×
Home About Us Advertise With s Contact Us

ಹಿಂದೂ ರುದ್ರಭೂಮಿಯ ಕೆಲಸ ಶೀಘ್ರದಲ್ಲೇ ಪೂರೈಸುವುದು

ಬಂಟ್ವಾಳ : ಬಹು ದಿನದ ಬೇಡಿಕೆತಲ್ಲೊಂದಾಗಿರುವ ಸಜೀಪಮೂಡ ಗ್ರಾಮದಲ್ಲಿ ಸರ್ವೆ ನಂಬ್ರ 246/1ಎ1ರಲ್ಲಿ 0.45 ಎಕ್ರೆ ಜಮೀನು ಸ್ಮಶಾನ ನಿರ್ಮಾಣದ ಉದ್ದೇಶಕ್ಕೆ ದ. ಕ. ಜಿಲ್ಲಾಧಿಕಾರಿಗಳು ಮಂಜೂರಾತಿ ನೀಡಿದ್ದು, ಇದಕ್ಕಾಗಿ ಇಡೀ ಕಂದಾಯ ಇಲಾಖೆಗೆ ಕೃತಜ್ಞತೆ ಸಲ್ಲಿಸುವುದಾಗಿ ಸಜೀಪಮೂಡ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಬಿ. ಸದಾನಂದ ಪೂಂಜ ಹೇಳಿದ್ದಾರೆ.

2603bteph5A

ಅವರು ಗುರುವಾರ ಬಂಟ್ವಾಳ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ಅವರಿಗೆ ಮತ್ತು ಬಂಟ್ವಾಳ ಪೊಲೀಸ್ ವಿಭಾಗ ಎಎಸ್‌ಪಿ ರಾಹುಲ್ ಅವರಿಗೆ ಮನವಿ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದರು.

2603bteph5B

ಸಜೀಪಮೂಡ ಗ್ರಾಮದ ಬೊಳ್ಳಾಯಿ ಪಟ್ಟುಗುಡ್ಡೆಯಲ್ಲಿ ಹತ್ತು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಹಿಂದೂ ರುದ್ರಭೂಮಿಗೆ ಜಮೀನು ಮಂಜೂರಾತಿ ಮಾಡಿದ್ದಾರೆ. ಅಲ್ಲಿ ನೆಲ ಸಮತಟ್ಟು ಮಾಡುವ ಕೆಲಸ ಆಗಿದ್ದು, ಇನ್ನಷ್ಟು ಕೆಲಸಗಳು ನಡೆಯಬೇಕಾಗಿದೆ ಇದನ್ನು ಶೀಘ್ರದಲ್ಲೇ ಪೂರೈಸುವುದಾಗಿ ಸದಾನಂದ ಪೂಂಜ ಭರವಸೆ ನೀಡಿದರು.

ಪ್ರಸ್ತುತ ಸ್ಮಶಾನ ನಿರ್ಮಾಣ ಪರಿಸರದಲ್ಲಿ ಯಾವುದೇ ಮನೆಗಳು ಇಲ್ಲ. ಎಲ್ಲಾ ಸಮಾಜದ ಒಪ್ಪಿಗೆಯಿಂದ ಇಲ್ಲಿ ರುದ್ರಭೂಮಿ ನಿರ್ಮಾಣ ಆಗುತ್ತಿದೆ. ಜಿಲ್ಲಾಧಿಕಾರಿಗಳು, ಸಹಾಯಕ ಕಮಿಷನರ್ ಅವರ ಪರಿಶೀಲನೆ ಬಳಿಕ ರುದ್ರಭೂಮಿ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

2603bteph5

ಗ್ರಾ.ಪಂ. ಅಧ್ಯಕ್ಷೆ ಸುಂದರಿ, ಉಪಾಧ್ಯಕ್ಷೆ ಗೀತಾ, ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ,ಸದಸ್ಯರಾದ ಅಬ್ದುಲ್ ಕರೀಂ, ಕೆ.ಎಚ್. ಹೈದರ್,ಜಲೀಲ್ ಸಂಜೀವಿನಿ, ಯೋಗೀಶ ಬೆಳ್ಚಡ, ಬಿ.ಎ. ಉಮರಬ್ಬ, ಪ್ರಮುಖರಾದ ಸಾರ್ತಾವು ಸುರೇಶ್, ಶಿವಪ್ರಸಾದ್ ಶೆಟ್ಟಿ, ಸರ್ವಾನಿ ಶೆಟ್ಟಿ, ಶೋಭಾ ಶೆಟ್ಟಿ, ವಿಲ್ಸನ್ ಪಿರೇರಾ, ಉದಯ ಕಾಂಜಿಲ ಮೊದಲಾದವರು ಉಪಸ್ಥಿತರಿದ್ದರು.

 

Recent News

Back To Top
error: Content is protected !!