ನವದೆಹಲಿ: ಜುಲೈ 1ರಿಂದ ದೇಶದಾದ್ಯಂತ ಜಿಎಸ್ಟಿ ಮಸೂದೆ ಜಾರಿಯಾಗಲಿರುವ ಹಿನ್ನಲೆಯಲ್ಲಿ ಮೊದಲ ಎರಡು ತಿಂಗಳ ಅವಧಿಗೆ ವ್ಯವಹಾರಗಳಿಗೆ ರಿಟರ್ನ್ ಫೈಲಿಂಗ್ನಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಜುಲೈ-ಆಗಸ್ಟ್ವರೆಗೆ ವಿನಾಯಿತಿಯನ್ನು ನೀಡಲಾಗಿದೆ.
ಜಿಎಸ್ಟಿ ಕೌನ್ಸಿಲ್ ನಿರ್ಧರಿಸಿದ ಪರಿಷ್ಕೃತ ರಿಟನ್ ಫೈಲಿಂಗ್ ಪ್ರಕಾರ ಆಗಸ್ಟ್ 10ರ ಬದಲು ಸೇಲ್ಸ್ ರಿಟರ್ನ್ಗಳನ್ನು ಸೆಪ್ಟಂಬರ್ 5 ಕ್ಕೆ ಪಾವತಿಸಬಹುದಾಗಿದೆ. ಕಂಪನಿಗಳು ಸೇಲ್ ಇನ್ವಾಯ್ಸ್ನ್ನು ಜಿಎಸ್ಟಿ ನೆಟ್ವರ್ಕ್ನೊಂದಿಗೆ ಸೆ.10ರ ಬದಲು ಸೆ.20ರೊಳಗೆ ಫೈಲ್ ಮಾಡಬಹುದಾಗಿದೆ.
‘ಸಿದ್ಧತೆಯಲ್ಲಿ ಕೊರತೆಯಿರಬಹುದು ಎಂಬ ಕಾರಣಕ್ಕೆ ಜುಲೈ-ಆಗಸ್ಟ್ ಎರಡು ತಿಂಗಳುಗಳ ವಿನಾಯಿತಿಯನ್ನು ಕೊಡಲಾಗಿದೆ. ಸೆಪ್ಟಂಬರ್ನಿಂದ ಸಮಯವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ’ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.