ಹುಬ್ಬಳ್ಳಿ: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಈಗ ಐಸಿಐಸಿಐ ಪ್ರು ಹಾರ್ಟ/ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸಲು ವಿಶೇಷ ಸೌಲಭ್ಯವುಳ್ಳ ಉತ್ಪನ್ನವನ್ನು ತನ್ನ ವಿಮಾ ಭದ್ರತೆಯ ಮೊತ್ತವಾಗಿ ಗ್ರಾಹಕರಿಗೆ ಒದಗಿಸಲಿದೆ. ಕ್ಯಾನ್ಸರ್ ಅಥವಾ ಹೃದಯ ಸಮಸ್ಯೆ ಇರುವುದು ತಪಾಣೆಯಿಂದ ಸಾಬೀತಾದಲ್ಲಿ ಇದು ದೃಢಪಡಲಿದೆ. ಅಂದರೆ, ಗ್ರಾಹಕರಿಗೆ ಅಗತ್ಯ ಚಿಕಿತ್ಸೆಯನ್ನು ಪಡೆಯುವ ನಿಟ್ಟಿನಲ್ಲಿ ಅಗತ್ಯ ಹಣಕಾಸು ನೆರವು ಪಡೆಯುವ ಬೆಂಬಲ ಮತ್ತು ಸ್ವಾತಂತ್ರ್ಯವಿದೆ.
ಕ್ಯಾನ್ಸರ್ ಅಥವಾ ಹೃದ್ರೋಗ ಸಮಸ್ಯೆ ಇರುವುದು ತಪಾಸಣೆಯಲ್ಲಿ ದೃಢಪಟ್ಟ ನಂತರವೂ ಪಾಲಿಸಿಯೂ ಮುಂದುವರಿಯಲಿದ್ದು, ಗ್ರಾಹಕರು ಭವಿಷ್ಯದಲ್ಲಿ ಯಾವುದೇ ರೀತಿಯ ಪ್ರೀಮಿಯಂ ಪಾವತಿಸುವ ಅಗತ್ಯ ಇರುವುದಿಲ್ಲ.
ಗ್ರಾಹಕರು ತಮಗೇ ಬೇಕಾದ ರೀತಿಯ ಆಯ್ಕೆಯನ್ನು ಅಂದರೆ ಹೃದ್ರೋಗ ಅಥವಾ ಕ್ಯಾನ್ಸರ್ ವಿರುದ್ಧದ ರಕ್ಷಣೆಯ ಆಯ್ಕೆಯನ್ನು ಪಡೆಯಬಹುದು. ಅಥವಾ ಎರಡೂ ಆಯ್ಕೆಗಳನ್ನು ಹೊಂದಿದೆ.
ಹೃದಯ ಸಂಬಂಧಿ ಮತ್ತು ಕ್ಯಾನ್ಸರ್ ಭಾರತೀಯರಲ್ಲಿ ಶೇ 50ರಷ್ಟು ಸಾವಿಗೆ ಕಾರಣವಾಗುತ್ತವೆ. ವೈಧ್ಯಕೀಯ ಅಧ್ಯಯನದ ಪ್ರಕಾರ, ಜಗತ್ತಿನಲ್ಲಿಯೇ ಹೃದಯಾಘಾತದ ಪ್ರಕರಣಗಳು ಭಾರತದಲ್ಲಿ ಅಧಿಕವಾಗಿವೆ. ಅಂದಾಜು, ಎರಡು ಲಕ್ಷ ಹೃದ್ರೋಗ ಚಿಕಿತ್ಸೆಯನ್ನು ಪ್ರತಿವರ್ಷ ಮಾಡಲಾಗುತ್ತದೆ. ಕ್ಯಾನ್ಸರ್ ಪ್ರಕರಣಗಳು 2020ರ ವೇಳೆಗೆ ಶೇ. 25ರಷ್ಟು ಹೆಚ್ಚಲಿದೆ. ಭಾರತದಲ್ಲಿ ಪತ್ತೆಯಾಗುವ ಪ್ರತಿ 13 ನೇ ಪ್ರಕರಣಗಳು ಕ್ಯಾನ್ಸರ್ ಆಗಿರುತ್ತವೆ.
