ಮೋದಿ ವಿದೇಶಕ್ಕೆ ಹೊರಟು ನಿಂತಾಗ ಅದನ್ನು ಫಾರಿನ್ ಟೂರ್ ಅಲ್ಲ ವಿದೇಶ ಯಾತ್ರೆ ಅಂತ ಪತ್ರಿಕೆಗಳು ಬರೆದಾಗ ಅಷ್ಟು ಸಮಂಜಸ ಅಲ್ಲ ಅನಿಸಿತು. ಬದಲಾಗಿ ಅದನ್ನು ಮೋದಿಯವರ “ವಿದೇಶಿ ವ್ಯಾವಹಾರಿಕ ಭೇಟಿ ” ಅಂದರೆ ಉತ್ತಮವಾದೀತೇನೋ. ಯಾಕೆಂದರೆ ಟೂರ್ಗೆ ಹೋಗೋರು ಯಾರೂ ಸಹ 3 ದಿನದಲ್ಲಿ 3 ದೇಶಗಳನ್ನು ಸುತ್ತೋವಾಗ, ಹೋಟೆಲ್ನಲ್ಲಿ ಉಳಿದುಕೊಂಡರೆ ಖರ್ಚಾಗುತ್ತೆ ಅಂತ ವಿಮಾನದಲ್ಲಿ ಮಲಗಿ, ಬೆಳಿಗ್ಗೆ ಅಂದರೆ ಉಸಿರು ಕಟ್ಟೋ ಹಾಗೆ ಮೀಟಿಂಗ್ಗಳನ್ನು ಇಟ್ಟುಕೊಳ್ಳಲ್ಲ. ಅಮೇರಿಕಾದಂತಹ ಶ್ರೀಮಂತ ದೇಶದ ದೊಡ್ಡ ದೊಡ್ಡ ಕಂಪೆನಿಯ CEO ಗಳ ಮುಂದೆ ನಿಂತು ನಿಮಗೆ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಗುವಂತೆ 7 ಸಾವಿರ ಕಾನೂನುಗಳನ್ನು ಬದಲಿಸಿದ್ದೇನೆ, ಬನ್ನಿ ನನ್ನ ದೇಶದ ಯುವಕರಿಗೆ ಉದ್ಯೋಗ ಕೊಡಿ ಎಂದು ಮಾರ್ಕೆಟಿಂಗ್ ಮಾಡಲ್ಲ!
ಹಿಂದಿನ ಪ್ರಧಾನಿಗಳು ವಿದೇಶಕ್ಕೆ ಹೋದಾಗ ಪ್ರಚಾರಕ್ಕೆ ಬೇಕು ಅಂತ ಒಂದು ವಿಮಾನ ತುಂಬಾ ‘ತಮಗೆ ಬೇಕಾದ’ ಪತ್ರಕರ್ತರನ್ನು ಕೊಂಡೊಯ್ಯುತ್ತಿದ್ದರು. ಅದೂ ಸರ್ಕಾರದ ಪೂರ್ತಿ ಖರ್ಚಿನಲ್ಲಿ! ಕಳೆದ ವರ್ಷ ಬಡ ಪಾಕಿಸ್ಥಾನದ ಪ್ರಧಾನಿ ತಂಗಿದ್ದು ಮೋದಿ ಉಳಿದುಕೊಂಡಿದ್ದಕ್ಕಿಂತ 5 ಪಟ್ಟು ದುಬಾರಿ ಹೋಟೆಲ್ನಲ್ಲಿ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿತ್ತು. ಇದನ್ನು ಕಾಂಗ್ರೆಸ್ ಅವಧಿಯ ಲಕ್ಷ ಕೋಟಿ ಹಗರಣ ಹಾಗೂ ಅದನ್ನು ದೇಶಕ್ಕೆ ಝೀರೋ ಲಾಸ್ ಎಂದಿದ್ದ ಕಪಿಲ್ ಸಿಬಲ್ ಅವರ ಸರ್ಕಾರದಲ್ಲವಾ ಹೋದರೆ ಹೋಗಲಿ ಅನ್ನುವ ಮನೋಭಾವಕ್ಕೆ ಹೋಲಿಸಿ ನೋಡಿ.. ಮೋದಿ ಅವರದ್ದು ಟೂರ್ ಅಲ್ಲಾ ಅಂತ ನೀವೂ ಹೇಳುತ್ತೀರಿ.
