ಭಾರತ ಕಂಡ ಶ್ರೇಷ್ಠ ಕವಿ ಮತ್ತು ಸಂತ. ಮಹಾನ್ ಆಧ್ಯಾತ್ಮ ಪುರುಷರಾಗಿದ್ದ ಇವರು ತಮ್ಮ ಪ್ರೇರಣಾದಾಯಕ ಪದ್ಧತಿ ಮತ್ತು ಸಂಸ್ಕೃತಿಗಳಿಂದ ವಿಶ್ವ ಪ್ರಸಿದ್ಧರಾದರು.
ಇವರು ರಮಾನಂದರಿಂದ ಬಾಲ್ಯದಲ್ಲೇ ಆಧ್ಯಾತ್ಮ ತರಬೇತಿಯನ್ನು ಪಡೆದಿದ್ದರು. ಬಳಿಕ ಅವರ ಶಿಷ್ಯರಾದರು.
ಕಬೀರರ ಹೆತ್ತವರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಅವರನ್ನು ಮುಸ್ಲಿಂ ಕುಟುಂಬವೊಂದು ಪೋಷಣೆ ಮಾಡಿತು ಎನ್ನಲಾಗಿದೆ.
ಹಿಂದು ಮತ್ತು ಮುಸ್ಲಿಂ ಧರ್ಮ ಎರಡರ ಅನುಯಾಯಿಯಾಗಿದ್ದ ಅವರು ಹಿಂದುತ್ವ ಮತ್ತು ಇಸ್ಲಾಂನ್ನು ಸಂಯೋಜನೆಗೊಳಿಸಿ ಹೊಸ ವಿಶ್ವಪಥವನ್ನು ತೋರಿದರು.
ಜೀವಾತ್ಮ ಮತ್ತು ಪರಮಾತ್ಮ ಎಂಬ ಎರಡು ಪ್ರಮುಖ ಸಿದ್ಧಾಂತಗಳೊಂದಿಗೆ ಎಲ್ಲರ ಬದುಕಿಗೆ ಸಂಬಂಧವಿದೆ ಎಂಬುದು ಇವರ ಪ್ರತಿಪಾದನೆಯಾಗಿತ್ತು. ಇವರ ಬಿಜಾಕ್ ಬರವಣಿಗೆ ಕವಿತೆಗಳ ಮಹಾನ್ ಭಂಡಾರವಾಗಿದ್ದು, ಆಧ್ಯಾತ್ಮ ಬಗೆಗಿನ ಅವರ ದೃಷ್ಟಿಕೋನ ಇದರಲ್ಲಿ ಪ್ರತಿಫಲನವಾಗಿದೆ.
ಭಾರತೀಯ ಅಂಚೆ ಇಲಾಖೆಯು ಇವರ ಸ್ಮರಣಾರ್ಥ ೧೯೫೨ ರ ಅಕ್ಟೋಬರ್ ೧ ರಂದು ಪೋಸ್ಟಲ್ ಸ್ಟ್ಯಾಂಪನ್ನು ಬಿಡುಗಡೆಗೊಳಿಸಿತ್ತು.
Issued Date : 01.10.1952
Denomination: 0.09 Paise
Courtesy : Stamp Today Group (Sri Jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.