ಸದ್ಭಾವ ಯೋಗ ಅಂದ್ರೆ ಪರಿಪೂರ್ಣತೆ ಅನುಭವಿಸೋದ. ಕೈವಲ್ಯದ ಅನುಭಾವ ಪಡೆಯೋದ. ಅದಕ್ಕಾಗಿ ಇದು ಸದ್ಭಾವ ಸಾಧನಾ. ಭಾವ ವಿಶಾಲಗೊಳಿಸ್ತಾ ಹೋದ್ರ ಪರಿಪೂರ್ಣತೆ ಅನುಭವಿಸ್ತಾದ. ಭಾವ ಅಂದ್ರ ಯಾವುದೇ ಮೇರೆಗಳಿಲ್ಲದ್ದು, ನಿಸ್ಸೀಮ, ಅದನ್ನು ಪರಿಪೂರ್ಣ ಅಂತಾರ.
ಆಕಾಶದಷ್ಟ ವಿಸ್ತಾರ, ಎಷ್ಟು ನೋಡಿದರೂ ಮುಗಿಯಲ್ಲ. ಅದಕ್ಕ ಎಲ್ಲಿ ದಂಡಿ ಅದ ಹೇಳಿ. ವಿಜ್ಞಾನಿಗಳು ಕೂಡ ಹೇಳ್ತಾರ, ಆಕಾಶಕ್ಕೆ ಕೊನೆ ಇಲ್ಲ ಅಂತ. ಅದನ್ನ ಮುಟ್ಟಲ್ಲ ಆಗಲ್ಲ, ಅಷ್ಟು ವಿಶಾಲ ಆಕಾಶ. ಸಣ್ಣ ಸಣ್ಣ ವಸ್ತುಗಳನ್ನ ಭಾವದಟ್ಟಿಕೊಂಡರ ಅದು ಸಣ್ಣದಾಗ್ತಾದ. ಆಕಾಶವನ್ನೇ ಇಟ್ಟಾಗ ಆಕಾಶದಷ್ಟ ಆಗ್ತಾದ. ಅದರಲ್ಲಿ ಅಷ್ಟು ಶಕ್ತಿ, ಸಾಮರ್ಥ್ಯ ಅದ. ಭಾವ ಸಣ್ಣದಕ್ಕ ಸಣ್ಣದ ಆಗ್ತಾದ, ದೊಡ್ಡದಕ್ಕ ದೊಡ್ಡದ ಆಗ್ತಾದ, ಇದು ನನ್ನದು, ಅನ್ಯರದ್ದು ಇದು ಅಲ್ಪ ಚೇತನ. ಸಣ್ಣವರ ಭಾವ ಸಣ್ಣದಾಗ್ತಾದ, ದೊಡ್ಡವರ ಭಾವ ದೊಡ್ಡದಾಗ್ತದ, ಅದಕ್ಕೆ ಅದನ್ನ ವಸುದೈವ ಕುಟುಂಬಕಂ ಅಂತಾರ. ಇದು ಇದ್ದವರು ದೊಡ್ಡವರು ಎಂದರು.
900 ವರ್ಷಗಳ ಹಿಂದೆ ಆಗ ಏನೂ ಇರಲಿಲ್ಲ, ವಾಹನ, ಅನುಕೂಲತೆ ಇರಲಿಲ್ಲ. ಆವಾಗ ಬಸವಣ್ಣನವರು ಹೇಳಿದ್ದರು ಹರವು, ಹರವು, ಭಾವ ವಿಶಾಲ. ಅದಕ್ಕ ಅವರಿಗೆ ಮಹಾತ್ಮ ಅಂತ ಕರಿತೀವಿ. ಯಾರ ಮನಸ್ಸು, ಭಾವಗಳಲ್ಲಿ ಭೇದಗಳಿಲ್ಲ. ಅದು ಮಹಾನ್ ಆತ್ಮ, ಅಂತಹವರಿಗೆ ಮಹಾತ್ಮ ಅಂತೀವಿ. ನಾವೆಲ್ಲ ಅಲ್ಪರು. ಭಾವವನ್ನು ಸಂಪತ್ತಿನಿಂದ ಅಳಿಯುವುದಲ್ಲ, ಭಾವದಿಂದ ಅಳಿಯಬೇಕು. ಬಸವಣ್ಣನವರು ಹೇಳಿದಂಗ ನಾನೊಬ್ಬನೇ ಭಕ್ತ, ಎಲ್ಲರೂ ಕೂಡಲಸಂಗಮ, ಎಲ್ಲರೂ ದೇವರ ರೂಪ. ಎಷ್ಟು ಚೆಂದ ಅದ ಅಲ್ಲಾ. ಎಂತಹ ಎತ್ತರ ಅವರ ಭಾವ ತಲುಪಿತ್ತು. ಹೃದಯ ವಿಶಾಲವಾಗಿತ್ತು. ಮನಸ್ಸು ಅಷ್ಟೇ ದೊಡ್ಡದ್ದು. ಉಳಿದಿದ್ದೆಲ್ಲ, ಇಡೀ ಜಗತ್ತೇ ಕೂಡಲಸಂಗಮ. ಇದೇ ಆಧ್ಯಾತ್ಮ, ಸದ್ಭಾವ ಯೋಗ.