ಮೋದಿ ಅಮೇರಿಕಾಕ್ಕೆ ಹೋಗಿ ಟ್ರಂಪ್ರನ್ನ ಅಪ್ಪಿ ಕ್ಯಾಮೆರಾ ಮುಂದೆ ನಕ್ಕಾಗ ಜಗತ್ತಿನ 2 ಜಾಗಗಳು ಅರೆಕ್ಷಣ ನಗು ಮರೆತಿದ್ದವು! ಪಾಕಿಸ್ಥಾನದ ರಾವಲ್ ಪಿಂಡಿಯ ಜನರಲ್ಗಳು ಹಾಗು ಚೀನಾದ ಬೀಜಿಂಗ್ನ ಕಮರೆಡ್ಗಳ ನಡುವಿನ ಫೋನ್ ಲೈನ್ಸ್ ಬ್ಯುಸಿಯಾಗಿತ್ತು ಕಳೆದೆರಡು ದಿನಗಳಿಂದ!
ಚೀನಾದ ಬ್ಲಾಕ್ ಮೇಲ್ ನೋಡಿ. ಟಿಬೆಟ್ ಮೂಲಕ ಭಾರತೀಯರು ಹೋಗುವ ಕೈಲಾಸ ಮಾನಸ ಸರೋವರದ ದಾರಿಯನ್ನು ಬಂದ್ ಮಾಡಿತು. ಸಿಕ್ಕಿಂನಲ್ಲಿ ಭಾರತದ ಗಡಿಯೊಳಗೆ ಬಂದು ಚೀನಿ ಸೈನಿಕರು ಕುಳಿತರು. ನಂತರ ಭಾರತದ ಸೈನಿಕರೇ ಚೀನಾ ಗಡಿಯೊಳಗೆ ಬಂದಿದ್ದಾರೆಂದು ಕತೆ ಕಟ್ಟಿದರು. ಚೀನಾದ ಸರ್ಕಾರಿ ಸಾಮ್ಯದ ‘ಗ್ಲೋಬಲ್ ಟೈಮ್ಸ್’ ದಿನಕ್ಕೊಂದರಂತೆ ಭಾರತಕ್ಕೆ ಎಚ್ಚರಿಕೆ ಕೊಡುತ್ತಿದೆ. ಶತ್ರು ವಿಚಲಿತನಾದಾಗ ವಿಲಕ್ಷಣವಾಗಿ ಆಡುತ್ತಾನಂತೆ, ಚೀನಾದ ನಡವಳಿಕೆ ಹಾಗೆ ತೋರುತ್ತದೆ. ಚೀನಾದ ಪತ್ರಿಕೆ ಅಮೆರಿಕದೊಂದಿಗಿನ ಸಂಬಂಧ ಭಾರತಕ್ಕೆ ಒಳ್ಳೇದಲ್ಲ, ಅವರ ಕೈಗೊಂಬೆಯಾಗುತ್ತಿರಿ ಅಂತ ನಮಗೆ ಎಚ್ಚರಿಕೆ ಕೊಡುತ್ತೆ. ಭಾರತದ ಮೇಲೆ ಇಷ್ಟು ಪ್ರೀತಿ ತೋರೋ ಈ ದೇಶ ನಮ್ಮ NSG ಸದಸ್ಯತ್ವಕ್ಕೆ ಎರಡೇ ದಿನಗಳ ಹಿಂದೆ ಮತ್ತೆ ಅಡ್ಡಗಾಲಾಗಿ ನಿಲ್ಲದೆ ತೋರಿಸಿದ್ದರೆ ಅಥವಾ ಪಾಕಿಸ್ಥಾನಕ್ಕೆ ಬೆನ್ನುಲುಬಾಗಿ ನಿಲ್ಲದೆ ಇದ್ದಿದ್ದರೆ ಒಳ್ಳೆದಿತ್ತು. ಚೀನಾ ಏನನ್ನು ಮಾಡಿದರೆ ಒಳ್ಳೇದು ಅನ್ನುತ್ತದೋ ಅದರ ಬಗ್ಗೆ ನಾವು ಯೋಚಿಸಬೇಕು ಆದರೆ ಅವರು ಮಾಡಬಾರದು ಅನ್ನೋದರ ಬಗ್ಗೆ ಹಿಂದೆ ಮುಂದೆ ಯೋಚಿಸದೇ ಮಾಡಬೇಕು.
