ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮೊತ್ತ ಮೊದಲ ಮಂಗಳಯಾನ ‘ಮಾರ್ಸ್ ಆರ್ಬಿಟರಿ ಮಿಶನ್’(ಮಾಮ್) ಕಕ್ಷೆಯಲ್ಲಿ ಸೋಮವಾರ ಸಾವಿರ ಭೂ ದಿನಗಳನ್ನು ಪೂರೈಕೆ ಮಾಡಿದೆ.
2013ರ ನವೆಂಬರ್ 5ರಂದು ಇಸ್ರೋ ಪಿಎಸ್ಎಲ್ವಿ-ಸಿ25ಮೂಲಕ ಮಾಮ್ನ್ನು ಉಡಾವಣೆಗೊಳಿಸಿದ್ದು, 2014ರ ಸೆ.24ರಂದು ಮಂಗಳ ಕಕ್ಷೆಯನ್ನು ತಲುಪಿತ್ತು.
ಮೊದಲ ಪ್ರಯತ್ನದಲ್ಲೇ ಮಂಗಳನ ಅಂಗಳಕ್ಕೆ ಯಾನ ಕೈಗೊಂಡ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.
ಈ ಸೆಟ್ಲೈಟ್ ಉತ್ತಮವಾಗಿದ್ದು, ನಿರೀಕ್ಷೆಯಂತೆ ಕಾರ್ಯ ಮಾಡುತ್ತಿದೆ. ಮಾರ್ಸ್ ಆರ್ಬಿಟರಿ ಸ್ಪೇಸ್ ಕ್ರಾಫ್ಟ್ನಿಂದ ಸ್ವೀಕರಿಸಲಾದ ದಾಖಲೆಗಳನ್ನು ವಿಶ್ಲೇಷನೆಗೊಳಪಡಿಸಲಾಗುತ್ತಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.