ಶ್ರೀನಗರ: ಕಾಶ್ಮೀರದ ಒಂದು ಕಡೆ ಕೆಲ ಯುವಕರು ಕಲ್ಲು ತೂರಾಟ ನಡೆಸುತ್ತಾ ಅಸ್ಥಿರತೆಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಮಹತ್ವಾಕಾಂಕ್ಷೆಯುಳ್ಳ ಕಾಶ್ಮೀರಿ ಯುವಕ-ಯುವತಿಯರು ಭಾರತೀಯ ಸೇನೆಯಿಂದ ಕೋಚಿಂಗ್ ಪಡೆದು ದೇಶದ ಅತೀ ಕಠಿಣ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ.
40 ಸೂಪರ್ ಸ್ಟುಡೆಂಟ್ಗಳ ಪೈಕಿ 9 ಮಂದಿ ಐಐಟಿ-ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್-ಅಡ್ವಾನ್ಸ್ಡ್ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ ಇದರ 26 ಹುಡುಗ ಮತ್ತು ಹುಡುಗಿಯರು ಐಐಟಿ-ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ ಮೆಯಿನ್ನಲ್ಲಿ ಉತ್ತೀರ್ಣಗೊಂಡಿದ್ದಾರೆ.
ಮಂಗಳವಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಈ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಅಭಿನಂದಿಸಿದರು.
ಜಮ್ಮು ಕಾಶ್ಮೀರದಲ್ಲಿನ ಅಸ್ಥಿರತೆಯಿಂದಾಗಿ ಒಂದು ಪೀಳಿಗೆಯ ಬದುಕೇ ನಾಶವಾಗುತ್ತಿದೆ ಎಂದ ಅವರು, ಲ್ಯಾಪ್ಟಾಪ್ ಮತ್ತು ಪೆನ್ನುಗಳನ್ನು ಹಿಡಿಯುವ ಮೂಲಕ ಈ ಹಿಂಸಾಚಾರಕ್ಕೆ ಅಂತ್ಯ ಹಾಡಬೇಕು ಎಂದು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.