ಮಹಾಕಾವ್ಯ ರಚಿಸದೆಯೇ ಮಲಯಾಳಂನ ಮಹಾಕವಿ ಎನಿಸಿದ ಎನ್. ಕುಮಾರನ್ ಅಸನ್ ಅವರ ಸ್ಮರಣಾರ್ಥ 1973 ರ ಏಪ್ರಿಲ್ 12 ರ ಇವರ ಜನ್ಮ ದಿನದಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆ ಮಾಡಿತ್ತು.
ಎನ್. ಕುಮಾರನ್ ಅಸನ್ ಅವರು 1873 ರ ಏಪ್ರಿಲ್ 12 ರಂದು ಕೇರಳದಲ್ಲಿ ಜನಿಸಿದರು. ಇವರು ಮಹಾಕವಿ ಕುಮಾರನ್ ಅಸನ್ ಎಂದೇ ಪ್ರಖ್ಯಾತರು. ಕೇರಳದ ಪ್ರಸಿದ್ಧ ತಿರುಂವಿರತೆ ಕವಿಗಳಲ್ಲಿ ಒಬ್ಬರು. ಇವರೊಬ್ಬ ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಶ್ರೀನಾರಾಯಣ ಗುರುಗಳ ಶಿಷ್ಯರು.
ಮಲಯಾಳಂ ಸಾಹಿತ್ಯದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಕೀರ್ತಿ ಇವರದ್ದು. ನೈತಿಕತೆಯ ಆಳ ಮತ್ತು ಆಧ್ಯಾತ್ಮಿಕ ಬದ್ಧತೆ ಇವರ ಸಾಹಿತ್ಯದ ಜೀವಾಳ. ಕೇಂದ್ರೀಕೃತ ಸಾಹಿತ್ಯ ಮತ್ತು ನಾಟಕೀಯ ವಿಷಯಾಧಾರಿತಗಳು ಇವರ ಸಾಹಿತ್ಯದಲ್ಲಿ ಕಂಡುಬರುತ್ತದೆ.
ಗಣಿತ ಮತ್ತು ಸಂಸ್ಕೃತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು, ಇದರಲ್ಲಿ ಪರಿಣಿತಿಯನ್ನು ಪಡೆದಿದ್ದರು. ತಮ್ಮ ತಂದೆಯ ಪ್ರಯತ್ನದಿಂದ ತಮ್ಮ 14 ನೇ ವಯಸ್ಸಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಮತ್ತು ಅಕೌಂಟೆಂಟ್ ವೃತ್ತಿಯನ್ನು ಪಡೆಯಲು ಯಶಸ್ವಿಯಾದರೂ 2 ವರ್ಷಗಳ ಬಳಿಕ ಆ ಕೆಲಸಗಳನ್ನು ತೊರೆದು ಸಂಸ್ಕೃತದಲ್ಲಿ ಉನ್ನತ ವ್ಯಾಸಂಗ ಮಾಡಿದರು.
ಇವರ ಸಣ್ಣ ಕೃತಿ ‘ವೀಣಾ ಪೂವು’ ಸಾಹಿತ್ಯ ಕ್ಷೇತ್ರದ ಮಹತ್ವದ ಸಾಧನೆ. ಇದು ಮಲಯಾಳಂ ಸಾಹಿತ್ಯದಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿತು.
ಇವರ ಕಂದ ಕಾವ್ಯಗಳಾದ ನಳಿನಿ, ಲೀಲಾ, ಕರುಣಾ, ಚಂದಲಾಭಿಕ್ಷುಕಿ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಶ್ಲಾಘನೆಯನ್ನು ಜನಪ್ರಿಯತೆಯನ್ನು ಗಳಿಸಿದವುಗಳು.
ಅಡ್ವಿನ್ ಅರ್ನಾಲ್ಡೋ ಅವರ ಲೈಟ್ ಆಫ್ ಏಶಿಯಾದಿಂದ ಸ್ಫೂರ್ತಿ ಪಡೆದು ಇವರು ಬುದ್ಧ ಚರಿತ ಎಂಬ ಐತಿಹಾಸಿಕ ಗದ್ಯವನ್ನು ಬರೆದರು.
1924 ರ ಜನವರಿಯಲ್ಲಿ ನಡೆದ ದೋಣಿ ಅಪಘಾತದಲ್ಲಿ ಇವರು ಮೃತರಾದರು.
ಮಲಯಾಳಂನಲ್ಲಿ ಮಹಾಕಾವ್ಯವನ್ನು ರಚಿಸದೆಯೇ ಮಹಾಕವಿ ಎನಿಸಿಕೊಂಡ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.
Courtesy : Stamp Today Group (Sri Jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.