ಪೆರ್ಲ: ‘ಗೋವಿಂದ ಗೋಮಾತೆಗೆ’ ಸಂದೇಶವನ್ನು ಸಾರುವ ಹಾಗೂ ಕಾಸರಗೋಡು ತಳಿ ಗೋವಂಶದ ಸಂರಕ್ಷಣೆ, ಸಂವರ್ಧನೆ, ಸಂಶೋಧನೆಗೆ ಮೀಸಲಾಗಿರುವ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಸುಸಜ್ಜಿತ ಗೋಲೋಕದ ಲೋಕಾರ್ಪಣೆಯ ಪೂರ್ವ ಭಾವಿಯಾಗಿ ಸಂಚರಿಸುವ ಗೋಜ್ಯೋತಿ ರಥಕ್ಕೆ ಕುಂಬ್ಡಾಜೆಯ ಪೋಡಿಪ್ಪಳ್ಳದಲ್ಲಿ ಭವ್ಯ ಸ್ವಾಗತ ಸಿಕ್ಕಿತು.
ಗೋಮಾತೆ ಮತ್ತು ಶ್ರೀಕೃಷ್ಣನಿಗೆ ದೇಶಿ ತುಪ್ಪ ಬಳಸಿದ ಆರತಿಯನ್ನು ಗೋಪ್ರೆಮಿಗಳು ಬೆಳಗಿದರು. ‘ಗೋವಿನ ಕುರಿತು ನಿರಂತರವಾಗಿ ಅರಿವು ಮೂಡಿಸಿದವರು ರಾಘವೇಶ್ವರ ಶ್ರೀಗಳು ಮಾತ್ರ. ನಮ್ಮತನದ ಅರಿವಾಗ ಬೇಕಿದ್ದರೆ ಕಾಮಧೇನುವಿನ ಉಳಿಸುವಿಕೆಯಿಂದ ಮಾತ್ರ ಸಾಧ್ಯ. ಮನುಷ್ಯ ದೇಹಕ್ಕೆ ಹೊಕ್ಕ ವಿಷವನ್ನು ಬಿಟ್ಟು ಕೊಡುವುದಿಲ್ಲ. ದೇಶಿಯ ಗೋವಿನ ಉತ್ಪನ್ನವಾದ ಪಂಚಗವ್ಯಕ್ಕೆ ಮಾತ್ರ ಆ ಶಕ್ತಿ ಇದೆ. ರೋಗಿಗಳು ಇಲ್ಲದ ಮನೆ ಇಲ್ಲ ಎನ್ನುವುದು ಬದಲಾಗ ಬೇಕಾದರೆ ಗೋವನ್ನು ಉಳಿಸಬೇಕು. ಅವುಗಳು ಸ್ವತಂತ್ರವಾಗಿ ಓಡಾಡಬೇಕು’ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ಮಂಡಲದ ಬೌಧಿಕ್ ಪ್ರಮುಖ್ ಶ್ರೀಧರ ಭಟ್ ಕುದಿಂಗಿಲ ಪ್ರವಚನ ನೀಡುತ್ತ ನುಡಿದರು.
ಶ್ರೀ ಶಂಕರ ಮಾಸ್ತರ್ ರಥಯಾತ್ರೆಗೆ ಸ್ವಾಗತ ನೀಡಿದರು. ಕಳೆಯತ್ತೊಡಿ ನರಸಿಂಹ ಭಟ್ ಧನ್ಯವಾದ ನೀಡಿದರು. ಮಾನಸ ಮುಂಚಿಕಾನ ಗೋ ಗೀತೆ ಹಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.