ಶ್ರೀಕಾಕುಲಂ: ಶ್ರೀಕೂರ್ಮಮ್ ದೇಗುಲ ಮತ್ತು ಅರಸವಳ್ಳಿ ದೇಗುಲ ಭಾರತದ ವಾಸ್ತುಶಿಲ್ಪ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಎರಡು ದೇಗುಲಗಳ ಪೋಸ್ಟಲ್ ಸ್ಟ್ಯಾಂಪ್ ಮತ್ತು ಮಿನಿಯೇಚರ್ ಶೀಟ್ಗಳನ್ನು 2013ರ ಎಪ್ರಿಲ್ 11ರಂದು ಯುಗಾದಿಯ ದಿನ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು.
ಶ್ರೀ ಕಾಕುಲಂನಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಕೇಂದ್ರ ಸಚಿವ ಕಿಲ್ಲಿ ಕೃಪಾರಾಣಿ ಅವರು ಇದನ್ನು ಲೋಕಾರ್ಪಣೆಗೊಳಿಸಿದ್ದರು. ಇದೇ ವೇಳೆ ಅರಸವಳ್ಳಿ ಮತ್ತು ಶ್ರೀಕೂರ್ಮಮ್ ದೇಗುಲದ ಪರ್ಮನೆಂಟ್ ಪಿಕ್ಟೋರಿಯಲ್ ಸಂಗ್ರಹಗಳನ್ನು ಪರಿಚಯಿಸಲಾಯಿತು. ಈ ಸಂಗ್ರಹಗಳು ಅರಸವಳ್ಳಿ ಮತ್ತು ಶ್ರೀಕೂರ್ಮಮ್ ಸಬ್-ಪೋಸ್ಟ್ ಆಫೀಸ್ಗಳಲ್ಲಿ ಲಭ್ಯವಿದೆ.
ಅರಸವಳ್ಳಿ ದೇಗುಲ 7ನೇ ಶತಮಾನದ ಆಂಧ್ರಪ್ರದೇಶದ ಸೂರ್ಯ ದೇಗುಲವಾಗಿದೆ. ಒಡಿಸ್ಸಾ ವಿಶ್ವಕರ್ಮ ಶಿಲ್ಪಿಗಳ ವಾಸ್ತುಶಿಲ್ಪ ತಜ್ಞತೆಯನ್ನು ಈ ದೇಗುಲ ಸಾರುತ್ತದೆ. ಕಳಿಂಗದ ರಾಜ ದೇವೇಂದ್ರ ಇದನ್ನು ನಿರ್ಮಿಸಿದ್ದಾನೆ ಎಂಬ ಪ್ರತೀತಿ ಇದೆ.
ಮಾರ್ಚ್ ಮತ್ತು ಸೆಪ್ಟಂಬರ್ನಲ್ಲಿ ವರ್ಷದಲ್ಲಿ ಎರಡು ಬಾರಿ ಗರ್ಭಗುಡಿಯಲ್ಲಿನ ಸೂರ್ಯನ ಮೂರ್ತಿಗೆ ಸೂರ್ಯ ಕಿರಣಗಳು ಬೀಳುವಂತೆ ಈ ದೇಗುಲವನ್ನು ರಚಿಸಿರುವುದು ವಿಶೇಷ. ಸೂರ್ಯ ಮಧ್ಯದಲ್ಲಿ, ಗಣೇಶ, ಶಿವ, ಪಾರ್ವತಿ ಮತ್ತು ವಿಷ್ಣು ಆತನ ನಾಲ್ಕು ಸುತ್ತಲೂ ಇರುವ ರೀತಿಯಲ್ಲಿ ನಿರ್ಮಿಸಲಾದ ’ಪಂಚಾಯತನ’ ದೇಗುಲ ಇದಾಗಿದೆ.
ಶ್ರೀಕೂರ್ಮಮ್ ದೇಗುಲ ಶ್ರೀ ಕಾಕುಲಂನಲ್ಲಿದ್ದು, ಕೂರ್ಮವತಾರದಲ್ಲಿರುವ ವಿಷ್ಣುವಿಗೆ ಅರ್ಪಿಸಲಾದ ಏಕೈಕ ದೇಗುಲವಾಗಿದೆ. 2 ನೇ ಶತಮಾನಕ್ಕಿಂತಲೂ ಮೊದಲು ಇದನ್ನು ನಿರ್ಮಿಸಿರಬಹುದು ಎನ್ನಲಾಗಿದೆ. ಈ ದೇಗುಲವು ದೇವನಾಗರಿ ಭಾಷೆಯಲ್ಲಿ ಬರೆಯಲಾದ ಶಾಸನಗಳುಳ್ಳ 200 ಗಾನೈಟ್ ಕಂಬಗಳಿಗೆ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಗೋಡೆಗಳಲ್ಲಿರುವ ಮುರಲ್ ವರ್ಣಚಿತ್ರದ 49 ಫಲಕಗಳು ಹಲವಾರು ಪೌರಾಣಿಕ ಕಥೆಗಳನ್ನು ಹೇಳುತ್ತವೆ.
Courtesy : Stamp Today Group (Sri Jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.