ನವದೆಹಲಿ: ರಕ್ಷಣಾ ಮತ್ತು ಸುರಕ್ಷತಾ ವಿಮರ್ಶಕರಾದ ನಿತಿನ್.ಎ.ಗೋಖಲೆ ಮತ್ತು ನಿವೃತ್ತ ಬ್ರಿಗೇಡಿಯರ್ ಎಸ್.ಕೆ.ಚ್ಯಾಟರ್ಜಿಯವರು ಬರೆದ ’ಹೋಮ್ ಆಫ್ ಬ್ರೇವ್’ ಪುಸ್ತಕ ಬಿಡುಗಡೆಗೊಂಡಿದ್ದು, ಈ ಪುಸ್ತಕ ಭಾರತೀಯ ಸೇನೆಯ ಹೆಮ್ಮೆಯ ಕೌಂಟರ್ ಇನ್ಸರ್ಜೆನ್ಸಿ ಫೋರ್ಸ್ಸ್ ‘ರಾಷ್ಟ್ರೀಯ ರೈಫಲ್ಸ್’ನ ಇತಿಹಾಸವನ್ನು ತಿಳಿಸುತ್ತದೆ.
ನವದೆಹಲಿಯ ಸೌತ್ ಬ್ಲಾಕ್ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಆರ್ಮಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಸಮಾರಂಭದಲ್ಲಿ ರಾಷ್ಟ್ರೀಯ ರೈಫಲ್ನ ಪ್ರಧಾನ ನಿರ್ದೇಶಕ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು.
ರಾಷ್ಟ್ರೀಯ ರೈಫಲ್ಸ್ನ ಇತಿಹಾಸ, ಅದರ ಬೆಳವಣಿಗೆ, ಪಂಜಾಬ್, ಈಶಾನ್ಯ ಭಾಗ ಮತ್ತು ಜಮ್ಮು ಕಾಶ್ಮೀರಗಳಲ್ಲಿ ಅದ ನಿಯೋಜನೆ ಸೇರಿದಂತೆ ಹತ್ತು ಹಲವು ವಿಷಯಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.