ಭುವನೇಶ್ವರ: ಪಾಕಿಸ್ಥಾನಿಯೊಬ್ಬನ ದಾಖಲೆಯನ್ನು ಮುರಿಯುವುದಕ್ಕಾಗಿ ಒರಿಸ್ಸಾದ ಯುವಕನೊಬ್ಬ 1 ನಿಮಿಷದಲ್ಲಿ ಒಂದು ಕೈಯಲ್ಲಿ ಬರೋಬ್ಬರಿ 393 ಬಾರಿ ಪಂಚ್ ಮಾಡಿದ್ದಾನೆ.
20 ವರ್ಷದ ಸತ್ಯಪ್ರಿಯ ಪ್ರಧಾನ್ ಫಿಸಿಯೋಥೆರಪಿ ವಿದ್ಯಾರ್ಥಿಯಾಗಿದ್ದು, ಈತನ ಈ ಸಾಧನೆಗೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಿಂದ ಖಚಿತತೆ ಇನ್ನಷ್ಟೇ ಸಿಗಬೇಕಿದೆ.
ಪಾಕಿಸ್ಥಾನದ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿ ಮೊಹಮ್ಮದ್ ರಶೀದ್ ಅವರ ದಾಖಲೆಯ ಬಗ್ಗೆ ತಿಳಿದುಕೊಂಡ ಸತ್ಯಪ್ರಿಯ ಅದನ್ನು ಮುರಿಯಬೇಕು ಎಂಬ ಪಣತೊಟ್ಟು ನಿರಂತರ ಅಭ್ಯಾಸ ನಡೆಸಿ ಎಲ್ಲರ ಸಮ್ಮುಖದಲ್ಲಿ 1 ನಿಮಿಷದಲ್ಲಿ 393 ಬಾರಿ ಪಂಚ್ ಮಾಡಿದ್ದಾರೆ. ಅದೂ ಒಂದೇ ಕೈಯಲ್ಲಿ.
ಈ ವಿಡಿಯೋವನ್ನು ಗಿನ್ನಿಸ್ಗೆ ಕಳುಹಿಸಿಕೊಡಲಾಗಿದ್ದು, ದಾಖಲೆ ನಿರ್ಮಾಣದ ಬಗ್ಗೆ ಖಚಿತತೆ ಇನ್ನಷ್ಟೇ ಹೊರಬೀಳಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.