ಮಂಗಳೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿದ್ದು, ಅದನ್ನು ಮಾಡಿಸಿಕೊಳ್ಳುವಲ್ಲಿ ನಾಗರಿಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಹೇಳಿದರು. ಅವರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಾಗರಿಕರ ಅನುಕೂಲತೆಗಾಗಿ ಕುಲಶೇಖರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಧಾರ್ ಕಾರ್ಡ್ ನೊಂದಾವಣಿ ಕೇಂದ್ರಕ್ಕೆ ಭೇಟಿ ಕೊಟ್ಟ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಮಿಡ್ ಡೇ ಮಿಲ್, ದೀನದಯಾಳ್ ಅಂತ್ಯೋದಯ ಯೋಜನಾ, ರಾಷ್ಟ್ರೀಯ ಗ್ರಾಮೀಣ ಮಿಶನ್, ಬೀಡಿ, ಕಲ್ಲುಗಾರಿಕೆ, ಲೈಮ್ ಸ್ಟೋನ್ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ, ಫಸಲು ವಿಮೆ ಯೋಜನೆ, ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ, ಗೃಹ ಕಲ್ಯಾಣ ಸ್ಕೀಮ್, ಭೂಮಿ ಆರೋಗ್ಯ ಕಾರ್ಡ್, ಗರ್ಭಿಣಿ ಆರೋಗ್ಯ ಕಾರ್ಡ್, ಉದ್ಯೋಗಸ್ಥ ಮಹಿಳೆಯರಿಗೆ ಸಾಲ ಸೌಲಭ್ಯ, ಪೌಷ್ಟಿಕಾಂಶ ಆಹಾರ ಸ್ಕೀಮ್, ಕೃಷಿಕರಿಗೆ ಕ್ಯಾಶ್ ಸಬ್ಸಿಡಿ, ಮಹಿಳಾ ಸಬಲೀಕರಣ ಸ್ಕೀಮ್, ವಿದ್ಯಾರ್ಥಿಗಳಿಗೆ ಕೇಂದ್ರಿಯ ಸ್ಕಾಲರ್ ಶಿಪ್ ಸ್ಕೀಮ್, ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಆರೋಗ್ಯ ಮಿಶನ್ ಎಲ್ಪಿಜಿ ಸಬ್ಸಿಡಿ ಪಡೆದುಕೊಳ್ಳಲು, ಜನಧನ್ ಖಾತೆ ತೆರೆಯಲು ಆ ಮೂಲಕ ರೂಪೇ ಕಾರ್ಡ್, ಝೀರೋ ಬ್ಯಾಲೆನ್ಸ್, ಲೈಫ್ ಅಪಘಾತ ವಿಮೆ ಪಡೆಯಲು, ಪಾಸ್ ಪೋರ್ಟ್ ಮಾಡಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಡಿಜಿಟಲ್ ಲಾಕರ್ ತೆರೆಯಲು, ಪೆನ್ಶನ್ ಸ್ಕೀಮ್, ಪ್ರಾವಿಡೆಂಟ್ ಫಂಡ್ ಮತ್ತು ಬ್ಯಾಂಕಿನಲ್ಲಿ ಹೊಸ ಖಾತೆ ತೆರೆಯಲು ಆಧಾರ್ ಕಾರ್ಡ್ ಅಗತ್ಯ. ಹಾಗೇ ವೋಟರ್ ಕಾರ್ಡಿಗೆ ಲಿಂಕ್ ಮಾಡುವುದರಿಂದ ಸುಳ್ಳು ವೋಟಿಂಗ್ ಕಾರ್ಡ್ ನಿಲ್ಲಿಸಬಹುದು. ಆದ್ದರಿಂದ ಭಾರತದ ಜವಾಬ್ದಾರಿಯುತ ನಾಗರಿಕರಾಗಿ, ದೇಶದ ಅಭಿವೃದ್ಧಿಗೆ ಬಿಜೆಪಿಯೊಂದಿಗೆ ಕೈ ಜೋಡಿಸುವ ಮೂಲಕ ಪ್ರತಿಯೊಬ್ಬ ನಾಗರಿಕರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.