ಇಂದು ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಸೌಲಭ್ಯದೊಂದಿಗೆ ಎರಡೂ ರೀತಿಯ ಸಮಸ್ಯೆಗಳನ್ನು ಪರಿಣಾಮಕಾರಿ ಯಾಗಿ ಗುಣಪಡಿಸಲು ಸಾಧ್ಯವಿದೆ. ಮೊದಲೇ ರೋಗ ಪತ್ತೆಯಾದಲಿ ರೋಗಿಗಳು ಚಿಕಿತ್ಸೆಗೆ ಅಗತ್ಯ ಹಣಕಾಸು ನೆರವು ಪಡೆಯಲು ಸಾಧ್ಯವಿದೆ.
ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಯ ಉತ್ಪನ್ನಳನ್ನು ಗ್ರಾಹಕರ ವೆಚ್ಚ ಭರಿಸುವ ಸಾಮರ್ಥ್ಯವನ್ನು ಆಧರಿಸಿ, ಚಿಕಿತ್ಸೆ ಸ್ವರೂಪವನ್ನು ಆಧರಿಸಿ ರೂಪಿಸಲಾಗಿದ. ವಾಸ್ತವವಾಗಿ ಡಯಾಗ್ನೋಸಿಸ್ ಮೇಲೆ ಮಾಡುವ ವೆಚ್ಚ ಎಂದರೆ, ನಾವು ಯಾವ ಸ್ವರೂಪದ ಚಿಕಿತ್ಸೆಯನ್ನು ಪಡೆಯಬಹುದು ಎಂಬುದನ್ನು ನಿರ್ಧರಿಸುವುದೇ ಆಗಿದೆ.ಇದರ ಜೊತೆಗೆ ಹೆಚ್ಚುವರಿ ಆನುಕೂಲಗಳು ಇವೆ. ಆದಾಯ ಮೊತ್ತ ಬದಲಾವಣೆ ಅವಕಾಶವು ಇದ್ದು, ಇದು, ಮಾಸಿಕ ಪಾವತಿಯ ಮೇಲೆ ಶೇ 1ರಷ್ಟು ವಿಮೆ ರಕ್ಷಣೆ ನೀಡಲಿದೆ. ಇದು, ಯಾವುದೇ ರೀತಿಯ ಆದಾಯ ಖೋತಾದ ವಿರುದ್ಧ ರಕ್ಷಣೆ ಒದಗಿಸಲಿದೆ.
ಕೈಗೆಟುಕುವ ದರವು ಉತ್ಪನ್ನನ್ನು ಇನ್ನಷ್ಟು ಆಕರ್ಷಕವಾಗಿಸಲಿದೆ. ಅಂದರೆ ಮಾಸಿಕ, ಕಡಿಮೆ ಅಂದರೆ ರೂ. 100 ರ ದರದಲ್ಲಿ ಗ್ರಾಹಕರು ರೂ. 20 ಲಕ್ಷದವರೆಗೆ ಕ್ಯಾನ್ಸರ್ ಚಿಕಿತ್ಸೆ ಹಾಗೂ ರೂ. 10 ಲಕ್ಷದವರೆಗೂ ಹೃದ್ರೋಗ ಚಿಕಿತ್ಸೆಗೆ ಭದ್ರತೆ ಪಡೆಯಹುದು.
