ನವದೆಹಲಿ: ಯೋಗದ ಪ್ರಚಾರ ಮತ್ತು ಅಭಿವೃದ್ಧಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಕ್ಕಾಗಿ ಕೊಡಲಾಗುವ ಪ್ರಧಾನ ಮಂತ್ರಿ ಅವಾರ್ಡ್ಗೆ ರಮಾಮಣಿ ಐಯ್ಯಂಗಾರ ಮೆಮೋರಿಯಲ್ ಯೋಗ ಇನ್ಸ್ಟಿಟ್ಯೂಟ್ ಆಯ್ಕೆಗೊಂಡಿದೆ.
ಈ ಅವಾರ್ಡ್ಗೆ ಒಟ್ಟು 85 ನಾಮನಿರ್ದೇಶನ ಬಂದಿತ್ತು, ಇದರಲ್ಲಿ 15ನ್ನು ಸ್ಕ್ರೀನಿಂಗ್ ಕಮಿಟಿ ಆಯ್ಕೆ ಮಾಡಿತ್ತು.
ಇದೀಗ ಈ ಅವಾರ್ಡ್ನ್ನು ಸ್ವೀಕರಿಸಲಿರುವ ಮೊದಲ ಸಂಸ್ಥೆಯಾಗಿ ರಮಾಮಣಿ ಐಯ್ಯಂಗಾರ್ ಮೆಮೋರಿಯಲ್ ಹೊರಹೊಮ್ಮಿದೆ. 1975ರಲ್ಲಿ ಯೋಗ ಗುರು ಬಿ.ಕೆ.ಎಸ್ ಐಯ್ಯಂಗಾರ್ ಅವರು ಇದನ್ನು ಆರಂಭಿಸಿದ್ದರು.
ಈ ಅವಾರ್ಡ್ನ್ನು 2016ರ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದು, ಈ ವರ್ಷದಿಂದ ಪ್ರದಾನ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.