ನೀಲಗಿರಿ ತಪ್ಪಲನ್ನು ನೀಲಿಯಾಗಿಸುವ ಅತೀ ಸುಂದರ ಕುರಿಂಜಿ ಹೂಗಳು ತಮ್ಮ ಸೌಂದರ್ಯದಿಂದಲೇ ನೋಡುಗರ ಕಣ್ಮನಗಳನ್ನು ಸೆಳೆಯುತ್ತದೆ. ಕಡು ನೀಲಿ ಬಣ್ಣದ ಗಂಟೆಯ ಶೈಲಿಯ ಈ ಹೂ 6000ದಿಂದ 7000 ಅಡಿ ಎತ್ತರವಿರುವ ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಕಾಣಸಿಗುತ್ತದೆ.
ಈ ಹೂವಿನ ವಿಶೇಷತೆಯೆಂದರೆ 12 ವರ್ಷಗಳಿಗೊಮ್ಮೆ ಮಾತ್ರ ಇದು ಅರಳುತ್ತದೆ. ಕುಂತಿ ನದಿಯಿಂದಾಗಿ ಈ ಹೂವಿಗೆ ಕುಂತಿಯಾನ ಎಂದೂ ಕರೆಯುತ್ತಾರೆ. ಕುರಂಜಿ 8ರಿಂದ 10 ಅಡಿಗಳಷ್ಟು ಎತ್ತರ ಬೆಳೆಯುತ್ತದೆ.
ಇದು ಅರಳಿ ನಿಂತಾಗ ಇಡೀ ಪ್ರದೇಶವೇ ನೀಲಿಮಯವಾಗಿ ಕಂಗೊಳಿಸುತ್ತದೆ, ಪೂರ್ವ ಘಟ್ಟದ ಶೇರ್ವಾಯ್ಸ್ಗಳಲ್ಲೂ ಇದು ಕಾಣಸಿಗುತ್ತದೆ. ಕರ್ನಾಟಕದ ಬಳ್ಳಾರಿಯ ಇಡುಕ್ಕಿ ಮತ್ತು ಸಂದೂರುಗಳಲ್ಲೂ ಇವುಗಳ ಅಸ್ತಿತ್ವ ಇದೆ.
2008 ರಲ್ಲಿ ಮುನಾರ್ ಸಮೀಪದ ತಲಕುಲಂನಲ್ಲಿ ಈ ಹೂ ಅರಳಿತ್ತು, ಇನ್ನು 2020ಕ್ಕೆ ಈ ಹೂ ಅರಳುತ್ತದೆ.
1826ರಿಂದ 1934ರವರೆಗೆ ಕುರಂಜಿ ಹೂವಿನ ದಾಖಲೆಯನ್ನು ಮಾಡಲಾಗಿದ್ದು, ಬಾಂಬೆ ನ್ಯಾಚುರಲ್ ಹಿಸ್ಟ್ರಿ ಜರ್ನಲ್ನಲ್ಲಿ ಇದು ಪ್ರಕಟಗೊಂಡಿತ್ತು.
ಭಾರತೀಯ ಅಂಚೆ ಇಲಾಖೆಯು ಈ ಹೂವಿನ ಗೌರವಾರ್ಥ 2006ರ ಮೇ 29ರಂದು ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.