ಭಾರತೀಯ ಕಲೆಯಲ್ಲಿ ಅಭೂಪೂರ್ವ ಪರಿವರ್ತನೆಯನ್ನು ತಂದ ಮಹಾನ್ ಕಲಾವಿದ ರಾಜ ರವಿವರ್ಮಾ. ಇವರು ಹುಟ್ಟಿದ್ದು 1848ರ ಎಪ್ರಿಲ್ 29ರಂದು. ಇಂದು ಆತನ 168ನೇ ಜನ್ಮದಿನ. ಈತನ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1971ರ ಎಪ್ರಿಲ್ 29ರಂದು ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಿತ್ತು.
ಈ ಸ್ಟ್ಯಾಂಪ್ ಇವರ ಭಾವಚಿತ್ರದೊಂದಿಗೆ, ಇವರ ಪ್ರಸಿದ್ಧ ಚಿತ್ರ ನಳ-ಧಮಯಂತಿಯನ್ನು ಒಳಗೊಂಡಿದೆ.
ರಾಜ ರವಿವರ್ಮಾ 19ನೇ ಶತಮಾನದ ಅತಿ ಶ್ರೇಷ್ಠ ಕಲಾವಿದ ಮತ್ತು ಚಿತ್ರಗಾರ. ಕೇರಳದ ಸಣ್ಣ ಗ್ರಾಮವೊಂದರಲ್ಲಿ ಕಲಾವಿದರ, ಬರಹಗಾರರ ಕುಟುಂಬದಲ್ಲಿ ಜನಿಸಿದರು.
ಯುರೋಪಿಯನ್ ತಂತ್ರಗಾರಿಕೆಯೊಂದಿಗೆ ಭಾರತೀಯ ಭಾವನಾತ್ಮಕತೆಯ ಫ್ಯೂಶನ್ಗಳಿಗೆ ಇವರ ಚಿತ್ರಗಳು ಹೆಸರುವಾಸಿ. ಯುರೋಪಿಯನ್ ವಾಸ್ತವಿಕತೆಯ ವಾತಾವರಣದೊಂದಿಗೆ ಭಾರತೀಯ ದೇವ, ದೇವತೆಯರ ಚಿತ್ರ ಬಿಡಿಸಿದ ಮೊದಲ ಭಾರತೀಯ ಕಲಾವಿದ.
ದುಶ್ಯಂತ-ಶಕುಂತಲಾ, ನಳ-ಧಮಯಂತಿ ಮುಂತಾದ ಅತೀ ಅದ್ಭುತ ಚಿತ್ರಗಳನ್ನು ಇವರು ಬಿಡಿಸಿದ್ದಾರೆ. ತನ್ನ ಕಲಾ ಸಾಧನೆಗಳಿಗಾಗಿ ಇವರು ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ಕೇರಳ ಸರ್ಕಾರ ಇವರ ಹೆಸರಲ್ಲಿ ’ರಾಜ ರವಿವರ್ಮಾ ಪುರಸ್ಕಾರಂ’ ಎಂಬ ಪ್ರಶಸ್ತಿಯನ್ನು ಆರಂಭಿಸಿದೆ.
1906ರ ಅಕ್ಟೋಬರ್ 2ರಂದು ಇವರು ಇಹಲೋಕ ತ್ಯಜಿಸಿದರು.
Issued Date : 29-04-1971
Denomination : 20 Paise
Courtesy : Stamp Today Group (Sri Jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.