ಧಾರವಾಡ : ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ವತಿಯಿಂದ ’ಆಹಾರದ ರಾಜಕೀಯ’ ವಿಶೇಷ ಉಪನ್ಯಾಸ ಹಾಗೂ ಸಂವಾದವನ್ನು ಬುಧವಾರ, 20 ನೇ ಸೆಪ್ಟೆಂಬರ್, 2017 ಸಂಜೆ 6.30 ಕ್ಕೆ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ, ಧಾರವಾಡ ಇಲ್ಲಿ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಶ್ರೀ ಕೆ.ಸಿ. ರಘು – ಆಹಾರ ತಂತ್ರಜ್ಞಾನಿ, ಚಿಂತಕ, ಅಂಕಣಕಾರ, ಬೆಂಗಳೂರು ಇವರು ಪಾಲ್ಗೊಳ್ಳಲಿದ್ದಾರೆ.
ನಿರೋಗಿಯಾಗ ಬಯಸುವವರು ಹಾಗೂ ಆಹಾರದ ವಿಷಯದಲ್ಲಿ ಗೊಂದಲಗಳಿರುವವರು ಮತ್ತು ಆಹಾರದ ಹಿಂದಿರುವ ರಾಜಕೀಯ ತಿಳಿಯ ಬಯಸುವವರಿಗೂ ಭಾಗವಹಿಸುವಂತೆ ತಮ್ಮ ಗೆಳೆಯರ ಬಳಗಕ್ಕೆ ಮಾಹಿತಿ ನೀಡಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ 9886521664, 9480248486, 9449454972 ಸಂಪರ್ಕಿಸಬಹುದು.
ನಗರಕ್ಕೆ ಬಂದವರು ಅಂಕಣಕ್ಕಾಗಿ – ಕೆ.ಸಿ. ರಘು ಅವರ ಸಂಕ್ಷಿಪ್ತ ಪರಿಚಯ :
ಹೆಸರಾಂತ ಆಹಾರ ತಂತ್ರಜ್ಞಾನಿ. ಆಹಾರ ಮತ್ತು ಪೌಷ್ಟಿಕತೆ ಕುರಿತ ಪಾಕ್ಷಿಕವನ್ನು ದಶಕಗಳಿಂದ ಸಂಪಾದಿಸುತ್ತಿರುವ ಖ್ಯಾತ ಸಂಪಾದಕ. ಸಿಟಿ ಟುಡೇ ಪತ್ರಿಕೆಗೆ ವಿಜ್ಞಾನ ವಿಷಯವಾಗಿ, ಆರೋಗ್ಯ ವಿಷಯವಾಗಿ ಕನ್ನಡದ ಬಹುತೇಕ ದಿನ ಪತ್ರಿಕೆಗಳಿಗೆ ಅಂಕಣ ಬರೆದು, ಶ್ರೀಸಾಮಾನ್ಯರಿಗೆ ಆಹಾರ ಮತ್ತು ಆರೋಗ್ಯ ಕುರಿತಾಗಿ ತಿಳಿವಳಿಕೆ ಮೂಡಿಸುತ್ತಿರುವ ಸಾಮಾಜಿಕ ಕಳಕಳಿಯ ವಿಜ್ಞಾನಿ.
ಕನ್ನಡದ ಬಹುತೇಕ ಸುದ್ದಿ ವಾಹಿನಿಗಳ ಮೂಲಕ ಮನೆ ಮಾತಾಗಿರುವ ಶ್ರೀಯುತರು, ಅನೇಕ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮತ್ತು ಸಂಶೋಧನೆ ನಡೆಸಿ, ಅಂತಾರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ ಖ್ಯಾತಿ ಇವರದ್ದು.
ದೇಸಿ ಆಹಾರ ಪದ್ಧತಿಯ ಮಹತ್ವ, ಆಹಾರದ ಹಿಂದಿರುವ ರಾಜಕೀಯ ಮತ್ತು ಭವಿಷ್ಯದಲ್ಲಿ ನಮ್ಮ ನಿಲುವೇನು? ಎಂಬ ವಿಷಯಗಳ ಮೇಲೆ ಅವರು ಬೆಳಕು ಚೆಲ್ಲುವರು.
ವಂಶಪಾರಂಪರ್ಯ ಖಾಯಿಲೆ ‘ಜೆನೆಟಿಕ್ ಡಿಸ್ಆರ್ಡರ್ಸ’ ಗಳಿಗೆ, ವಿಶೇಷ ವೈದ್ಯಕೀಯ ಆಹಾರ ಪದ್ಧತಿ ಸಿದ್ಧ ಪಡಿಸಿ, ಸಾವಯವ ಆಹಾರ ಪದಾರ್ಥ ಬಳಸಿ ಔಷಧ ರೂಪದಲ್ಲಿ ಆಹಾರ ಕ್ರಮ ರೂಪಿಸಿದ ಹೆಗ್ಗಳಿಕೆ ಶ್ರೀ ಕೆ.ಸಿ. ರಘು ಅವರದ್ದು.
ವಿಶೇಷ ಮಕ್ಕಳ ಆರೈಕೆಗೆ ವಿಶೇಷ ಆಹಾರ ಪದ್ಧತಿ ನಿರೂಪಿಸಿರುವ ದೇಶದ ಏಕೈಕ ಕಂಪೆನಿ ಹುಟ್ಟುಹಾಕಿರುವ ಚಿಂತಕ ಕೆ.ಸಿ. ರಘು ಅವರು, ಈ ವರೆಗೆ ೧೦ ಸಾವಿರ ವಿಶೇಷ ಮಕ್ಕಳಿಗೆ ಚಿಕಿತ್ಸೆ ನೀಡಿ, ಆರೋಗ್ಯ ರೂಪಿಸಿದ ಸಾಮಾಜಿಕ ಕಳಕಳಿಯ ಉದ್ದಿಮೆದಾರ.
ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ವಯಕ್ತಿಕ ಗ್ರಂಥಾಲಯ, ಇವರ ಓದಿನ ಹಸಿವು ಮತ್ತು ಆಸಕ್ತಿಯ ಪ್ರತೀಕ. ತತ್ವಜ್ಞಾನ, ಪರಿಸರ ಮತ್ತು ಮಾನವಿಕ ನೆಲೆಯ ವಿವಿಧ ವಿಷಯಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಕೆ.ಸಿ. ರಘು, ಹನುಮನ ನಿಷ್ಠೆಯ ಕೆಲಸಗಾರರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.