ಅಮೆರಿಕಾದಲ್ಲಿ ನಡೆದ ಮೊದಲ ಜಾಗತಿಕ ರೊಬೋಟಿಕ್ಸ್ ಒಲಿಂಪ್ಯಾಡ್ ಸ್ಪರ್ಧೆಯಲ್ಲಿ 7 ಮಂದಿ ಭಾರತೀಯ ವಿದ್ಯಾರ್ಥಿಗಳ ತಂಡ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವಿಶ್ವದ 157 ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಮುಂಬಯಿ ಮೂಲದ ವಿದ್ಯಾರ್ಥಿಗಳ ತಂಡ ಝಾಂಗ್ ಹೆಂಗ್ ಎಂಜಿನಿಯರಿಂಗ್ ಡಿಸೈನ್ ಅವಾರ್ಡ್ನಲ್ಲಿ ಬಂಗಾರ ಮತ್ತು ಗ್ಲೋಬಲ್ ಚಾಲೆಂಜ್ ಮ್ಯಾಚ್ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
ಈ ತಂಡ ತಮ್ಮ ರೊಬೋಟ್ಗೆ ‘ನ್ಯೂಟ್ರಿನೋ’ ಎಂದು ಹೆಸರಿಟ್ಟಿದ್ದು, ಇದು ಕೇಸರಿ ಮತ್ತು ನೀಲಿ ಬಾಲ್ಗಳನ್ನು ನೆಲದಿಂದ ಹೆಕ್ಕುತ್ತದೆ ಮತ್ತು ಅನುಗುಣವಾಗಿ ಅದನ್ನು ವಿಂಗಡಿಸುತ್ತದೆ. 2.5 ಅಡಿ ಹತ್ತುವ ಸಾಮರ್ಥ್ಯವನ್ನೂ ಹೊಂದಿದೆ.
ತಂಡವನ್ನು ಮುನ್ನಡೆಸಿದ್ದು 15 ವರ್ಷದ ರಹೇಶ್. ಈ ತಂಡದ ಅತೀ ಕಿರಿಯ ಸದಸ್ಯನೂ ಹೌದು. ಉಳಿದಂತೆ ಅದೀವ್ ಶಾ, ಹರ್ಷ್ ಭಟ್, ವಸ್ತಿನ್, ಅಧ್ಯನ್, ತೇಜಸ್, ರಾಘವ್ ತಂಡದಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.