ಸಂವಿಧಾನ ಶಿಲ್ಪಿ ಡಾ.ಭೀಮ್ರಾವ್ ರಾಮ್ಜೀ ಅಂಬೇಡ್ಕರ್ ಅವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಇದುವರೆಗೆ ಒಟ್ಟು 8 ಪೋಸ್ಟಲ್ ಸ್ಟ್ಯಾಂಪ್ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 5 ಸ್ಮರಣಾರ್ಥ ಸ್ಟ್ಯಾಂಪ್ಗಳಾದರೆ, 3 ನಿರ್ಣಾಯಕ ಸ್ಟ್ಯಾಂಪ್ಗಳಾಗಿವೆ.
2015ರ ಸೆಪ್ಟಂಬರ್ 30ರಂದು ಅಂಬೇಡ್ಕರ್ ಅವರ 125ನೇ ಜಯಂತಿಯ ಅಂಗವಾಗಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿತ್ತು. ಅಂಬೇಡ್ಕರ್ ಮತ್ತು ಅವರನ್ನು ಮಣ್ಣು ಮಾಡಲಾದ ಚೈತ್ಯಭೂಮಿಯ ಚಿತ್ರವುಳ್ಳ ಸ್ಟ್ಯಾಂಪ್ ಇದಾಗಿದೆ.
1891ರ ಎಪ್ರಿಲ್ 1ರಲ್ಲಿ ಮಧ್ಯಪ್ರದೇಶದ ಮೇವಾದಲ್ಲಿ ಜನಿಸಿದ ಅಂಬೇಡ್ಕರ್, ಸ್ವತಂತ್ರ ಭಾರತದ ಮೊತ್ತ ಮೊದಲ ಕಾನೂನು ಸಚಿವ. ಸಂವಿಧಾನ ರಚನೆಯಲ್ಲಿ ಇವರು ವಹಿಸಿದ ಪಾತ್ರ ಅಪಾರ. ದಲಿತ ಸಮುದಾಯದ ಏಳಿಗೆಗಾಗಿ, ಅವರ ಹಕ್ಕುಗಳ ರಕ್ಷಣೆಗಾಗಿ ಅವರು ಮಾಡಿದ ಕಾರ್ಯ ಇಂದಿಗೂ ಅವರನ್ನೊಬ್ಬ ಧೀಮಂತ ದಲಿತ ನಾಯಕನನ್ನಾಗಿಸಿದೆ.
ಒರ್ವ ವಕೀಲನಾಗಿ, ರಾಜಕಾರಣಿಯಾಗಿ, ಸಮಾಜ ಸುಧಾರಕನಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ ಇವರಿಗೆ 1990ರಲ್ಲಿ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಲಾಯಿತು.
ಜೀವನದುದ್ದಕ್ಕೂ ದಲಿತರಿಗಾಗಿ, ಸಾಮಾಜಿಕವಾಗಿ ಹಿಂದುಳಿದವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಹುಟ್ಟು ಹೋರಾಟಗಾರ ಅಂಬೇಡ್ಕರ್ 1956ರ ಡಿಸೆಂಬರ್ 6ರಂದು ಇವರು ತಮ್ಮ ದೆಹಲಿಯ ನಿವಾಸದಲ್ಲಿ ಕೊನೆಯುಸಿರೆಳೆದರು.
Courtesy : Stamp Today Group (Sri Jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.