ಸ್ಟ್ರಾಬೆರಿಗೆ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ ಸತರ ಜಿಲ್ಲೆಯ ಭಿಲ್ಸರ್ ಇದೀಗ ದೇಶದ ಮೊದಲ ‘ಬುಕ್ ವಿಲೇಜ್’ ಆಗಿ ಗುರುತಿಸಿಕೊಂಡಿದೆ. ಇಲ್ಲಿ 25 ಪುಸ್ತಕ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾರೂ ಬೇಕಾದರು ಬಂದು ಉಚಿತವಾಗಿ ಓದಿಕೊಳ್ಳಬಹುದು.
ದೇವೇಂದ್ರ ಫಡ್ನವಿಸ್ ಅವರ ಯೋಜನೆಯಂತೆ ಈ ಗ್ರಾಮವನ್ನು ’ಬುಕ್ ವಿಲೇಜ್’ ಆಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ 25 ಜಾಗಗಳನ್ನು ಕಲಾತ್ಮಕವಾಗಿ ಸಿಂಗರಿಸಲಾಗಿದ್ದು, ಪುಸ್ತಕ, ಮ್ಯಾಗಜೀನ್, ಆತ್ಮಚರಿತ್ರೆ, ಜೀವನಚರಿತ್ರೆಗಳನ್ನು ಇಲ್ಲಿ ದೊರೆಯುತ್ತದೆ.
ಇತಿಹಾಸ, ಧಾರ್ಮಿಕತೆ, ಸಾಹಿತ್ಯ, ಮಹಿಳೆ, ಮಕ್ಕಳು, ಪರಿಸರ, ಜಾನಪದಕ್ಕೆ ಸಂಬಂಧಪಟ್ಟ ಪುಸ್ತಕಗಳೂ ಇಲ್ಲಿ ಸಿಗುತ್ತದೆ. ಪ್ರವಾಸಿಗರು, ಸ್ಥಳಿಯರು ಬಂದು ಇಲ್ಲಿ ತಮಗೆ ಬೇಕಾದುದನ್ನು ಉಚಿತವಾಗಿ ಓದಿಕೊಳ್ಳಬಹುದು.
ಕುರ್ಚಿ, ಮೇಜು, ಅಲಂಕೃತ ಕೊಡೆಗಳು, ಗ್ಲಾಸ್ ಕಪ್ಬೋರ್ಡ್ಗಳನ್ನು ಮಹಾರಾಷ್ಟ್ರ ಸರ್ಕಾರವೇ ಒದಗಿಸಿಕೊಟ್ಟಿದೆ.
ಈ ಗ್ರಾಮದ ಪಕ್ಕದಲ್ಲಿ ಪ್ರವಾಸಿ ತಾಣಗಳ ಪಂಚಾಗನಿ, ಮಹಬಲೇಶ್ವರ ಹಿಲ್ ಸ್ಟೇಶನ್ಗಳಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ’ಬುಕ್ ವಿಲೇಜ್’ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ಸಾಹಿತ್ಯ ಹಬ್ಬಗಳನ್ನೂ ನಡೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.