ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇಲ್ಲಿನ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು ಶೇ 98 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 120 ವಿದ್ಯಾರ್ಥಿಗಳ ಪೈಕಿ 13 ಜನ 90%ಕ್ಕಿಂತ ಅಧಿಕ, 15 ಜನ 85%ಕ್ಕಿಂತ ಅಧಿಕ, ಹಾಗೂ ಉಳಿದ ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸತತ ಐದನೇ ಬಾರಿ 100% ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಒಟ್ಟು 66 ವಿದ್ಯಾರ್ಥಿಗಳ ಪೈಕಿ 65 ಮಂದಿ ಉತ್ತೀರ್ಣಗೊಂಡು 98% ದಾಖಲಾಗಿದೆ, ವಿಜ್ಞಾನ ವಿಭಾಗದಲ್ಲಿ ಶೇ೯೦ ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ : ಪ್ರಜ್ವಲ್ 575, ಸ್ವಾತಿ 569, ಇಂದುಶ್ರೀ 568, ಪೂಜಾ 567, ಸಚಿನ್ ಎ.ಬಿ 565, ಲಾವಣ್ಯ 559, ಕಿರಣ್ 557, ವರ್ಷಾ 556, ಜ್ಯೋತಿ ಮಾಧವ ಭಟ್ 554, ಆನಂದ ನಾಯಕ್ 554, ಪ್ರಜ್ವಲ್ ಕೆ. 548, ಹರ್ಷಿತಾ 546, ರಶಿತಾ ಸಿ.ಕೆ 541 ಅಂಕ ಗಳಿಸಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ : ಪೃಥ್ವಿಶೈಲಾ 568, ಸ್ವಾತಿ ಆಚಾರ್ಯ 565, ಬಿಂದುಶ್ರೀ 550, ಧನ್ವಿಶ್ ಕುಮಾರ್ 545 ಅಂಕಗಳನ್ನುಗಳಿಸಿದ್ದಾರೆ.
ಲೆಕ್ಕಶಾಸ್ತ್ರ ವಿಷಯದಲ್ಲಿ ಐದು ಮಂದಿ ವ್ಯವಹಾರ ಅಧ್ಯಯನದಲ್ಲಿ 4 ಮಂದಿ, ಇತಿಹಾಸ ಮತ್ತು ಗಣಕ ವಿಜ್ಞಾನ ವಿಷಯದಲ್ಲಿ ಇಬ್ಬರು 100 ಅಂಕಗಳನ್ನು ಗಳಿಸಿರುತ್ತಾರೆ. ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಇಲ್ಲಿ ದಾಖಲಾಗುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರೂ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ವಿಶೇಷತೆಯಾಗಿದೆ.
ವಿದ್ಯಾರ್ಥಿಗಳ ಹಾಗೂ ಶಿಕ್ಷಕ ವೃಂದದವರ ಸಾಧನೆಗೆ ಸಂಸ್ಥೆಯ ಸಂಚಾಲಕ ಡಾ. ಪ್ರಭಾಕರ ಭಟ್, ಅಧ್ಯಕ್ಷ ನಾರಾಯಣ ಸೋಮಯಾಜಿ ಅಭಿನಂದನೆ ಸಲ್ಲಿಸಿದ್ದಾರೆ. ಪದವಿಪೂರ್ವ ವಿಭಾಗಕ್ಕೆ ದಾಖಲಾತಿ ಆರಂಭಗೊಂಡಿರದಿದ್ದು ಭರದಿಂದ ಪ್ರವೇಶಾತಿಗಳು ನಡೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.