ಕಾರ್ಗಿಲ್ ಯುದ್ಧ ವೀರ ಸೌರಭ್ ಕಾಲಿಯಾ ಭಾರತದ ಸೇನೆಗಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದವರು. ಇವರು ಮತ್ತು ಇವರೊಟ್ಟಿಗೆ ಐದು ಒಡನಾಡಿ ಸೈನಿಕರನ್ನು ಪಾಕಿಸ್ಥಾನದವರು ಬಂಧಿಸಿ 22 ದಿನ ಚಿತ್ರಹಿಂಸೆ ನೀಡಿ ನಿರ್ದಯವಾಗಿ ಅವರ ದೇಹವನ್ನು ತುಂಡು ತುಂಡು ಮಾಡಿ ಭಾರತಕ್ಕೆ ಕಳುಹಿಸಿಕೊಟ್ಟಿತ್ತು.
ಸೌರಭ್ ಕಾಲಿಯಾ 29 ಜೂನ್ 1976 ರಂದು ಅಮೃತಸರದಲ್ಲಿ ವಿಜಯಾ ಮತ್ತು ಡಾ. ಎನ್. ಕೆ. ಕಾಲಿಯಾ ಅವರಿಗೆ ಜನಿಸಿದರು. ಇವರು ವಿಧ್ಯಾಭ್ಯಾಸವನ್ನು ಡಿ.ಎ.ವಿ. ಪಬ್ಲಿಕ್ ಶಾಲೆ ಪಾಲಂಪುರದಲ್ಲಿ ಮಾಡಿದರು. ಇವರು ಬಿಎಸ್ಸಿ ಪದವಿಯನ್ನು ಪಾಲಂಪುರದಲ್ಲಿ ಬಿಎಸ್ಸಿ ಮೆಡಿಕಲ್ನಲ್ಲಿ ಪಡೆದುಕೊಂಡರು. ಅವರು 1997 ರಲ್ಲಿ ಪದವೀಧರರಾದರು. 1997 ರಲ್ಲಿ ಡೆಹ್ರಾಡೂನ್ನ ಮಿಲಿಟರಿ ಅಕಾಡೆಮಿಗೆ ಸೇರಿದರು. ಸೇನೆಯ ಶಿಕ್ಷಣ ಪಡೆದ ಇವರು ಅಪ್ರತಿಮ ಹೋರಾಟಗಾರರಾಗಿ ಹೊರಹೊಮ್ಮಿದರು.
1999 ರಲ್ಲಿ ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಯಾರೋ ಬಂದು ಆಕ್ರಮಣ ಮಾಡಿದ್ದಾರೆ ಎನ್ನಿಸಿದಾಗ ಅದರ ಕಾರ್ಯಾಚರಣೆಗೆ ಭಾರತಾಂಬೆಯ ರಕ್ಷಣೆಗೆ ಧಾವಿಸಿದ ವೀರರು ಸೈನ್ಯದ ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಸೌರಭ್ ಕಾಲಿಯ ಮತ್ತು ಅವರ ತಂಡ. ಸೈನಿಕರು ಮೇಲೆ ಬರಲು ಹಿಮ ಕರಗಿದೆಯೇ ಎಂದು ನೋಡಿ ಬರಲು ಬಂದ ಸೌರಭ್ ಕಾಲಿಯಾರ ಪಡೆ, ಪಾಕಿ ಭಯೋತ್ಪಾದಕರು ಅಡಗಿಕೊಂಡಿರುವ ಮಾಹಿತಿಯನ್ನು ಕೆಳಗೆ ತಲುಪಿಸಿತು. ಪಾಪಿಗಳ ವಿರುದ್ಧ ಯುದ್ಧಕ್ಕೆ ಸಜ್ಜಾಗಿ ನಿಂತರು. 150 ಭಯೋತ್ಪಾದಕರನ್ನು ಅಡಗು ತಾಣಗಳಿಂದ ಹೊರಗೆಳೆಯುವುದರಲ್ಲಿ ಯಶಸ್ವಿಯಾಗಿತ್ತು ಈ ತಂಡ. ಆದರೆ ಅಷ್ಟರಲ್ಲಿ ಇವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮುಗಿದು ಹೋದವು. ಪಾಕಿ ಸೈನಿಕರು ಸುತ್ತುವರಿದು ಇವರನ್ನು ಜೀವಂತವಾಗಿ ಹಿಡಿದು ಇಪ್ಪತ್ತೆರಡು ದಿನ ಸೆರೆಯಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿದರು. ಅವರ ಕಿವಿಯೊಳಗೆ ಕಬ್ಬಿಣದ ರಾಡ್ನ್ನು ತೂರಲಾಗಿತ್ತು, ಕಣ್ಣು ಕಿತ್ತಿದ್ದರು, ಮೂಗನ್ನೂ ಕತ್ತರಿಸಿದ್ದರು, ಮೂಳೆಗಳನ್ನು ಪುಡಿ-ಪುಡಿ ಮಾಡಿ, ಗುಂಡಿಟ್ಟು ಸಾಯಿಸಿ ಅವರ ದೇಹವನ್ನು ತುಂಡು ತುಂಡು ಮಾಡಿ ಭಾರತಕ್ಕೆ ಕಳುಹಿಸಿಕೊಡಲಾಯಿತು.
ಸೌರಭ್ ಕಾಲಿಯಾರ ದೇಹವನ್ನು ನೋಡಿದ ಸೈನ್ಯ ಬೆಚ್ಚಿಬಿದ್ದಿತು. ಈ ಆರು ವೀರ ಯೋಧರ ಶವ ದೊರೆತಾಗ ಇಡೀ ವಿಶ್ವವೇ ದುರಂತ ಪೈಶಾಚಿಕತೆಗೆ ಸಾಕ್ಷಿಯಾಯಿತು. ಎಲ್ಲರ ಕಣ್ಣು ತುಂಬಿತ್ತು. ಭಾರತ ಸರ್ಕಾರ ಈ ಸಾವಿಗೆ ಪ್ರತ್ಯುತ್ತರ ನೀಡಲೇ ಬೇಕು ಎಂದು ಯುದ್ಧವನ್ನು ಘೋಷಿಸಿತು.
ಬದುಕಿ ಬಾಳಿ ತನ್ನ ಕನಸುಗಳನ್ನು ನನಸು ಮಾಡಬೇಕಿದ್ದ ಸೌರಭ್ ಇನ್ನು ಬಾರದ ಲೋಕಕ್ಕೆ ಹೋಗಿದ್ದರು. ಭಾರತ ಒಬ್ಬ ನಿಷ್ಠಾವಂತ ವೀರ ಸೈನಿಕನ ಬರ್ಬರ ದೇಹವನ್ನು ಕಾಣಬೇಕಾಯಿತು.
ಇಂದು ಕಾರ್ಗಿಲ್ ಯುದ್ಧ ವೀರ ಕ್ಯಾಪ್ಟನ್ ಸೌರಭ್ ಅವರ ಜನ್ಮ ದಿನ. ಬನ್ನಿ ಆವರನ್ನು ನೆನಪಿಸಿಕೊಳ್ಳೋಣ.
ವಂದೇ ಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.