ನವದೆಹಲಿ: ಇರಾನಿನ ಚಬಹಾರ್ ಬಂದರು ಭಾರತಕ್ಕೆ ದೊಡ್ಡ ವರದಾನವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಹಿಂದೆ ಪಾಕಿಸ್ಥಾನದ ಮಾರ್ಗವನ್ನು ಅನುಸರಿಸಬೇಕಿತ್ತು, ಇದು ಭಾರತಕ್ಕೆ ದೊಡ್ಡ ಕಷ್ಟವಾಗಿತ್ತು. ಆದರೆ ಒಂದು ಬಾರಿ ಚಬಹಾರ್ ಬಂದರು ನಿರ್ಮಾಣ ಕಾರ್ಯ ಮುಕ್ತಾಯವಾದರೆ ಗುಜರಾತಿನ ಕಂಡ್ಲಾ ಬಂದರಿನಿಂದ ವ್ಯವಹಾರ ನಡೆಸುವುದು ಸುಲಲಿತವಾಗಲಿದೆ ಎಂದಿದ್ದಾರೆ.
‘ಚಬಹಾರ್ ಮತ್ತು ಕಂಡ್ಲಾ ಬಂದರು ಪರಸ್ಪರ ಅಷ್ಟೊಂದು ದೂರವಿಲ್ಲ. ಮೊದಲು ಪಾಕಿಸ್ಥಾನದ ಮಾರ್ಗ ಅನುಸರಿಸಬೇಕಾದ್ದರಿಂದ ಕಷ್ಟವಾಗುತ್ತಿತ್ತು. ಆದರೀಗ ಸುಲಭವಾಗಿದೆ’ ಎಂದಿದ್ದಾರೆ.
12, 13 ತಿಂಗಳಲ್ಲಿ ಚಬಹಾರ್ ಬಂದರು ಕಾರ್ಯಾರಂಭ ಮಾಡಲಿದ್ದುಮ ಇರಾನ್ ಮತ್ತು ಅಫ್ಘಾನಿಸ್ಥಾನದೊಂದಿಗಿನ ವ್ಯವಹಾರದ ಬಾಗಿಲು ತೆರೆಯಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.