ಮುಂಬಯಿ: ಸ್ವಚ್ಛ ಭಾರತ ಸಂದೇಶವನ್ನು ಸಾರುವ, ಶೌಚಾಲಯದ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುವ ನಟ ಅಕ್ಷಯ್ ಕುಮಾರ್, ಭೂಮಿ ಪಡ್ನೇಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಬಿಡುಗಡೆಯ ಹೊಸ್ತಿಲಲ್ಲಿದೆ.
ಮೂಲಗಳ ಪ್ರಕಾರ ಉತ್ತಮ ಸಂದೇಶವನ್ನು ಸಾರುವ ಈ ಸಿನಿಮಾ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯತಿ ಪಡೆಯುವ ಸಾಧ್ಯತೆ ಇದೆ.
ಈ ಸಿನಿಮಾ ಕೇವಲ ಒಂದು ಮನೋರಂಜನಾ ಸಿನಿಮಾವಲ್ಲ, ಸಾಮಾಜಿಕ ಸುಧಾರಣೆಯ ಅಸ್ತ್ರವಾಗಿದೆ. ಎಲ್ಲರೂ ನೋಡುವಂತಹ ಅರ್ಹತೆಯನ್ನು ಇದು ಹೊಂದಿದೆ. ಹೀಗಾಗಿ ಇದು ತೆರೆಗೆ ವಿನಾಯತಿಯ ಅರ್ಹತೆ ಪಡೆದುಕೊಂಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಬಳಿಕ ವೀಕ್ಷಕರಿಂದ ಅತ್ಯುತ್ತಮ ಸ್ಪಂದನೆಗಳು ವ್ಯಕ್ತವಾಗುತ್ತಿದೆ. ಆಗಸ್ಟ್ 11ಕ್ಕೆ ಇದು ಬಿಡುಗಡೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.