ನವದೆಹಲಿ: ಜಿಎಸ್ಎಲ್ವಿ ಮಾಕ್-111 ಬಳಿಕ ಇದೀಗ ಮತ್ತೊಂದು ಮಹತ್ವದ ಸೆಟ್ಲೈಟ್ ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಈ ಶುಕ್ರವಾರ ಅದು ಭೂ ವೀಕ್ಷಣೆ ಉಪಗ್ರಹ ಕಾರ್ಟೊಸಾಟ್-2 ಮತ್ತು 30 ಸಹ ಪ್ರಯಾಣಿಕ ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಿದೆ.
712ಯ ಕೆಜಿ ಕಾರ್ಟೊಸಾಟ್-2 ಸರಣಿ ಮತ್ತು 29 ವಿದೇಶಿ ಸೆಟ್ಲೈಟ್ ಮತ್ತು 1 ಭಾರತದ ಸೆಟ್ಲೈಟ್ನ್ನು ತನ್ನ ರಾಕೆಟ್ ಪೊಲಾರ್ ಸೆಟ್ಲೈಟ್ ಲಾಂಚ್ ವೆಹ್ಹಿಕಲ್(ಪಿಎಸ್ಎಲ್ವಿ) ಮೂಲಕ ಇಸ್ರೋ ಉಡಾವಣೆಗೊಳಿಸಲಿದೆ.
30 ಸೆಟ್ಲೈಟ್ಗಳು ಒಟ್ಟು 243 ಕೆಜಿ ಭಾರ ಇರಲಿದೆ. ಕಾರ್ಟೊಸಾಟ್ ಸೇರಿದಂತೆ ಈ ಎಲ್ಲಾ 31 ಉಪಗ್ರಹಗಳ ಒಟ್ಟು ತೂಕ 955 ಕೆಜಿ ಇರಲಿದೆ.
ಶುಕ್ರವಾರ ಬೆಳಿಗ್ಗೆ 9.29ರ ಸುಮಾರಿಗೆ ಶ್ರೀಹರಿಕೋಟ ರಾಕೆಟ್ ಪೋರ್ಟ್ನಲ್ಲಿ ಈ ಸೆಟ್ಲೈಟ್ ಉಡಾವಣೆಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.