ಪೆರ್ಲ: ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಅಂಗವಾಗಿ ಕಾಸರಗೋಡು ಗಿಡ್ಡ ತಳಿಯಹಸುಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಂಬೋಧನೆಯ ಉದ್ದೇಶದಿಂದ ಕಾಸರಗೋಡು ಬ್ರೀಡ್ ಕನ್ಸರ್ವೇಶನ್ಚಾರಿಟೇಬಲ್ ಟ್ರಸ್ಟ್ ಕೈಗೆತ್ತಿಕೊಂಡಿರುವ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದಲೋಕಾರ್ಪಣೆ ಸಮಾರಂಭ ‘ಸುರಭಿ ಸಮರ್ಪಣಮ್’ ಮೇ 21 ರಿಂದ 23 ತನಕ ವಿವಿಧ ಕಾರ್ಯಕ್ರಮಗಳೊಂದಿಗೆಗೋಶಾಲೆಯ ನಿವೇಶನದಲ್ಲಿ ಜರಗಲಿದೆ.
ಮೇ 21 ರಂದು ಬೆಳಗ್ಗೆ ಶ್ರೀಮಹಾಗಣಪತಿ ಹವನ, ಶ್ರೀಮಹಾಲಿಂಗೇಶ್ವರದೇವಾಲಯದಲ್ಲಿ ರುದ್ರಸೇವೆ ಜರಗಲಿದ್ದು ನಂತರ ಬ್ರಹ್ಮಶ್ರೀ ರವೀಶ ತಂತ್ರಿಗಳು ಕುಂಟಾರು ಇವರ ನೇತೃತ್ವದಲ್ಲಿಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ಮತ್ತು ಸುವಸ್ತು ಸ್ವೀಕಾರ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದಆರಂಭವಾಗುವ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಶ್ರೀ ವಿಷ್ಣುಮೂರ್ತಿ ಭಜನಾ ಸಂಘ ಇಡಿಯಡ್ಕ, ಶ್ರೀಅಯ್ಯಪ್ಪಸ್ವಾಮಿ ಭಜನಾ ಸಂಘ ಬಣ್ಪುತಡ್ಕ, ಶ್ರೀ ಗಣೇಶ ಭಜನಾ ಸಂಘ ಬೆದ್ರಂಪಳ್ಳ, ಶ್ರೀ ವಾಗ್ದೇವಿ ಭಜನಾ ಸಂಘನಲ್ಕ, ಶ್ರೀ ಶಾರದಾಂಬಾ ಭಜನಾ ಸಂಘ ಬೇಂಗಪದವು, ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘಮಣಿಯಂಪಾರೆ, ಓಜ ಸಾಹಿತ್ಯ ಕೂಟ, ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ಬಂಗ್ರಮಂಜೇಶ್ವರ, ಶ್ರೀಮಹಾಲಿಂಗೇಶ್ವರ ಭಜನಾ ಸಂಘ ಬಜಕೂಡ್ಲು ತಂಡದ ಸದಸ್ಯರು ಭಾಗವಹಿಸಲಿದ್ದಾರೆ. ಅಪರಾಹ್ನ 4 ಗಂಟೆಗೆಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಪರಿಸರದಿಂದ ಗೋಜ್ಯೋತಿ ರಥದೊಂದಿಗೆ ಹೊರೆಕಾಣಿಕೆ ಮೆರವಣಿಗೆನಡೆಯಲಿದ್ದು ಗೋಶಾಲೆಯ ಲೋಕಾರ್ಪಣೆಯ ಅಂಗವಾಗಿ ಸಾಯಂಕಾಲ 5 ಗಂಟೆಗೆ ಸಾಮೂಹಿಕ ಪ್ರಾರ್ಥನೆ,ಭವನ ಪರಿಗ್ರಹ, ಸಪ್ತಶುದ್ಧಿ, ಸ್ವಸ್ತಿ ಪುಣ್ಯಾಹ, ಋತ್ವಿಗ್ವರಣ, ರಾಕ್ಷೋಘ್ನ ಹವನ, ವಾಸ್ತುಹೋಮ, ವಾಸ್ತುಪೂಜೆ,ವಾಸ್ತುಬಲಿ, ಉದಕಶಾಂತಿ ಜಪ, ದುರ್ಗಾಪೂಜೆ ಮತ್ತು ಐಕಮತ್ಯ ಜಪ ಪ್ರಾರಂಭವಾಗಲಿದೆ. ಸಾಂಸ್ಕೃತಿಕಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನಮಂಡಳಿ ಮುಲ್ಕಿ ಇವರಿಂದ ‘ಬನತ ಬಂಗಾರ್’ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
ಮೇ 22 ರಂದು ಬೆಳಗ್ಗೆ ದೀಪಾರಾಧನೆಯೊಂದಿಗೆ ವಿಶಿಷ್ಟವಾದ ಪೂರ್ಣಮಂಡಲ ತ್ರಿಕಾಲಪೂಜೆ ಮತ್ತುಪಾರಾಯಣಗಳ ಪ್ರಾರಂಭ ನಡೆಯಲಿದ್ದು ನಂತರ ಅಷ್ಟೋತ್ತರ ಶತ ನಾಳಿಕೇರ ಫಲಾತ್ಮಕ ಅಷ್ಟದ್ರವ್ಯಮಹಾಗಣಪತಿ ಹವನ ಪ್ರಾರಂಭವಾಗಲಿದೆ. ನಂತರ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಗೋಪೂಜೆ ಮತ್ತುಗೋದಾನ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಗೋಪಾಲಕೃಷ್ಣನಿಗೆ ಸುವಸ್ತು ಸಮರ್ಪಣೆ, ಗೋಮಾತೆಗೆ ತಿಲಸಾರಮತ್ತು ಫಲಸಾರ ಸಮರ್ಪಣೆ, ನವಗ್ರಹರಿಗೆ ನವಧಾನ್ಯ ಸಮರ್ಪಣೆ ಕಾರ್ಯಕ್ರಮ ಜರಗಲಿದೆ. ಈ ಸಂದರ್ಭದಲ್ಲಿರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸವಾಣಿ ಸಂಕೀರ್ತನೆ ನಡೆಯಲಿದೆ.
ಪೂರ್ವಾಹ್ನ 10 ಗಂಟೆಗೆ ಶೂನ್ಯ ಬಂಡವಾಳ ಕೃಷಿ ಪದ್ಧತಿ, ಕಾಸರಗೋಡು ಗೋತಳಿ ಸಾಕಣೆ, ಔಷಧಿ ಮತ್ತು ಕೃಷಿಎಂಬ ವಿಷಯಗಳ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕೋ–ಓಪರೇಟಿವ್ ಸೊಸೈಟಿಯ ಜೋಯಿಂಟ್ರೆಜಿಸ್ಟ್ರಾರ್ ವಿ. ಎಸ್. ವಲ್ಸರಾಜ್ ಉದ್ಘಾಟಿಸಲಿದ್ದಾರೆ. ಕೋ–ಓಪರೇಟಿವ್ ಸೊಸೈಟಿಯ ಸಹಾಯಕ ರೆಜಿಸ್ಟ್ರಾರ್ಪಿ. ಮಹಮ್ಮದ್ ಬಶೀರ್ ಇವರ ಉಪಸ್ಥಿತಿಯಲ್ಲಿ ಪಶುವೈದ್ಯ ಡಾ. ವೈ. ವಿ. ಕೃಷ್ಣಮೂರ್ತಿ, ಶೂನ್ಯ ಬಂಡವಾಳಕೃಷಿಕರಾದ ಜಯರಾಮ್ ಗೋಪಾಲ್, ಉಬರು ಕೇಪು ಹಲಸು ಸ್ನೇಹಿ ಕೂಟದ ಅಧ್ಯಕ್ಷ ವೆಂಕಟಕೃಷ್ಣ ಶರ್ಮಮುಳಿಯ ವಿಚಾರ ಮಂಡನೆ ನಡೆಸಲಿದ್ದಾರೆ. 