ವಿಶ್ವ ಪ್ರಸಿದ್ಧ ವರ್ಣಚಿತ್ರಗಾರ ಜೆಮಿನಿ ರಾಯ್ ಅವರ ಗೌರವಾರ್ಥ ಅವರ ವರ್ಣಚಿತ್ರಗಳನ್ನು ಬಿಂಬಿಸುವ ಎರಡು ಪೋಸ್ಟಲ್ ಸ್ಟ್ಯಾಂಪ್ಗಳನ್ನು ಅಂಚೆ ಇಲಾಖೆ 1978ರ ಮಾರ್ಚ್ 23ರಂದು ಹೊರತಂದಿದೆ.
ಜೆಮಿನಿ ರಾಯ್ 20ನೇ ಶತಮಾನದ ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಪ್ರಮುಖ ವರ್ಣಚಿತ್ರಗಾರ. 1887ರ ಎಪ್ರಿಲ್ 20ರಂದು ಬಂಗಾಳದ ಬಂಕುರ ಜಿಲ್ಲೆಯ ಮಧ್ಯಮವರ್ಗದ ಕುಟುಂಬದಲ್ಲಿ ಇವರು ಜನಿಸಿದರು. ಇವರ ತಂದೆ ರಾಮತರನ್ ರಾಯ್ ಕೂಡ ಒರ್ವ ಕಲೆಗಾರನಾಗಿದ್ದರು.
ವಿದ್ಯಾರ್ಥಿ ಜೀವನದಲ್ಲಿ ಯುರೋಪಿಯನ್ ಪದ್ಧತಿಯ ವರ್ಣಚಿತ್ರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು ಆರಂಬದಲ್ಲಿ ಅದರ ಮೂಲಕವೇ ಜನಪ್ರಿಯತೆ ಪಡೆಯಲಾರಂಭಿಸಿದರು. ಬಳಿಕ ನಿಧಾನಕ್ಕೆ ತಮ್ಮದೇ ಶೈಲಿಯ ಭಾರತದ ಜಾನಪದ, ಗ್ರಾಮೀಣ ಕಲೆಯನ್ನು ಒಳಗೊಂಡ ವರ್ಣಚಿತ್ರಗಳನ್ನು ರಚಿಸಲಾರಂಭಿಸಿದರು. ತಮ್ಮ ತೈಲ ವರ್ಣಚಿತ್ರಗಳ ಮೂಲಕ ಗ್ರಾಮೀಣ ಬಂಗಾಳಿಗಳ ದೈನಂದಿನ ಬದುಕನ್ನು ಇವರು ಚಿತ್ರಿಸಿದರು.
ರಾಯಾಯಣ, ಶ್ರೀ ಚೈತನ್ಯ, ರಾಧಕೃಷ್ಣ, ಏಸುಕ್ರಿಸ್ತರೂ ಇವರ ವರ್ಣಚಿತ್ರಗಳಲ್ಲಿ ಮೂಡಿಬಂದರು. ಬಡವರಿಗೂ ತನ್ನ ವರ್ಣಚಿತ್ರಗಳು ತಲುಪಬೇಕು ಎಂಬ ಕಾರಣಕ್ಕೆ ದೀಪದ ಮಸಿ, ಚಾಕ್ ಪೌಡರ್, ಎಲೆ, ಬಳ್ಳಿಗಳು ಮುಂತಾದ ದೇಶಿ ಪರಿಹರಗಳನ್ನು ಬಳಸಿ ವರ್ಣಚಿತ್ರ ತಯಾರಿಸುತ್ತಿದ್ದರು.
1938ರಲ್ಲಿ ಇವರ ವರ್ಣಚಿತ್ರಗಳ ಎಕ್ಸಿಬಿಷನ್ ಕೋಲ್ಕತ್ತಾದಲ್ಲಿ ನಡೆಯಿತು. 1940ರ ವೇಳೆಗೆ ಇವರ ವರ್ಣಚಿತ್ರಗಳು ಬಹಳಷ್ಟು ಪ್ರಸಿದ್ಧಿ ಪಡೆಯಿತು, 1946ರಲ್ಲಿ ಲಂಡನ್ನಲ್ಲಿ, 1953ರಲ್ಲಿ ನ್ಯೂಯಾರ್ಕ್ನಲ್ಲಿ ಇವರ ವರ್ಣಚಿತ್ರಗಳ ಎಕ್ಸಿಬಿಷನ್ ನಡೆದವು. 1955ರಲ್ಲಿ ಪದ್ಮವಿಭೂಷಣ ನೀಡಿ ಇವರನ್ನು ಗೌರವಿಸಲಾಯಿತು. 1953ರಲ್ಲಿ ನಿಧನರಾದರು.
Courtesy : Stamp Today Group (Sri Jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.