ವಿಶಾಲತೆಯನ್ನು ಅನುಭವಿಸೋದೆ ಯೋಗ. ಕೂಡೋದು ಯೋಗವಲ್ಲ. ಅದರ ಹರಿವಿರುವುದೆ ಯೋಗ, ವಿಶ್ವ ಚೇತನ ಅನುಭವಿಸೋದ. ಯಾವುದರ ಸಂತರನ್ನ ತೆಗೆದುಕೊಳ್ಳಿ, ಅವರು ಮಾಡಿದ ಸಾಧನೆ ನೋಡಿ, ಎಷ್ಟು ವಿಶಾಲತಾ. ಯಾವುದೇ ಭೇದ ಮಾಡದೆ, ಎಂತಹ ಅದ್ಭುತ ದರ್ಶನ. ಜಗತ್ತೇ ಈಶ ವಾಸ ಈ ಒಂದು ಮಾತು ಸಾಕು ಭಾರತೀಯ ಋಷಿಗಳ ಅವರ ಮಹಾತ್ಮೆ ಅರಿಯುವುದಕ್ಕೆ.
ಮನೆ ನೋಡು ಬಡವ, ಅವು ಮೈಲುಗಟ್ಟಲೇ ಕಿಲೋ ಮೀಟರ್ಗಟ್ಟಲೇ ದೊಡ್ಡವು ಇರಲಿಕ್ಕಿಲ್ಲ. ಅವು ಮಣ್ಣಿನ ಕುಟೀರ ಇರಬಹುದು. ಆದ್ರೆ ಭಾರತೀಯ ಮನಸ್ಸುಗಳು ಅದ್ಭುತ. ಹೃದಯದೊಳಗೆ ವಿಶಾಲ ತುಂಬಾವ. ಹೃದಯ ಇರದಿದ್ದರೆ ಮಹಾತ್ಮ ಅಲ್ಲ. ಹಾಂಗಂತ ಎಲ್ಲರಿಗೂ ಮಹಾತ್ಮ ಅಂತ ಕರೆಯಲ್ಲ. ವಿಶಾಲ ಹೃದಯ ಬೇಕಾಗ್ತಾದ. ಪರಿಪೂರ್ಣತೆಯನ್ನ ಅನುಭವಕ್ಕೆ ತಂದು ಕೊಡ್ತಾದ. ಇದು ಸತ್ಯಪೂರ್ಣ ಭಾವ. ಆ ಸಾಧನೆಯೇ ಸದ್ಭಾವ ಯೋಗ. ಇಂತಹ ವಿಶಾಲವಾದ ಜಗತ್ತಿನಾಗ ಎಷ್ಟು ಭಾವ ಒಡೆದಾವ ನೋಡಿ, ಅವು ಹೊರಗೆ ಹೋಗಕ್ಕ, ದಾಟಕ್ಕ ಬಿಟ್ಟಿಲ್ಲ. ಇನ್ನೂ ಮನೆನೇ ದಾಟಿಲ್ಲ. ಸಣ್ಣ ಪುಟ್ಟ ಜಾತಿಗಳನ್ನ ಬಿಟ್ಟು ಬಂದಿಲ್ಲ. ಹೊರಗ ಸೂರ್ಯ ನೋಡಿರಿ. ಎಷ್ಟು ವಿಶಾಲ, ಎಲ್ಲಿ ನೋಡಿದ್ರ ಅಲ್ಲಿ. ಸುಮಾರು 10 ಲಕ್ಷ ಪೃಥ್ವಿಗಳನ್ನ ಹೊಟ್ಟೆಗೆ ಹಾಕಬಹುದು ಅಷ್ಟು ವಿಶಾಲ. ಮನುಷ್ಯನೇ ಸಣ್ಣವನಾಗಬೇಡ, ಭಾವವನ್ನ ಹರಿಯಬಿಡು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.