11 ಗಂಟೆಗೆ ವಸೋರ್ಧಾರಾ ಪೂರ್ವಕ ಮಹಾಗಣಪತಿ ಹವನಪೂರ್ಣಾಹುತಿ ನಡೆಯಲಿದ್ದು ನಂತರ ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ 4 ಗಂಟೆಗೆ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಾಹಾಸ್ವಾಮಿಗಳವರ ಆಗಮನದ ಸಂದರ್ಭದಲ್ಲಿ ಪೂರ್ಣಕುಂಭಸ್ವಾಗತ, ಧೂಳೀಪಾದ ಪೂಜೆ ನಡೆಯಲಿದೆ. ಸಾಯಂಕಾಲ 5.30ಕ್ಕೆ ಕು| ಶ್ರದ್ಧಾ ನಾಯರ್ಪಳ್ಳ ಇವರಿಂದಹರಿಕಥೆಯನ್ನು ಏರ್ಪಡಿಸಲಾಗಿದೆ. ಸಾಯಂಕಾಲ 6.45ಕ್ಕೆ ನಡೆಯುವ ಶ್ರೀಕರಾರ್ಚಿತ ದೇವತಾ ಪೂಜೆಯ ನಂತರತ್ರಿಕಾಲ ಪೂಜಾಂಗ ಚಂಡಿಕಾ ಹವನ ಪೂರ್ಣಾಹುತಿ, ಶ್ರೀ ಪ್ರಹ್ಲಾದ ಆಚಾರ್ಯ ಬೆಂಗಳೂರು ಇವರಿಂದ’ಪುಣ್ಯಕೋಟಿ’ – ಶ್ಯಾಡೋ ಪ್ಲೇ, ನೂತನ ಪರಿಕಲ್ಪನೆಯ ಗೋವಿಂದ ಗೋಮಾತೆಗೆ ಅನಂತ ನೀರಾಜನಕಾರ್ಯಕ್ರಮ ನಡೆಯಲಿದ್ದು ಸುಮಾರು 1000 ಮಂದಿ ಈ ಸಂದರ್ಭದಲ್ಲಿ ಕಾಸರಗೋಡು ತಳಿಯ ಹಸುವಿನತುಪ್ಪದಿಂದ ಗೋಮಾತೆಗೆ ಆರತಿ ಎತ್ತಲಿದ್ದಾರೆ. ನಂತರ ತ್ರಿಕಾಲ ಪೂಜಾ ಮಂಗಳಾರತಿ, ಅಷ್ಟಾವಧಾನ ಸೇವೆ,ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನ ನಡೆಯಲಿದೆ.
ಮೇ 23ರಂದು ಬೆಳಗ್ಗೆ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಗೋಪೂಜೆ, ಗೋದಾನ, ಕೃಷ್ಣಾರ್ಪಣ, ನವಗ್ರಹರಿಗೆನವಧಾನ್ಯ ಸಮರ್ಪಣೆ, ನವಗ್ರಹ ಶಾಂತಿ ಪ್ರಾರಂಭ, ಗೋಪಾಲಕೃಷ್ಣ ಹವನ ಪ್ರಾರಂಭ, ಶ್ರೀಕರಾರ್ಚಿತ ದೇವತಾಪೂಜೆ, ಶ್ರೀಗುರುಪಾದುಕಾ ಪೂಜೆ, ಶ್ರೀಗುರುಭಿಕ್ಷಾ ಸೇವೆ, ಹವನಗಳ ಪೂರ್ಣಾಹುತಿಯ ನಂತರ ಕರ್ಕಾಟಕ ಲಗ್ನಸುಮುಹೂರ್ತದಲ್ಲಿ ‘ಸುರಭಿ ಸಮರ್ಪಣಮ್’ ಅಂಗವಾಗಿ ಗೋಶಾಲೆ ಮತ್ತು ಕಾರ್ಯಾಲಯ ಲೋಕಾರ್ಪಣೆನಡೆಯಲಿದೆ. 11.30ಕ್ಕೆ ಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮೀಜಿಗಳು, ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿಗಳು ಕುಂಟಾರು ಇವರಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಶಾಸಕ ಅಬ್ದುಲ್ ರಜಾಕ್, ಕಾಸರಗೋಡುಜಿಲ್ಲಾ ಪಂಚಾಯತು ಅಧ್ಯಕ್ಷೆ ಶ್ರೀಮತಿ ಪಿ.