ಭಾರತದ ಮೊತ್ತ ಮೊದಲ ಚಲನಚಿತ್ರ ‘ರಾಜಾ ಹರಿಶ್ಚಂದ್ರ’ 1913ರ ಎಪ್ರಿಲ್ 21ರಂದು ಬಿಡುಗಡೆಗೊಂಡಿತ್ತು. ಇದರ ಸ್ಮರಣಾರ್ಥ ಅಂಚೆ ಇಲಾಖೆಯು 1989ರ ಮೇ 30ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಈ ಸಿನಿಮಾದ ದೃಶ್ಯವನ್ನು ಸ್ಟ್ಯಾಂಪ್ನಲ್ಲಿ ಚಿತ್ರಿಸಲಾಗಿತ್ತು.
ದಾದಾ ಸಾಹೇಬ್ ಫಾಲ್ಕೆ ಎಂದು ಪ್ರಸಿದ್ಧರಾಗಿರುವ ಧನುರಾಜ್ ಗೋವಿಂದ ಫಾಲ್ಕೆ ಅವರು ರಾಜಾ ಹರಿಶ್ಚಂದ್ರ ಸಿನಿಮಾವನ್ನು ನಿರ್ದೇಶಿಸಿದ್ದು, ಇದು ಭಾರತದಲ್ಲಿ ಸಿನಿಮಾಗಳ ಉಗಮಕ್ಕೆ ಹೊಸ ಮುನ್ನಡಿಯನ್ನು ಬರೆಯಿತು. 1913ರ ಎಪ್ರಿಲ್ 21ರಂದು ಈ ಸಿನಿಮಾ ಒಲಿಂಪಿಕ್ ಸಿನಿಮಾದಲ್ಲಿ ಪ್ರಿವ್ಯುವ್ ಶೋ ಕಂಡಿತು. ಮೇ 30ರಂದು ಮುಂಬಯಿಯ ಕೊರೊನೇಷನ್ ಥಿಯೇಟರ್ನಲ್ಲಿ ಬಿಡುಗಡೆಗೊಂಡಿತು. ಫಾಲ್ಕೆ ಅವರ ಇಡೀ ಕುಟುಂಬವೇ ಈ ಸಿನಿಮಾದ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿತ್ತು.
ಭಾರತದ ಪುರಾತತ್ವ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಒರ್ವ ಪ್ರಿಂಟರ್ ಕೂಡ ಆಗಿದ್ದ ಫಾಲ್ಕೆ ಫ್ರೆಂಚ್ನ ’ಲೈಫ್ ಆಫ್ ಕ್ರಿಸ್ತ್’ ಸಿನಿಮಾವನ್ನು ನೋಡಿ ತಾನೂ ಒರ್ವ ಸಿನಿಮಾ ನಿರ್ಮಾತೃ ಆಗಬೇಕು ಎಂಬ ಪಣತೊಟ್ಟು ಲಂಡನ್ನತ್ತ ಪ್ರಯಾಣಿಸಿ ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಕಲಿತವರು. ಬಳಿಕ ಭಾರತಕ್ಕೆ ಕ್ಯಾಮೆರಾ, ಪ್ರಿಂಟಿಂಗ್ ಮೆಶಿನ್, ಪರ್ಫೋರೇಟರ್, ಕಚ್ಛಾ ಸಿನಿಮಾ ತಂದರು. ಬಳಿಕ ಇವರು ನಿರ್ಮಿಸಿದ ಸಿನಿಮಾವೇ ರಾಜಾ ಹರಿಶ್ಚಂದ್ರ.
ಮಹಿಳೆಯರು ನಟಿಸಲು ಒಪ್ಪದ ಕಾರಣ ಹರಿಶ್ಚಂದ್ರ ಸಿನಿಮಾದಲ್ಲಿ ಪುರುಷನನ್ನೇ ತಾರಮತಿ ಮಾಡಬೇಕಾಯಿತು. ಮಥುರ ದಾದರ್ನಲ್ಲಿ, ಪುಣೆಯಲ್ಲಿ ಇದರ ಶೂಟಿಂಗ್ ಜರಗಿತು.
Courtesy : Stamp Today Group (Sri Jaganath Mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.