‘ಮಹರ್ಷಿ’ ಎಂದೇ ಖ್ಯಾತರಾಗಿರುವ ಸಮಾಜ ಸುಧಾರಕ ದಂಡೋ ಕೇಶವ ಕಾರ್ವೆ ಅವರ ಗೌರವಾರ್ಥ ಅಂಚೆ ಇಲಾಖೆ 1958ರ ಎಪ್ರಿಲ್ 18ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿತ್ತು. ಜೀವಂತವಾಗಿದ್ದಾಗಲೇ ಪೋಸ್ಟಲ್ ಸ್ಟ್ಯಾಂಪ್ನಲ್ಲಿ ಚಿತ್ರಿತಗೊಂಡ ದೇಶದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ.
ಕೇಶವ ಕಾರ್ವೆ ದೇಶಕಂಡ ಶ್ರೇಷ್ಠ ಸಾಮಾಜಿಕ ಸುಧಾರಕ ಮತ್ತು ಶಿಕ್ಷಣತಜ್ಞ. ಮಹಿಳಾ ಶಿಕ್ಷಣ ಮತ್ತು ಹಿಂದೂ ವಿಧವಾ ವಿವಾಹಕ್ಕಾಗಿ ಜೀವನದುದ್ದಕ್ಕೂ ಪ್ರಚಾರ ನಡೆಸಿದ ಧೀಮಂತ ನಾಯಕ. 1858ರ ಎಪ್ರಿಲ್ 18ರಂದು ಮಹಾರಾಷ್ಟ್ರದ ಶೆರವಳಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಇವರು ಜನಿಸಿದರು.
1893ರಲ್ಲಿ ‘ವಿಧವಾ ವಿವಾಹೋತ್ತೇಜಕ್ ಮಂಡಳಿ’ಯನ್ನು ಸ್ಥಾಪಿಸಿದರು. ಇದರ ಮುಖೇನಾ ವಿಧವೆಯರ ವಿವಾಹಕ್ಕೆ ಹೆಚ್ಚು ಒತ್ತು ನೀಡಿದರು. ಮಾತ್ರವಲ್ಲ ಸ್ವತಃ ಒರ್ವ ವಿಧವೆಯನ್ನು ವಿವಾಹವಾಗಿ ಇತರರಿಗೆ ಮಾದರಿಯಾದರು. 1896ರಲ್ಲಿ ವಿಧವೆಯರಿಗಾಗಿ ನವಸತಿ ಮತ್ತು ಶಾಲೆಗಳನ್ನೂ ಕಟ್ಟಿದರು. ಗಣಿತಶಾಸ್ತ್ರದಲ್ಲಿ ಪದವಿ ಪಡೆದ ಇವರು ಗಣಿತ ಶಿಕ್ಷಕನಾಗಿಯೂ ಕಾರ್ಯನಿರ್ವಹಿಸಿದರು.
1907ರಲ್ಲಿ ಮಹಿಳಾ ವಿದ್ಯಾಲಯ, 1908ರಲ್ಲಿ ನಿಶ್ಕಮ್ ಕರ್ಮ ಮಠವನ್ನು ಸ್ಥಾಪಿಸಿದರು. 1916ರಲ್ಲಿ ಭಾರತದ ಮೊಟ್ಟ ಮೊದಲ ಮಹಿಳಾ ವಿಶ್ವವಿದ್ಯಾಲಯವನ್ನು ಪುಣೆಯಲ್ಲಿ ನಿರ್ಮಿಸಿದ ಕೀರ್ತಿ ಇವರದ್ದು. 1958ರಲ್ಲಿ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ.
1962ರಲ್ಲಿ ತಮ್ಮ 104ನೇ ವಯಸ್ಸಲ್ಲಿ ಇವರು ದೈವಾಧೀನರಾದರು.
Courtesy : Stamp Today Group (Sri Jaganath Mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.