
ಸಮುದ್ರದ ಅಲೆಗಳ ಘರ್ಜನೆಗಳ ನಡುವೆ ದೃಢವಾಗಿ ನಿಂತಿದೆ ಸಿಂಧುದುರ್ಗ ಕೋಟೆ. ಎಲ್ಲಾ ದಿಕ್ಕುಗಳಿಂದಲೂ ಅರಬ್ಬೀ ಸಮುದ್ರದ ವಿಹಂಗಮ ನೀರಿನ ಪರದೆಯಿಂದ ಸುತ್ತುವರೆದಿರುವ ಈ ಕೋಟೆ, 30 ಅಡಿ ಎತ್ತರದ ಅಭೇದ್ಯ ಗೋಡೆಗಳೊಂದಿಗೆ ದೃಢತ್ವದ ಸಂಕೇತವಾಗಿ ನಿಂತಿದೆ ಮತ್ತು ಕೋಟೆಯ ಸುತ್ತಲೂ ರಾರಾಜಿಸುತ್ತಿರುವ ಕೇಸರಿ ಧ್ವಜ ಹೃದಯವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ. ಈ ಕೇಸರಿ ವಿಜಯಧ್ವಜದ ಸ್ಥಾಪನೆಗಾಗಿ ಕ್ರಿಶ್ಚಿಯನ್ ಕಾರ್ಮಿಕರು ಕೂಡ ಶ್ರಮಿಸಿದ್ದರು ಎಂದರೆ ನಂಬುವಿರಾ? ನಂಬಲೇ ಬೇಕು ಯಾಕೆಂದರೆ ಅದುವೇ ಸತ್ಯ. ಆದರೆ ಇತಿಹಾಸದ ಪುಟದಲ್ಲಿ ಆ ಭವ್ಯ ಐತಿಹಾಸಿಕ ಸತ್ಯವನ್ನು ಮರೆಮಾಚಲಾಗಿದೆ.
ಹಿಂದೂ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಹಿಂದೂಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಜ್ಞಾನ. ಆದರೆ ಛತ್ರಪತಿ ಶಿವಾಜಿ ಮಹಾರಾಜರ ದೂರದೃಷ್ಟಿಯ ಫಲವಾಗಿ ಈ ಮಹಾ ಯೋಜನೆಯಲ್ಲಿ ಯುರೋಪಿನ ನುರಿತ ಕ್ರಿಶ್ಚಿಯನ್ ಕಾರ್ಮಿಕರನ್ನು ಸಹ ಸೇರಿಸಿಕೊಳ್ಳಲಾಗಿತ್ತು ಎಂಬುದು ಆಶ್ಚರ್ಯದ ಸಂಗತಿಯೇ ಆಗಿದೆ. 361 ವರ್ಷಗಳ ಹಿಂದೆ, ಕ್ರಿ.ಶ. 1664ರಲ್ಲಿ, ಶಿವಾಜಿ ಮಹಾರಾಜರು ಮುಂಬೈಯಿಂದ 450 ಕಿಲೋಮೀಟರ್ ದೂರದ ಅರಬ್ಬೀ ಸಮುದ್ರದ ಹೃದಯದಲ್ಲಿ, ಕೇಸರಿ ಬಣ್ಣದಿಂದ ಕಂಗೊಳಿಸುವ ಸಿಂಧುದುರ್ಗ ಕೋಟೆಯನ್ನು ನಿರ್ಮಿಸುವ ಮಹತ್ವದ ಕನಸನ್ನು ಕೇವಲ ಕಂಡರಷ್ಟೇ ಅಲ್ಲ, ಅದನ್ನು ಜೀವಂತಗೊಳಿಸಿದರು ಕೂಡ. ಇದಕ್ಕಾಗಿ, ಭಾರತೀಯ ವಾಸ್ತುಶಿಲ್ಪಿಗಳೊಂದಿಗೆ ನೌಕಾ ವಾಸ್ತುಶಿಲ್ಪದಲ್ಲಿ ಪರಿಣತರಾದ ಯುರೋಪಿನ ಕ್ರಿಶ್ಚಿಯನ್ ಕುಶಲಕರ್ಮಿಗಳನ್ನು ಕೂಡ ಸೇರಿಸಿಕೊಂಡರು. ಕೋಟೆ ಪೂರ್ಣಗೊಂಡಾಗ, ಅದು ಸ್ಥಳೀಯ ನೌಕಾಪಡೆಗೆ ದೃಢವಾದ ಅಡಿಪಾಯವನ್ನು ಹಾಕಿತು, ಸಮುದ್ರದ ಮೂಲಕ ಬರುವ ಆಕ್ರಮಣಗಳನ್ನು ತಡೆಯುವ ಶಕ್ತಿಯ ಸಂಕೇತವಾಯಿತು.
ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿ ಹಿಂದೂ ಸ್ವರಾಜ್ಯಕ್ಕೆ ರೂಪ ನೀಡಿದ ಶಿವಾಜಿ ಮಹಾರಾಜರು, ವಿದೇಶಿ ಕ್ರೈಸ್ತರನ್ನು ಏಕೆ ನೇಮಿಸಿಕೊಂಡರು? ಎಂಬ ಪ್ರಶ್ನೆ ಬಹುತೇಕರನ್ನು ಕಾಡಬಹುದು, ಇದಕ್ಕೆ ಉತ್ತರ ʼವಸುಧೈವ ಕುಟುಂಬಕಂʼನ ಭಾರತೀಯ ಸಂಸ್ಕೃತಿಯ ಮಹಾ ತತ್ವದಲ್ಲಿ ಅಡಗಿದೆ. ಈ ತತ್ವದಡಿಯಲ್ಲಿ, ಶಿವಾಜಿ ತಮ್ಮ ರಕ್ಷಣೆಯಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನನ್ನು ಅವರು ಸಮಾನವಾಗಿ ಗೌರವಿಸಿದರು. ಅವರು ಬ್ರಿಟಿಷ್ ಮತ್ತು ಪೋರ್ಚುಗೀಸ್ ಕ್ರಿಶ್ಚಿಯನ್ ಕಾರ್ಮಿಕರ ವಿಶ್ವಾಸವನ್ನು ಗಳಿಸಿದ್ದು ಕೂಡ ಇದೇ ಸಿದ್ಧಾಂತದ ಫಲವಾಗಿ. 19ನೇ ಶತಮಾನದಲ್ಲಿ ಅಮೆರಿಕಾ ಅಳವಡಿಸಿಕೊಂಡ ಕೌಶಲ್ಯಪೂರ್ಣ ಕಾರ್ಮಿಕ ಕಾರ್ಯಪಡೆಯ ಪರಿಕಲ್ಪನೆಯನ್ನು ಶಿವಾಜಿ ಮಹಾರಾಜರು 200 ವರ್ಷಗಳ ಹಿಂದೆಯೇ ಅರ್ಥಮಾಡಿಕೊಂಡಿದ್ದರು. ಮೊಘಲ್ ಆಕ್ರಮಣಕಾರರ ವಿರುದ್ಧ ಯುದ್ಧಗಳಲ್ಲಿ ಗೆಲ್ಲುವುದು ಮಾತ್ರ ಸಾಕಾಗುವುದಿಲ್ಲ; ಬ್ರಿಟಿಷ್, ಪೋರ್ಚುಗೀಸ್, ಡಚ್ ಮತ್ತು ಫ್ರೆಂಚ್ರಂತಹ ಸಮುದ್ರ ಶಕ್ತಿಗಳನ್ನು ಎದುರಿಸಲು ಅತ್ಯುತ್ತಮ ತಂತ್ರಜ್ಞಾನ ಕೂಡ ಬೇಕಿತ್ತು ಎಂಬುದನ್ನು ಶಿವಾಜಿ ಅರ್ಥ ಮಾಡಿಕೊಂಡಿದ್ದರು.
