸಭಾಭವನದಲ್ಲಿ ಮಿಮಿಕ್ರಿ, ಚರ್ಚಾಸ್ಪರ್ಧೆ, ನಾಟಕ, ಮಾನವಶಾಸ್ತ್ರ ವಿಭಾಗದಲ್ಲಿ ಕ್ವೀಜ್ ಮತ್ತು ಬಸವ ಪೀಠದಲ್ಲಿ ಪಾಶ್ಚಾತ್ಯ ನೃತ್ಯ (ವೆಸ್ಟರ್ನ್ ಡ್ಯಾನ್ಸ್)ಗಳು ನಡೆಯಲಿವೆ. ಒಟ್ಟು 23 ಪ್ರಕಾರದ ಕಾರ್ಯಕ್ರಮಗಳಿವೆ. ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸಾಂಸ್ಕೃತಿಕ ಚಟುವಟಿಕೆಯ ಉಪಾಧ್ಯಕ್ಷರಾದ ಡಾ. ಸಂಗೀತಾ ಮಾನೆ ಮಾಹಿತಿ ನೀಡಿದ್ದಾರೆ.
ಪ್ರತಿ ಕಾರ್ಯಕ್ರಮವು ತಲಾ ಮೂರು ಪ್ರಶಸ್ತಿಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮದಲ್ಲಿ ಆಯ್ಕೆಯಾದ ತಂಡಗಳು ಅಥವಾ ವೈಯಕ್ತಿಕವಾಗಿ ಆಯ್ಕೆಯಾದವರು ಮುಂದೆ ಯುನಿ ಫೆಸ್ಟ್ ನಂತರ ಸೌಥ್ ಫೆಸ್ಟ್ ಇಲ್ಲಿ ಆಯ್ಕೆಯಾದವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುತ್ತಾರೆ.
ಕಾರ್ಯಕ್ರಮದ ವಿಶೇಷ
ಈ ಕಾರ್ಯಕ್ರಮದಲ್ಲಿ ಮೊಟ್ಟಮೊದಲ ಬಾರಿಗೆ ಗೋಗ್ರೀನ್ ಎಂಬ ವಿಷಯವನ್ನು ಪರಿಚಯಿಸಲಿದ್ದು ಅದರ ಸಾಂಕೇತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರೆಲ್ಲರೂ ಹಸಿರು ಬಟ್ಟೆ ಧರಿಸಲು ನಿರ್ಧರಿಸಿದ್ದಾರೆ ಜೊತೆಗೆ ವೇದಿಕೆಯನ್ನು ಹಸಿರುಮಯವಾಗಿ ಸಿದ್ಧಪಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪರಿಸರ ವಿನಾಶದತ್ತ ಸಾಗುತ್ತಿದ್ದು , ಇದರ ಕುರಿತು ತಿಳಿಸಲು, ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸಲು, ಸ್ವಚ್ಛ ಭಾರತ, ಮರ ಬೆಳೆಸಿ ಪರಿಸರ ಉಳಿಸಿ, ಆದಷ್ಟು ಮಾಲಿನ್ಯ ಕಡಿಮೆ ಮಾಡಲು ಕ್ಯಾಂಪಸ್ನಲ್ಲಿ ಸೈಕಲ್ ಬಳಸಿ, ಹೆಚ್ಚೆಚ್ಚು ಮರಗಳನ್ನು ಬೆಳೆಸುವಂತೆ ಪ್ರೇರೇಪಿಸಲು ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಮತ್ತು ಬಂದಿರುವ ಅತಿಥಿಗಳಿಗೆಲ್ಲಾ ಹೂಗುಚ್ಛದ ಬದಲು ಆರ್ಯುವೇದಿಕ್ ಸಸಿಗಳನ್ನು ಕೊಡಲಾಗುತ್ತದೆ ಎಂದು ಪಿಜಿಯ ಜಿಮ್ಖಾನ್ದ ಅಧ್ಯಕ್ಷರಾದ ಪ್ರೋ. ಎ.ಬಿ. ವೇದ್ಮೂರ್ತಿ ಹೇಳಿದ್ದಾರೆ.
ಒಟ್ಟಿನಲ್ಲಿ ಈ ವೇದಿಕೆಯು ಒಂದೊಳ್ಳೆ ಅವಕಾಶವನ್ನು ಕಲ್ಪಿಸುತ್ತಿದೆ. ಎಲ್ಲರೂ ಸಮರ್ಪಕವಾಗಿ ಇದನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು.
ಪೇಪರ್ ಉಳಿಸುವ ಸಲುವಾಗಿ ಕಾರ್ಯಕ್ರಮದ ಮಾಹಿತಿ ಕುರಿತಂತೆ ಆಮಂತ್ರಣದ ಬದಲು ಕವಿವಿ ವೆಬ್ಸೈಟ್ಲ್ಲಿ ಎಲ್ಲಾ ಮಾಹಿತಿಯನ್ನು ಹಾಕಲಾಗಿದೆ. ಕಾರಣ ಈಗ ಎಲ್ಲರೂ ಟೆಕ್ನಾಲಜಿಯನ್ನು ಬಳಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪಿಜಿ ಜಿಮ್ಖಾನ್ ಅಧ್ಯಕ್ಷರಾದ ಪ್ರೊ. ಎ. ಬಿ ವೇದ್ಮೂರ್ತಿ (9341314101) ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.