1997ರಲ್ಲಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಗೊಂಡ 3 ಮಾಸ್ಟಡ್ ಬಾರ್ಕ್ ಹೊಂದಿರುವ ನೌಕಾ ತರಬೇತಿ ಹಡಗು ಐಎನ್ಎಸ್ ತರಂಗಿಣಿ ಗೌರವಾರ್ಥ 2006ರ ಎಪ್ರಿಲ್ 25ರಂದು ಭಾರತೀಯ ಅಂಚೆ ಇಲಾಖೆ ಮಿನಿಯೇಚರ್ ಶೀಟ್ನೊಂದಿಗೆ ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಿತ್ತು.
ತರಂಗಿಣಿಯನ್ನು ಗೋವಾದಲ್ಲಿ ನಿರ್ಮಿಸಲಾಗಿದ್ದು, ಬ್ರಿಟಿಷ್ ನಾವೆಲ್ ಆರ್ಕಿಟೆಕ್ಟ್ ಕೊಲಿನ್ ಮುಡಿ ಇದರ ವಿನ್ಯಾಸಗೊಳಿಸಿದೆ. 1995ರ ಡಿಸೆಂಬರ್ 1ಕ್ಕೆ ಇದು ಚಾಲನೆಗೊಂಡಿದ್ದು, ಭಾರತೀಯ ನೌಕೆಗೆ 1997ರಲ್ಲಿ ಸೇರ್ಪಡೆಗೊಂಡಿತ್ತು. 2003-04ರಲ್ಲಿ ಜಾಗತಿಕ ಪ್ರದಕ್ಷಿಣೆ ಆರಂಭಿಸಿದ ಈ ನೌಕೆ ಭಾರತದ ಮೊದಲ ವಿಶ್ವ ಪ್ರದಕ್ಷಿಣೆ ಹಾಕಿದ ನೌಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು.
ಭಾರತೀಯ ನೌಕಾ ಸಿಬ್ಬಂದಿಗಳಿಗೆ ನೌಕಾಯಾನದ ತರಬೇತಿ ನೀಡುವ ಸಲುವಾಗಿ ಹಿಂದೂ ಮಹಾಸಾಗರವನ್ನು ಇದು ಪ್ರದಕ್ಷಿಣೆ ಹಾಕಿದೆ. ಜಾಗತಿಕ ಮಟ್ಟದಲ್ಲಿ ಪ್ರದಕ್ಷಿಣೆ ಮಾಡಿದ ಈ ಹಡಗು 33 ಸಾವಿರ ನಾಟಿಕಲ್ ಮೈಲ್ಸ್ ಯಾನ ಮಾಡಿದ್ದು, 18 ದೇಶಗಳ 36 ಪೋರ್ಟ್ಸ್ಗಳನ್ನು ಸುತ್ತಿದೆ. 2004ರ ಎಪ್ರಿಲ್ 25ರಂದು ಈ ಜಾಗತಿಕ ಪ್ರದಕ್ಷಿಣೆ ಮುಗಿಸಿ ಬಂದ ಈ ಹಡಗನ್ನು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಅಭೂತಪೂರ್ವ ಸ್ವಾಗತ ಕೋರಿದರು.
Courtesy : Stamp Today Group (Sri Jaganath Mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.