ಪೆರ್ಲ: ಕಾಸರಗೋಡು ತಳಿ ಹಸುಗಳ ಸಂರಕ್ಷಣೆಯ ದೃಷ್ಟಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಬಜಕೂಡ್ಲು ‘ಅಮೃತಧಾರಾ’ ಗೋಶಾಲೆಯ ನೂತನ ಕಟ್ಟಡದ ‘ಸುರಭಿ ಸಮರ್ಪಣಮ್’ ಕಾರ್ಯಕ್ರಮದ ವಿಶೇಷ ಆಕರ್ಷಣೆ ‘ವಿಷ್ಣು’ ಹೋರಿ.
ಏಳು ವರ್ಷದ ಈ ಹೋರಿ ಈಗಾಗಲೇ 76 ಬಾರಿ ಕಾಸರಗೋಡು ತಳಿಯ ವಿವಿಧ ಗೋವುಗಳಿಗೆ ವೀರ್ಯ ದಾನವನ್ನು ಮಾಡಿದ್ದು ತಳಿ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ಕೈಗೊಂಡಿದೆ. ಕಾಸರಗೋಡು ತಳಿಯ ಹೋರಿಗೆ ಇರಬೇಕಾದ ಎಲ್ಲ ಗುಣಲಕ್ಷಣಗಳು ಎಳವೆಯಲ್ಲಿಯೇ ಈ ಹೋರಿಗೆ ಇದ್ದುದರಿಂದ ಸಹಜ ಗರ್ಭಧಾರಣೆಗಾಗಿ ಆಯ್ಕೆ ಮಾಡಿಲಾಗಿದೆ. ಹಿಂದಿನ ಕಾಲದಲ್ಲಿ ಗರ್ಭಧಾರಣೆಗೆ ಸಿದ್ಧವಾಗಿದ್ದ ಹಸುಗಳನ್ನು ಹೋರಿ ಇದ್ದಲ್ಲಿಗೆ ಕೊಂಡೊಯ್ಯಬೇಕಾಗುತ್ತಿತ್ತು. ಇದು ತ್ರಾಸದಾಯಕವೂ ಆಗಿತ್ತು. ಆದರೆ ಈ ವ್ಯವಸ್ಥೆಯಲ್ಲಿ ಅಗತ್ಯದ ಬದಲಾವಣೆಯನ್ನು ತಂದು ಕಾಸರಗೋಡು ಗೋವುಗಳು ಇರುವಲ್ಲಿಗೆ ಹೋಗಿ ಗರ್ಭಧಾರಣೆ ಮಾಡಲು ಅನುಕೂಲವಾಗುವಂತೆ ಸಂಚಾರಿ ವಾಹನದ ವ್ಯವಸ್ಥೆಯನ್ನು ಉಪಯೋಗಿಸಿ ಹೋರಿಯನ್ನು ಸಜ್ಜುಗೊಳಿಸಿರುವುದು ಹೆಚ್ಚು ಅನುಕೂಲಕರವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಮಹಾಮಂಡಲ ಅಧ್ಯಕ್ಷ, ಪಶುವೈದ್ಯ ಡಾ|ವೈ.ವಿ.ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.
ಕೇವಲ ದೇಶೀಯ ತಳಿಯ ಉಳಿವಿಗಾಗಿ ಈ ವ್ಯವಸ್ಥೆಯನ್ನು ಏರ್ಪಡಿಸಿದ್ದು, ಮಿಶ್ರ ತಳಿಗಳಿಗೆ ಈ ಸೌಕರ್ಯವನ್ನು ನಿರಾಕರಿಸಲಾಗಿದೆ. ಗೋಶಾಲೆಯ ನೂತನ ಯೋಜನೆಗಳಲ್ಲಿ ಒಂದಾಗಿರುವ ಈ ವ್ಯವಸ್ಥೆಯಲ್ಲಿ ಕೇವಲ ಮೂರು ಹಸುಗಳಿಗೆ ಮಾತ್ರ ಪ್ರಥಮ ಪ್ರಯತ್ನದಲ್ಲಿ ಯಶಸ್ಸು ಕಂಡಿರಲಿಲ್ಲ. ಅಂದರೆ ತೊಂಭತ್ತೈದು ಶೇಕಡಾಕ್ಕಿಂತಲೂ ಅಧಿಕ ಧನಾತ್ಮಕ ಫಲಿತಾಂಶವನ್ನು ‘ವಿಷ್ಣು’ ಹೋರಿ ನೀಡಿದೆ. ಗೋಸೇವಾ ಕಾರ್ಯಕರ್ತರಾದ ಗಣೇಶ ಮುಣ್ಚಿಕ್ಕಾನ (9496420431) ಮತ್ತು ಗಣರಾಜ ಕಡಪ್ಪು (8281173525) ಈ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು ಮೇ 21 ರಿಂದ 23ರ ತನಕ ಬಜಕೂಡ್ಲು ಗೋಶಾಲೆಯಲ್ಲಿ ನಡೆಯುವ ‘ಸುರಭಿ ಸಮರ್ಪಣಮ್’ ಕಾರ್ಯಕ್ರಮದಲ್ಲಿ ಈ ಹೋರಿಯ ಉಪಸ್ಥಿತಿಯಲ್ಲಿ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.