ಹುಬ್ಬಳ್ಳಿ : ರಾಷ್ಟ್ರೀಯ ಸೇವಾ ಭಾರತಿ ಅಖಿಲ ಭಾರತೀಯ ಸ್ವಯಂಸೇವಾ ಸಂಸ್ಥೆಯ ಮುಖ್ಯ ಉದ್ದೇಶ ಸಮಾನ ಮನಸ್ಕ ಸ್ವಯಂಸೇವಾ ಸಂಸ್ಥೆಗಳನ್ನು ಒಂದೇ ಛತ್ರದಡಿ ತರುವುದು. ಸ್ವಯಂಸೇವಾ ಸಂಸ್ಥೆಗಳಿಗೆ ವ್ಯವಸ್ಥೆ, ನಿರ್ಣಯ ಪ್ರಕ್ರಿಯೆ, ಸೃಜನಶೀಲತೆ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡುವುದು.
5 ವರ್ಷಗಳಿಗೊಮ್ಮೆ ರಾಷ್ಟ್ರಮಟ್ಟದಲ್ಲಿ ಸೇವಾ ಸಂಗಮ ನಡೆಸುವುದು, 2010 ರಲ್ಲಿ ಬೆಂಗಳೂರು 2005 ರಲ್ಲಿ ದೆಹಲಿಯಲ್ಲಿ ನಡೆದಿದೆ. 2012 ರಲ್ಲಿ ಕರ್ನಾಟಕ ರಾಜ್ಯ ಮಟ್ಟದ ಸೇವಾ ಸಂಗಮ ಶಿವಮೊಗ್ಗದಲ್ಲಿ ನಡೆದಿದೆ. 2017 ರಲ್ಲಿ ಡಿಸೆಂಬರ್ 1, 2, 3 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಸೇವಾ ಭಾರತೀಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರು ಮತ್ತು ದಕ್ಷಿಣ ಭಾರತದ ಸಂಯೋಜಕರು ಆದ ಶ್ರೀಧರ ಸಾಗರ ಅವರು ಹೇಳಿದರು.
ಇಂದು ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೇವಾಸಂಗಮ-2017 ರ ಕುರಿತು ಶ್ರೀಧರ ಸಾಗರ್ ಅವರು ಮಾತನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಡಾ|| ರಘು ಅಕಮಂಚಿ – ಸೇವಾ ಸಂಗಂಮ 2017ರ ಸ್ವಾಗತ ಸಮಿತಿಯ ಸದಸ್ಯರು, ವಾಯ್. ಸತೀಶ – ಸೇವಾ ಸಂಗಂಮ 2017ರ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರು. ಗೋವಿಂದಪ್ಪ ಗೌಡಪ್ಪಗೊಳ – ಸೇವಾ ಸಂಗಂಮ 2017ರ ಸ್ವಾಗತ ಸಮಿತಿಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಸೇವಾ ಸಂಗಮ 2017 ರ ದೃಷ್ಟಿ
ಪರಿಸರ, ಕೃಷಿ ಮತ್ತು ಗೋವು, ಆರೋಗ್ಯ, ಸಂಸ್ಕಾರ ಮತ್ತು ಸಾಮರಸ್ಯ ಪ್ರಮುಖವಾಗಿ ಈ ಐದು ವಿಷಯಗಳಲ್ಲಿ ಕೆಲಸ ಮಾಡುವುದು. ಈ ವಿಷಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ತಾಲೂಕು ಮತ್ತು ಜಿಲ್ಲೆ ಮಟ್ಟದಲ್ಲಿ ಒಂದು ದಿನದ ತರಬೇತಿ ನೀಡಿದೆ. 1700 ಸ್ತ್ರೀ ಮತ್ತು ಪುರುಷರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಸಸಿ ನೆಡುವುದು, ಗೋ ಸಂವರ್ಧನೆ, ಮನೆಮದ್ದು, ಕೃಷಿ, ಸ್ವಚ್ಛತಾ, ಆರೋಗ್ಯ ತಪಾಸಣೆ, ರಕ್ತದಾನ, ವ್ಯಕ್ತಿತ್ವ ವಿಕಸನ, ಪರಿವಾರ ಮಿಲನ, ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ, ಉಚಿತ ಮನೆಪಾಠ, ಭಜನಾ ಕೇಂದ್ರಗಳು, ಸಂಸ್ಕಾರ ಕೇಂದ್ರಗಳು ನೂರಾರು ಸ್ಥಾನಗಳಲ್ಲಿ ನಡೆದಿವೆ. ಇದಲ್ಲದೆ ಬಾಲಕಲ್ಯಾಣ ಕೇಂದ್ರಗಳು, ದಿವ್ಯಾಂಗ ಮಕ್ಕಳ ಶಾಲೆ, ಮಕ್ಕಳ ದತ್ತು ಸ್ವೀಕಾರ ಕೇಂದ್ರ, ಸಂಚಾರಿ ಚಿಕಿತ್ಸಾಲಯ, ಅಂಬ್ಯುಲೆನ್ಸ್, ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರಗಳು, ರಕ್ತನಿಧಿ (Blood bank) ಕೊಳಚೆ ಪ್ರದೇಶಗಳಲ್ಲಿ ಟ್ಯೂಶನ್ ತರಗತಿಗಳು, ಚಿಂದಿ ಆಯುವ ಮಕ್ಕಳ ಪುನರ್ ವಸತಿ ಕೇಂದ್ರ, ಯೋಗ ಕೆಂದ್ರಗಳು ಕರ್ನಾಟಕದ ಹಲವು ಸ್ಥಾನಗಳಲ್ಲಿ ಹತ್ತಾರು ವರ್ಷಗಳಿಂದ ನಡೆಯುತ್ತಿವೆ.
ಈ ಎಲ್ಲಾ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆಗಳನ್ನು ಒಂದೆಡೆ ತರುವ ಮಹಾ ಸಂಗಮವೇ ಸೇವಾ ಸಂಗಮ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.