ಇಂದೋರ್: ಟ್ರಾಫಿಕ್ ನಿರ್ವಹಣೆಗಾಗಿ ಇಂದೋರ್ನಲ್ಲಿ ‘ರೋಬೋಕಾಪ್’ನ್ನು ನಿಯೋಜನೆಗೊಳಿಸಲಾಗಿದೆ. ಪ್ರಯೋಗಾತ್ಮಕವಾಗಿ ರೊಬೋವನ್ನು ಟ್ರಾಫಿಕ್ ನಿರ್ವಹಣೆಗಾಗಿ ನಿಯೋಜಿಸಲಾಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಈ ರೋಬೋ 14 ಅಡಿ ಎತ್ತರವಿದ್ದು, 15 ಲಕ್ಷ ರೂಪಾಯಿ ಮೌಲ್ಯದಲ್ಲಿ ವಿನ್ಯಾಸಗೊಳಿಸಲಾಗಿದೆ. 360 ಡಿಗ್ರಿ ತಿರುಗಲ್ಪಡುವ ಇದು ಹ್ಯಾಂಡ್ ಸಿಗ್ನಲ್ನ್ನೂ ನೀಡುತ್ತದೆ. ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ನಂತೆ ಕಾರ್ಯನಿರ್ವಹಿಸುವ ಇದು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಈ ಐಡಿಯಾ ಅತ್ಯುತ್ತಮವಾಗಿದ್ದು, ಟ್ರಾಫಿಕ್ ಪ್ರಕ್ರಿಯೆಯನ್ನು ತಪ್ಪಿಲ್ಲದಂತೆ ನಿರ್ವಹಿಸುತ್ತದೆ. ನಿಯಮ ಉಲ್ಲಂಘಿಸಿದವರಿಗೆ ಚಲನ್ನನ್ನೂ ನೀಡುತ್ತದೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆದರೆ ಜನರು ನಿಜವಾದ ಪೊಲೀಸರ ಮಾತನ್ನೇ ಕೇಳುವುದಿಲ್ಲ ಇನ್ನು ಈ ಮೆಶಿನ್ನ ಮಾತನ್ನು ಕೇಳುತ್ತಾರೆಯೇ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.