ಮುಂಬಯಿ: ಇತ್ತೀಚಿಗೆ ರೈಲ್ವೇಯು ಮುಂಬಯಿ 14 ಸ್ಟೇಶನ್ಗಳಲ್ಲಿ ಒಂದು ರೂಪಾಯಿ ಕ್ಲಿನಿಕ್ನ್ನು ಆರಂಭಿಸಿದೆ. ಈ ವೈದ್ಯಕೀಯ ಸೇವೆ ಇದೀಗ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರ ಕೈಹಿಡಿಯುತ್ತಿದೆ.
ಇತ್ತೀಚಿಗಷ್ಟೇ ತಿತ್ವಾಲ್ನಿಂದ ದಾದರ್ಗೆ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ಈ ಕ್ಲಿನಿಕ್ನ ವೈದ್ಯರು ಆಕೆಯ ನೆರವಿಗೆ ಧಾವಿಸಿ ಡೆಲಿವರಿ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರನ್ನೂ ಸುರಕ್ಷಿತಗೊಳಿಸಿದ್ದಾರೆ.
ಮೇ ೨೦ರಂದು ಆರಂಭಗೊಂಡ ಈ ಕ್ಲಿನಿಕ್ಗಳು ಇದುವರೆಗೆ ಸುಮಾರು 13 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಪ್ರತಿನಿತ್ಯ 10 ತುರ್ತು ಪ್ರಕರಣಗಳನ್ನು ಇಲ್ಲಿಗೆ ಬರುತ್ತವೆ. ಇವರಿಗೆ ಎಕ್ಸ್ ರೇ, ಎಂಆರ್ಐಗಳನ್ನು ಮಾಡಲಾಗುತ್ತದೆ.
50-60 ಜನ ನಿತ್ಯ ಬಂದು ರಕ್ತ ಪರೀಕ್ಷೆ, ಬಿಪಿ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸುತ್ತಾರೆ. ಕೇವಲ 1 ರೂಪಾಯಿಗೆ ಈ ಎಲ್ಲಾ ಸೌಲಭ್ಯ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.