ಅವರು ತಮ್ಮ ಸಾಗರ ಎಂಜಿನಿಯರ್ಗಳಿಗೆ ಬ್ರಿಟಿಷರು ಅಥವಾ ಪೋರ್ಚುಗೀಸರು ನೀಡುವ ವೇತನಕ್ಕಿಂತ ಹೆಚ್ಚಿನ ವೇತನ ಪಾವತಿಸಿದರು. ಇದು ಕೆಲಸ ಮಾಡಿತ್ತು – ಕ್ರಿಶ್ಚಿಯನ್ನರು ಮತ್ತು ವಿದೇಶಿಯರಾಗಿದ್ದರೂ ಅವರು ಭಾರತಕ್ಕಾಗಿ ಶ್ರಮಿಸಲು ಒಪ್ಪಿಕೊಂಡರು, ಇದರಿಂದ ಶಿವಾಜಿಯ ಹಿಂದೂ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಯಿತು. ಈ ನುರಿತ ಕುಶಲಕರ್ಮಿಗಳು ಸಮುದ್ರ ಕೋಟೆಗಳಿಂದ ಹಿಡಿದು ವೇಗದ ಯುದ್ಧ ಹಡಗುಗಳವರೆಗೆ ಎಲ್ಲವನ್ನೂ ನಿರ್ಮಿಸಿದರು. ಭಾರತೀಯರು ಅವರ ಕೌಶಲ್ಯಗಳನ್ನು ಕಲಿತರು, ತಂತ್ರಜ್ಞಾನ ವರ್ಗಾವಣೆಯ ಮಹಾ ಪ್ರಕ್ರಿಯೆ ನಡೆಯಿತು. ಶಿವಾಜಿ ಮಹಾರಾಜರು ಬ್ರಿಟಿಷ್, ಪೋರ್ಚುಗೀಸ್, ಡಚ್, ಫ್ರೆಂಚ್, ಸಿದ್ದಿಗಳು ಮತ್ತು ಮೊಘಲರಂತಹ 27 ಶತ್ರು ಪಡೆಗಳ ವಿರುದ್ಧ ಹೋರಾಡಿದರು. ಮೊಘಲರು ಭೂಮಿಯ ಮೇಲೆ ಹಿಡಿತ ಸಾಧಿಸಿದ್ದರೂ ಸಮುದ್ರ ಶಕ್ತಿಯನ್ನು ಅಲಕ್ಷಿಸಿದ್ದರು, ಆದರೆ ಮರಾಠಾ ಸಾಮ್ರಾಜ್ಯವು ಸಮುದ್ರದ ಮಹತ್ವವನ್ನು ಗುರುತಿಸಿ, ಭಾರತೀಯ ನೌಕಾಪಡೆಯ ಪಿತಾಮಹರಾದರು.
ಇತಿಹಾಸಕಾರ ಡಾ. ಪಿ.ಎಸ್. ಪಿಸುರ್ಲೇಕರ್ ಅವರ “ಪೋರ್ಚುಗೀಸ್-ಮರಾಠಾ ಸಂಬಂಧಗಳು” ಪುಸ್ತಕದಲ್ಲಿ ಈ ಸಂಗತಿಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ನೌಕಾಪಡೆಯ ಜೊತೆಗೆ, ಬಿಜಾಪುರದ ಬೆಳಗಾವಿ ಕೋಟೆ ಮತ್ತು ಫಿರಂಗಿ ಗೋಪುರದ ನಿರ್ಮಾಣದಲ್ಲೂ ಕ್ರಿಶ್ಚಿಯನ್ ಕಾರ್ಮಿಕರನ್ನು ನೇಮಿಸಿಕೊಂಡಿದ್ದು ಉಲ್ಲೇಖಿಸಲಾಗಿದೆ.
ಆದರೆ ಇತಿಹಾಸದಲ್ಲಿ ಶಿವಾಜಿ ಬಗ್ಗೆ ಮಿಥ್ಯೆಯನ್ನು ಹರಡಲಾಗಿದೆ. ಅದೇನೆಂದರೆ ಹಿಂದೂ ಧರ್ಮ ಸ್ವೀಕರಿಸಲು ನಿರಾಕರಿಸಿದ ಕ್ರಿಶ್ಚಿಯನ್ ಪಾದ್ರಿಯನ್ನು ಶಿವಾಜಿ ಕತ್ತು ಸೀಳಿ ಕೊಲೆ ಮಾಡಿದ್ದರು ಎಂದು. ಹಿಂದೂ ಸ್ವರಾಜ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ, 27 ಶತ್ರುಗಳೊಂದಿಗೆ ಯುದ್ಧ ಮಾಡಿದ ಮತ್ತು ಧರ್ಮಕ್ಕಿಂತ ಸೈನಿಕರ ಮತ್ತು ಕಾರ್ಮಿಕರ ಯೋಗಕ್ಷೇಮಕ್ಕೆ ಆದ್ಯತೆ ನೀಡಿದ ರಾಜನೊಬ್ಬ ಇಂತಹ ಕೃತ್ಯ ಮಾಡಲು ಸಾಧ್ಯವೇ? ಧರ್ಮ ಅಥವಾ ಪಂಥದ ಆಧಾರದಲ್ಲಿ ಯುದ್ಧ ಕೈದಿಗಳನ್ನು ಶಿಕ್ಷಿಸದಂತೆ ಆದೇಶಿಸಿದ್ದ ಅವರು, ಪಾದ್ರಿಯನ್ನು ಹತ್ಯೆ ಮಾಡಲು ಸಾಧ್ಯವೇ? ಖಂಡಿತ ಇಲ್ಲ. ಇದು ಇತಿಹಾಸದಲ್ಲಿ ಹರಡಲಾದ ಸುಳ್ಳು.
