ನವದೆಹಲಿ: ಆಸಿಡ್ ದಾಳಿ ಸಂತ್ರಸ್ಥರು, ಆಟಿಸಂ, ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಸಮಾರ್ಥ್ಯತೆ ಇರುವ ಜನರು ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಬಡ್ತಿಗಳಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳುವ ಮಹತ್ವದ ಯೋಜನೆಯನ್ನು ಕೇಂದ್ರ ತರುತ್ತಿದೆ.
ವೈಯಕ್ತಿಕ ಮತ್ತು ತರಬೇತಿ ಇಲಾಖೆಯು ಈಗಾಗಲೇ ಈ ಬಗೆಗಿನ ಕರುಡನ್ನು ಸಿದ್ಧಪಡಿಸಿದೆ. ಆಫೀಸ್ ಅಸಿಸ್ಟೆಂಟ್ ಹುದ್ದೆಯಿಂದು ಐಎಎಸ್ ಹುದ್ದೆಯವರೆಗೂ ಶೇ.1ರಷ್ಟು ಮೀಸಲಾತಿಯನ್ನು ಈ ನ್ಯೂನ್ಯತೆ ಇರುವವರು ಪಡೆದುಕೊಳ್ಳಲಿದ್ದಾರೆ. ಅಲ್ಲದೇ ವಯೋಮಿತಿಯಲ್ಲಿ ವಿನಾಯಿತಿಯೂ ಇವರಿಗೆ ದೊರೆಯಲಿದೆ.
ಆದರೆ ಬಡ್ತಿಯಲ್ಲಿ ಮೀಲಸಾತಿ ನೀಡುವ ವಿಚಾರ ಸುಪ್ರೀಂಕೋರ್ಟ್ನಲ್ಲಿರುವುದರಿಂದ ಇಲಾಖೆಯ ಈ ನಿರ್ಧಾರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಕೇವಲ ಶೇ.40ಕ್ಕಿಂತ ಕಡಿಮೆ ವಿಕಲಾಂಗತೆ ಇರುವವರಿಗೆ ಮಾತ್ರ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.