
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ‘ಭಾರತ ಮಂಟಪ’ದಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ (UPSC) ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡರು. ಈ ವೇಳೆ ಆಯೋಗದ ಶತಮಾನದ ಪರಂಪರೆಯನ್ನು ಶ್ಲಾಘಿಸಿದ ಅವರು, ಇದರ ಪ್ರಯಾಣವು ಲಕ್ಷಾಂತರ ಯುವ ಭಾರತೀಯರ ಆಕಾಂಕ್ಷೆಗಳು ಮತ್ತು ಜನರ ವಿಶ್ವಾಸದ ಸಂಕೇತವಾಗಿದೆ ಎಂದು ಬಣ್ಣಿಸಿದರು.
1926ರಲ್ಲಿ ಯುಪಿಎಸ್ಸಿ ಸ್ಥಾಪನೆಯಾಗಿ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕಳೆದ ವರ್ಷದ ಅಕ್ಟೋಬರ್ 1ರಂದು ಆರಂಭವಾದ ವರ್ಷಪೂರ್ತಿಯ ಸಂಭ್ರಮಾಚರಣೆಗಳಿಗೆ ಈ ಕಾರ್ಯಕ್ರಮವು ತೆರೆ ಎಳೆಯಿತು.
ಈ ಸಂದರ್ಭದಲ್ಲಿ ಪ್ರಧಾನಿಯವರು ಯುಪಿಎಸ್ಸಿ ಶತಮಾನೋತ್ಸವದ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿ ಹಾಗೂ ‘100 ಲ್ಯಾಂಡ್ಮಾರ್ಕ್ ಜಡ್ಜ್ಮೆಂಟ್ಸ್ – ಶೇಪಿಂಗ್ ದಿ ಪಾಲಿಸೀಸ್ ಆಫ್ ಯುಪಿಎಸ್ಸಿ ಅಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ಸ್ ಇನ್ ಇಂಡಿಯಾ’ (ಭಾರತದಲ್ಲಿ ಯುಪಿಎಸ್ಸಿ ಮತ್ತು ಸಾರ್ವಜನಿಕ ಸೇವಾ ಆಯೋಗಗಳ ನೀತಿಗಳನ್ನು ರೂಪಿಸಿದ 100 ಪ್ರಮುಖ ತೀರ್ಪುಗಳು) ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬುಧವಾರ ನಡೆದ ಘಟನೆಯೊಂದರಲ್ಲಿ ತೋರಿದ ಧೈರ್ಯಕ್ಕಾಗಿ, ಎಮಿರೇಟ್ಸ್ ಏರ್ಲೈನ್ಸ್ನ ಕಡಿಮೆ ದರದ ಅಂಗಸಂಸ್ಥೆಯಾದ ‘ಫ್ಲೈದುಬೈ’ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪ್ರಜೆ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನೂ ಶ್ಲಾಘಿಸಿದರು.
“ನಿನ್ನೆ ನಡೆದ ಘಟನೆಯಲ್ಲಿ, ಭಾರತದ ಕ್ಯಾಪ್ಟನ್ ಸ್ಮಿತ್ ಅವರು ಅಸಾಧಾರಣ ತಾಳ್ಮೆ, ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಪ್ರದರ್ಶಿಸಿದರು. ವಾಸ್ತವವಾಗಿ, ಇಸ್ರೇಲ್ ಪ್ರಧಾನ ಮಂತ್ರಿಯವರು ಇಂದು ಹೇಳಿದಂತೆ, ಒಬ್ಬ ಭಾರತೀಯ 9/11 ಮಾದರಿಯ ದುರಂತವೊಂದನ್ನು ತಡೆಗಟ್ಟಿದರು,” ಎಂದು ಪ್ರಧಾನಿ ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



