ಕರ್ಪೂರಿ ಠಾಕೂರ್ ಬಿಹಾರ ಮೂಲದ ಖ್ಯಾತ ರಾಜಕಾರಣಿ. ಆನ ನಾಯಕ ಎಂದೇ ಕರೆಯಲ್ಪಡುತ್ತಿದ್ದ ಇವರು ಬಿಹಾರದ 11ನೇ ಮುಖ್ಯಮಂತ್ರಿಯಾಗಿದ್ದರು. 1970ರಲ್ಲಿ ಭಾರತೀಯ ಕ್ರಾಂತಿ ದಳದಿಂದ ಮೊದಲು ಸಿಎಂ ಆಗಿ ಆಯ್ಕೆಯಾದರೆ, 1977ರಲ್ಲಿ ಜನತಾ ಪಕ್ಷದಿಂದ ಸಿಎಂ ಆದರು.
ಬಿಹಾರದ ಪಿತೌನ್ಜಿಯಾ ಗ್ರಾಮದಲ್ಲಿ ಜನಿಸಿದ ಇವರು, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಪಿತೌನ್ಜಿಯ ಗ್ರಾಮ ಇದೀಗ ಇವರ ಗೌರವಾರ್ಥ ಕರ್ಪೂರಿಯಾ ಗ್ರಾಮ ಎಂಬ ಹೆಸರು ಪಡೆದಿದೆ.
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಕಾರಣ 25 ತಿಂಗಳು ಸೆರೆವಾಸವನ್ನೂ ಅನುಭವಿಸಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು 1952ರಲ್ಲಿ ಬಿಹಾರ ವಿಧಾನ ಸಭಾದ ಸದಸ್ಯರಾಗಿ ಆಯ್ಕೆಯಾದರು.
ಹಿಂದಿ ಪಂಡಿತರಾಗಿದ್ದ ಇವರು ಬಿಹಾರದ ಶಿಕ್ಷನ ಸಚಿವನೂ ಆಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಇಂಗ್ಲೀಷ್ ಕಡ್ಡಾಯವನ್ನು ಶಿಕ್ಷಣದಿಂದ ತೆಗೆದು ಹಾಕಿದರು. ಬಳಿಕ ಕಾಂಗ್ರೇಸ್ಸೇತರ ಬಿಹಾರ ಮುಖ್ಯಮಂತ್ರಿಯಾದ ಇವರು ಮದ್ಯಕ್ಕೆ ನಿಷೇಧ ಹೇರಿದ್ದರು.
ತುರ್ತು ಪರಿಸ್ಥಿತಿಯ ಸಂದರ್ಭ ಜಯಪ್ರಕಾಶ್ ನಾರಾಯಣ್ ಅವರಿಗೆ ನಿಕಟವರ್ತಿಯಾಗಿದ್ದರು. ದಲಿತ ಮತ್ತು ಬಡವರ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1991ರ ಆಗಸ್ಟ್ 30ರಂದು ಪೋಸ್ಟಲ್ ಸ್ಟ್ಯಾಂಪ್ವೊಂದನ್ನು ಬಿಡುಗಡೆಗೊಳಿಸಿತ್ತು.
Courtesy: Stamp Today Group ( Sri Jaganath Mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.