ಇನ್ನು ಪಾಕಿಸ್ಥಾನದ ವ್ಯಥೆ ಹೇಳಿ ತೀರದು. ಕಾಶ್ಮೀರಕ್ಕಾಗಿ 4 ಭಾರಿ ಯುದ್ದ ಮಾಡಿದರೂ ಅಗದಿದ್ದಾಗ ಪಾಕಿಸ್ಥಾನ ಉಗ್ರವಾದಿಗಳನ್ನ ಹುಟ್ಟು ಹಾಕಿತು. ಅದಕ್ಕೆ ಕಾಶ್ಮೀರಿ ಯುವಕರನ್ನು ಸೇರಿಸಿಕೊಂಡು ಭಾರತದ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲು ನೋಡಿತು. ಈಗ ಆ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾಹುದ್ದೀನ್ನನ್ನು ಜಗತ್ತಿನ ಉಗ್ರರ ಪಟ್ಟಿಗೆ ಸೇರಿಸಿ ಪಾಕಿಸ್ಥಾನದ ಭಟ್ಟಂಗಿತನವನ್ನ ಯಾರೂ ನಂಬಲ್ಲ ಅಂತಾದಾಗ ಅವರಿಗಾದ ನೋವು ನಮ್ಮ ಶತ್ರುಗಳಿಗೂ ಬರಬಾರದು. ಪಾಕಿಸ್ಥಾನಕ್ಕೆ ಮಾತ್ರ ಇರಲಿ!
ಅಂದ ಹಾಗೆ ಏನಿದೆ ಆ ಅಪ್ಪುಗೆಯಲ್ಲಿ ?
ಚೀನಾಕ್ಕೆ ಗೊತ್ತು ಅಮೇರಿಕಾ-ಭಾರತ ಒಂದಾದರೆ ಹಿಂದೂ ಮಹಾಸಾಗರದಲ್ಲಿ ತನಗೆ ಬಾಲ ಬಿಚ್ಚೋಕಾಗಲ್ಲ, ತನ್ನ ವಸ್ತುಗಳನ್ನು ಮನ ಬಂದಂತೆ ಬೇರೆ ದೇಶಗಳ ಮೇಲೆ ಹೇರೋಕಾಗಲ್ಲ, ಸೌತ್ ಚೀನಾ ಸಮುದ್ರದಲ್ಲಿ ಮನ ಬಂದಂತೆ ವಿಸ್ತರಿಸೋಕಾಗಲ್ಲ, ತಾನು ಮಾಡೋ ಅಥವಾ ಮಾಡಬೇಕೆಂದಿರೋ ಯಾವುದೇ ಸ್ವಾರ್ಥ ಕೆಲಸ ಅಷ್ಟು ಸುಲಭ ಅಲ್ಲ ಅಂತ. ಅದಕ್ಕಾಗೇ ಈ ತಳಮಳ. ಪಾಕಿಸ್ಥಾನದ ಕಥೆ ಇದಕ್ಕೂ ಕೀಳು, ಕಾಶ್ಮೀರದ ಅಸೆ ಬದಿಗಿರಲಿ, ತಾನು ಹಿಡಿದಿಟ್ಟುಕೊಂಡಿರುವ ಆಕ್ರಮಿತ ಕಾಶ್ಮೀರ ಎಲ್ಲಿ ತಪ್ಪುತ್ತದೋ, ಕಾಪಾಡುತ್ತಿರುವ ಉಗ್ರರನ್ನು ಲಾಡೆನ್ನನ್ನ ಹೊಡೆದು ಹಾಕಿದ ಹಾಗೆ ಎಲ್ಲಿ ಕೊಲ್ಲುತ್ತಾರೊ ಅನ್ನೋ ಚಳಿ.
ಭಾರತದಲ್ಲಿ ಮೋದಿ ವಿದೇಶಕ್ಕೆ ಹೋಗ್ತಾರೆ ಅಂತ ಬಾಯಿ ಬಡಿದುಕೊಳ್ಳೋರಿಗೆ ಈ ವಿಷಯ ಗೊತ್ತಿಲ್ಲ ಅಂತೇನೂ ಇಲ್ಲ, ಅವರು ವಿರೋಧಿಸೋದರಲ್ಲಿ ಅವರ ರಾಜಕೀಯದ ಉಳಿವಿದೆ. ಜನರಲ್ಗಳು ಮೋದಿ ಶಾಕ್ನಿಂದ ಸ್ವಲ್ಪವೇ ಏಳುವ ಮೊದಲು ಮೋದಿ ಇಸ್ರೇಲ್ಗೆ ಹೊರಡಲು ಬ್ಯಾಗ್ ಪ್ಯಾಕ್ ಮಾಡುತ್ತಿದ್ದಾರೆ! ಓ ದೇವರೇ ನಿನಗೆ ದುಷ್ಟರ ಮೇಲೆ ಎಷ್ಟೊಂದು ಕೋಪ ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.