ಈ ಸುಳ್ಳನ್ನು ಹರಡಿದ್ದು ಒಬ್ಬ ಇಂಗ್ಲಿಷ್ ವ್ಯಕ್ತಿ – ಪತ್ರ ಬರೆದು ಇತಿಹಾಸದಲ್ಲಿ ದಾಖಲಿಸುವ ಮೂಲಕ ಆತ ಈ ಸುಳ್ಳನ್ನು ಹರಡಿದ್ದ. “ಒಡೆದು ಆಳಿರಿ” ಎಂಬ ಬ್ರಿಟಿಷ್ ನೀತಿ ಆತ ಈ ಸುಳ್ಳು ಹರಡು ಕಾರಣ. ಪೋರ್ಚುಗೀಸರು ಮತ್ತು ಶಿವಾಜಿಯ ನಡುವೆ ನೇರ ಯುದ್ಧ ಇರಲಿಲ್ಲ, ಆದರೆ ಬ್ರಿಟಿಷರು ಅದನ್ನು ಸೃಷ್ಟಿಸಲು ಪ್ರಯತ್ನಿಸಿದರು. ಹಿಂದೂ ವಿರುದ್ಧ ಕ್ರಿಶ್ಚಿಯನ್ನರು ಎತ್ತಿಕಟ್ಟಲು ಕಥೆ ಹೆಣೆದರು, ಮತಾಂತರದ ಬೆದರಿಕೆ, ಪಾದ್ರಿಯ ಕೊಲೆ – ಇದೆಲ್ಲವೂ ಪೋರ್ಚುಗೀಸರನ್ನು ಕೆರಳಿಸಿ, ಶಿವಾಜಿಯ ವಿರುದ್ಧ ಯುದ್ಧಕ್ಕೆ ಪ್ರಚೋದಿಸುವ ಪಿತೂರಿಯಾಗಿತ್ತು. ಆದರೆ ಪೋರ್ಚುಗೀಸ್ ಪಾದ್ರಿ ಶಿವಾಜಿಗೆ ಕ್ಲೀನ್ ಚಿಟ್ ನೀಡಿದ ಕಾರಣ ಈ ಪಿತೂರಿ ವಿಫಲವಾಯಿತು.
ಶಿವಾಜಿ ಮಹಾರಾಜರು ಗೋವಾದ ಬಾರ್ಡೆಜ್ ಮೇಲೆ ದಾಳಿ ಮಾಡಿದ್ದು ನಿಜ, ಆದರೆ ಅದು ಕಾರ್ಯತಂತ್ರದ ಮತ್ತು ಸಾರ್ವಭೌಮತ್ವದ ವಿಷಯವಾಗಿತ್ತು, ಧಾರ್ಮಿಕವಾಗಿರಲಿಲ್ಲ. ಇದಕ್ಕೆ ಸಾಕ್ಷಿಗಳೂ ಇವೆ. ಇತಿಹಾಸದ ಈ ಭವ್ಯತೆಯು ನಮ್ಮನ್ನು ಶಿವಾಜಿಯ ದೂರದೃಷ್ಟಿಯನ್ನು ಐಕ್ಯತೆಯ, ಸಬಲೀಕರಣದ ಸಂಕೇತವಾಗಿ ಮೆಚ್ಚುವಂತೆ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