ಕಾರ್ಯ ನಿರ್ವಾಹಕ ನಿರ್ದೇಶಕ ಪುನೀತ್ ನಂದಾ ಅವರು, , ಆರೋಗ್ಯ ಮತ್ತು ಜೀವ ರಕ್ಷಣೆ ಪ್ರತಿಯೊಬ್ಬರಿಗೂ ನಿರ್ಣಾಯಕ ಮತ್ತು ಹೊಣೆಗಾರಿಕೆ. ನಾವು ಸಲಹೆ ಮಾಡುತ್ತೇವೆ. ಸಮರ್ಪಕವಲ್ಲದ ಜೀವನಶೈಲಿ, ಒತ್ತಡ ಇತ್ಯಾದಿ ಹೃದ್ರೋಗ ಮತ್ತು ಕ್ಯಾನ್ಸರ್ ಸಮಸ್ಯೆಗಳಿಗೂ ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ಈ ಪರಿಸ್ಥಿತಿಯನ್ನು ಎದುರಿಸುವಲ್ಲಿ ಅವುಗಳನ್ನು ಮುಂದಾಗಿ ಗುರುತಿಸಿ, ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಎನಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಇದಕ್ಕೆ ಆರ್ಥಿಕ ಕಾರಣವೂ ಇರಬಹುದು. ನಾವು ಇಂಥ ಸಂದರ್ಭಗಳಲ್ಲಿ ಕುಟುಂಬಗಳ ಮೇಲೆ ಭಾವನಾತ್ಮಕ, ಆರ್ಥಿಕವಾಗಿ ಆಗುವ ಪರಿಣಾಮವನ್ನು ಊಹಿಸಬಲ್ಲವು. ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಗೆ ರಕ್ಷಣಾ ಉತ್ಪನ್ನಗಳು ಗ್ರಾಹಕರಿಗೆ ಚಿಕಿತ್ಸೆಯಕ್ರಮವನ್ನು ಆಯ್ಕೆ ಮಾಡಿಕೊಳ್ಳುವ ಅಕವಾಶವನ್ನು ನೀಡುತ್ತವೆ. ಈ ಉತ್ಪನ್ನವನ್ನು ಗ್ರಾಹಕರಿಗೆ ಆರ್ಥಿಕ ಸಂಪನ್ಮೂಲ ಆಧರಿಸಿ ಆಯ್ಕೆ ಮಾಡಿಕೊಳ್ಳುವಂತೆ ರೂಪಿಸಲಾಗಿದೆ. ಸುಲಭವಾಗಿ ಧಕ್ಕುವಂತೆ ಇದನ್ನು ವೆಬ್ ಸೈಟ್ ಮೂಲಕ ಅಥವಾ ವಿವಿಧ ವಿತರಣಾ ಜಾಲದ ಮೂಲಕವೂ ಖರೀದಿ ಮಾಡಬಹುದು.
ಉತ್ಪನ್ನದ ಮುಖ್ಯಾಂಶಗಳು:
- ಕ್ಯಾನ್ಸರ್ ಅಥವಾ ಹಾರ್ಟ್ ಸಂಬಂಧಿತ ಸಮಸ್ಯೆ ಇದ್ದರೆ ಒಟ್ಟು ನೆರವು ಪ್ರಕಟಣೆ
- ಕ್ಯಾನ್ಸರ್/ಹೃದಯ ಸಮಸ್ಯೆ ಇರುವುದು ಸಾಬೀತಾದಲ್ಲಿ ಭವಿಷ್ಯದ ಎಲ್ಲ ಪ್ರೀಮಿಯಂ ಪಾವತಿಯಿಂದ ಮನ್ನಾ
- ಏರುತ್ತಿರುವ ವೈದ್ಯಕೀಯ ವೆಚ್ಚ ಎದುರಿಸಲು ಭವಿಷ್ಯದಲ್ಲಿ ನೆರವು
- ಆದಾಯ ಬದಲಾವಣೆ ಮತ್ತು ಆಸ್ಪತ್ರೆ ಆತಿಥ್ಯದ ಅನುಕೂಲತೆ
- ಕೈಗೆಟುಕುವ ದರದಲ್ಲಿ ಲಭ್ಯ. ಮಾಸಿಕ ರೂ. 100ರಲ್ಲಿ ಕ್ಯಾನ್ಸರ್ ರಕ್ಷಣೆ, ಕ್ಯಾನ್ಸರ್ ಚಿಕಿತ್ಸೆ ರೂ. 20 ಲಕ್ಷದವರೆಗೂ ಹೃದಯ ಸಮಸ್ಯೆ ಇರುವವರೆಗೆ ರೂ. 10 ಲಕ್ಷದವರೆಗೂ ಚಿಕಿತ್ಸಾ ಭದ್ರತೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.