ಕೋಟ: ತಮ್ಮ ಮನೆಯಲ್ಲಿದ್ದ 1ಲಕ್ಷ ರೂಪಾಯಿ ನಿಷೇಧಿತ ನೋಟುಗಳನ್ನು ವಿನಿಮಯ ದಿನಾಂಕ ಮುಕ್ತಾಯವಾದ ಒಂದು ತಿಂಗಳ ಬಳಿಕ ಪತ್ತೆ ಮಾಡಿದ ಅನಾಥ ಅಣ್ಣ-ತಂಗಿಯರಿಗೆ ಪ್ರಧಾನಿ ನರೇಂದ್ರ ಮೋದಿ 50 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ.
ಪ್ರಧಾನ ಮಂತ್ರಿ ವಿವೇಚನಾ ನಿಧಿಯಿಂದ ಈ ಮಕ್ಕಳಿಗೆ ಈ ಹಣವನ್ನು ಮಂಜೂರು ಮಾಡಲಾಗಿದೆ.
ಅಲ್ಲದೇ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದ 17 ವರ್ಷದ ಸೂರಜ್ ಬಂಜಾರ ಮತ್ತು ಆತನ 9 ವರ್ಷದ ತಂಗಿ ಸಲೋನಿಯನ್ನು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮ ಯೋಜನಾದಡಿ ಸೇರ್ಪಡೆಗೊಳಿಸಲಾಗಿದೆ. ಸುರಕ್ಷಾ ಹಣ ರೂ.1,710ನ್ನು ಬಿಡುಗಡೆಗೊಳಿಸಲಾಗಿದೆ.
ಅನಾಥಶ್ರಮದಲ್ಲಿದ್ದ ಈ ಮಕ್ಕಳು ತಮ್ಮ ತೀರಿ ಹೋದ ಹೆತ್ತವರ ಮನೆಗೆ ಬಂದು ನೋಡಿದಾಗ ಅಲ್ಲಿ 1 ಲಕ್ಷ ಹಣ ಪತ್ತೆಯಾಗಿತ್ತು. ಆದರೆ ಅದು ನಿಷೇಧಿತ ನೋಟುಗಳಾಗಿದ್ದು, ವಿನಿಮಯ ದಿನಾಂಕವೂ ಮುಕ್ತಾಯವಾಗಿತ್ತು. ಹೀಗಾಗೀ ಈ ಮಕ್ಕಳು ಪ್ರಧಾನಿ ಪತ್ರ ಬರೆದು ಸಹಾಯ ಕೋರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.