ಪಿ. ಶಾಮಲಾದೇವಿ, ಜಿಲ್ಲಾ ಪಂಚಾಯತು ಸದಸ್ಯ ಶಂಕರ ರೈ,ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷೆ ಶ್ರೀಮತಿ ಮುಮ್ತಾಜ಼್ ಸಮೀರಾ, ಮಂಜೇಶ್ವರ ಬ್ಲಾಕ್ ಪಂಚಾಯತುಸದಸ್ಯ ಶಂಕರ ಎಂ ಎಸ್, ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ ಎಸ್, ಎಣ್ಮಕಜೆ ಗ್ರಾಮಪಂಚಾಯತು ಸದಸ್ಯೆ ಶ್ರೀಮತಿ ರಾಜೇಶ್ವರಿ, ಉದ್ಯಮಿ ವಸಂತ ಪೈ ಬದಿಯಡ್ಕ, ಕರ್ನಾಟಕ ಬ್ಯಾಂಕ್ ಹಿರಿಯಪ್ರಬಂಧಕ ಜಯರಾಮ ಹಂದೆ, ಮಲಯಾಳಂ ಚಲನಚಿತ್ರ ನಿರ್ಮಾಪಕ ಜಿ ಸುರೇಶ್ ಕುಮಾರ್, ಮಲಯಾಳಂಚಲನಚಿತ್ರ ನಟಿ ಶ್ರೀಮತಿ ಮೇನಕಾ ಸುರೇಶ್, ಮಾಧ್ಯಮ ಸಲಹೆಗಾರ ವಿಜಯಕೃಷ್ಣ, ಶ್ರೀಮಹಾಗಣಪತಿದೇವಸ್ಥಾನ ಇಡಗುಂಜಿಯ ಧರ್ಮದರ್ಶಿ ಜಿ.ಜಿ. ಸಭಾಹಿತ, ಸಿಗಂದೂರು ಶ್ರೀ ಚೌಡೇಶ್ವರೀ ಕ್ಷೇತ್ರದ ಪ್ರಧಾನ ಅರ್ಚಕವೇ.ಮೂ. ಶೇಷಗಿರಿ ಭಟ್, ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಕೆ. ಚಂದ್ರನ್ ಕೊರಂಬತ್, ಯೋಜನಾನಿರ್ದೇಶಕ ಕೆ. ಶಿವರಾಮಕೃಷ್ಣನ್, ಕಾಸರಗೋಡು ಎಡಿಎ ಅಬೂಬಕ್ಕರ್, ಜಿಲ್ಲಾ ಮೃಗಸಂರಕ್ಷಣಾಧಿಕಾರಿ ಬಾಬುಥೋಮಸ್, ‘ಆತ್ಮಾ’ ದ ಸಹಾಯಕ ಯೋಜನಾ ನಿರ್ದೇಶಕರಾದ ಡಾ. ಜಯಪ್ರಕಾಶ್ ಲಾಡ ಮತ್ತು ಜೋನ್ಅಲೆಕ್ಸ್, ಎಣ್ಮಕಜೆ ಕೃಷಿ ಅಧಿಕಾರಿ ಮೀರಾ, ಪಶುವೈದ್ಯಾಧಿಕಾರಿ ಡಾ. ವೈಖರಿ, ಕೊಲ್ಲೂರು ಶ್ರೀ ಮೂಕಾಂಬಿಕಾದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೃಷ್ಣಪ್ರಸಾದ ಅಡ್ಯಂತಾಯ, ಗುಜರಾತಿನ ರಾಜ್ ಟ್ರೇಡರ್ಸ್ ಸಂಸ್ಥೆಯಮನೀಶ್, ಮಂಗಳೂರಿನ ಉದ್ಯಮಿ ಯುಧಿಷ್ಠಿರ ಶರ್ಮ, ಕ್ಯಾಂಪ್ಕೋ ಸಂಸ್ಥೆಯ ಮಾಜಿ ಆಡಳಿತ ನಿರ್ದೇಶಕ ಎ.ಎಸ್. ಭಟ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಸಂಯೋಜಕರಾದ ಶ್ರೀಮತಿ ಸಂಧ್ಯಾ ವಿ ಶೆಟ್ಟಿ,ಸಮಾಜ ಸೇವಕ ಅಶೋಕ್ ಕುಮಾರ್ ಹೊಳ್ಳ ಕುಬಣೂರು, ಕ್ಯಾಂಪ್ಕೋ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರಭಂಡಾರಿ ಮತ್ತು ಹುಬ್ಬಳ್ಳಿ ಅನನ್ಯ ಫೀಡ್ಸ್ ಸಂಸ್ಥೆಯ ಡಿ. ಗೋವಿಂದ ಭಟ್ ಮುಖ್ಯ ಅತಿಥಿಗಳಾಗಿಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.