ಅವರ ಎದುರಾಳಿಗಳನ್ನು ಅವರ ಪ್ರಭುದ್ಧತೆಯನ್ನು ವಿರೋಧಿಸುವವರನ್ನು ಅಮಾನುಷವಾಗಿ ಹತ್ಯೆ ಮಾಡುವುದೇ ಈ ಮಾರ್ಕ್ಸಿಸ್ಟ್ ವಾದಿಗಳ ಕಾಯಕ. ಯಾರೂ ಅವರ ವಿರೋಧ ಚಕಾರವೆತ್ತುವಂತಿಲ್ಲ ಅವರನ್ನು ಕೊಡಲಿ ಕತ್ತಿಯಿಂದ ಇರಿದು ಸಾಯಿಸಲಾಗುವುದು. ಕೇವಲ ಹಿಂದು ಸಂಘಟನೆಯ ಕಾರ್ಯಕರ್ತರಲ್ಲ. ಇವರ ಸಿದ್ದಾಂತವನ್ನು ವಿರೋಧಿಸುವ ಎಲ್ಲರಿಗೂ ಇದೇ ಶಿಕ್ಷೆ. ಅದರಲ್ಲಿ ಬಡವ-ಬಲ್ಲಿಗ, ಗಂಡು-ಹೆಣ್ಣು, ಮಕ್ಕಳು-ವೃದ್ಧರು ಎಂಬ ಭೇದವಿಲ್ಲ.
1920, 30 ರ ರಷ್ಯಾ ಮಾರ್ಕಿಸ್ಟ್ ಗಳ ದಾಖಲೆಯನ್ನು ಮುರಿದು ಹಾಕಿ ಹೊಸ ದಾಖಲೆ ಸೃಷ್ಟಿಸಬೇಕೆಂದಿದ್ದಾರೆ ಈ ಕೆಂಪು ಉಗ್ರರು.
ಕಳೆದ 50 ವರ್ಷಗಳಲ್ಲಿ 267 ಜನರ ಹತ್ಯೆಯಾಗಿದ್ದು ಅದರಲ್ಲಿ 232 ಕ್ಕೂ ಹೆಚ್ಚಿನ ಕೊಲೆಗಳನ್ನ ಸಿ.ಪಿ.ಎಂ ನವರೇ ಸಂಚು ರೂಪಿಸಿ ಮಾಡಿದ್ದಾರೆ ಎಂಬುದು ಕೇರಳ ನ್ಯಾಯಾಲಯ ಹೇಳಿದೆ.
ಉಗ್ರರನ್ನು ಬೆಳೆಸುತ್ತಾ ಮತಾಂತರವನ್ನು ಪ್ರಚೋದಿಸುತ್ತ ಅಮಾಯಕ ಹಿಂದೂಗಳನ್ನು ಹಿಂಸಿಸಿ ದಲಿತರ ಮೇಲೆ ದಾಳಿ ಮಾಡಿಸಿ ಈಗ ಸುಖದ ಸುಪತ್ತಿಗೆಯ ಮೇಲೆ ಕುಳಿತಿರುವ ಸರ್ಕಾರ ಅವರದ್ದು.ಬಡವರಿಗೋಸ್ಕರ ಹೋರಾಡ್ತೇವೆ ಅಂತ ಹಣೆಪಟ್ಟಿ ಹಾಕಿಕೊಂಡು ಬಡವರಿಂದಲೇ ಚಂದಾ ಎತ್ತಿ, ಬಡವರನ್ನು ನಿತ್ಯ ನರಕ ಕೂಪಕ್ಕೆ ತಳ್ಳಿ , ತಾವು ದಂತ ಗೋಪುರಗಳಲ್ಲಿ ಸುಖಿಸುತ್ತಿರುವ ದ್ರೋಹಿ ಕಮ್ಯುನಿಸ್ಟ್ ಮುಖಂಡರು ಯಾವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆ ಹೇಳಿ?
1965 ರಿಂದಲೇ ಆರಂಭ ರಕ್ತಪಾತದ ರಾಜಕೀಯ.
1965 ರ ಮಾರ್ಚ್ 18 ರಂದು ಮಲಪ್ಪುರಂ ಜಿಲ್ಲೆಯ 16 ವರ್ಷದ ತರುಣ ಸುಬ್ರಮಣೀಯನ್ ನಿಂದ ಪ್ರಾರಂಭವಾಗಿ 11-2-2017 ರ ರವೀಂದ್ರನಾಥ್ ರವರ ಕೊಲೆಯವರೆಗೂ ಈ ರಕ್ತಪಾತದ ಅಧ್ಯಾಯ ನಡೆಯುತ್ತಲೇ ಬಂದಿದೆ.
ಅಲ್ಲಿ ಪ್ರತಿ ಆರು ಘನ್ಟೆಗೆ ಒಂದು ಹೆಣ್ಣಿನ ಮೇಲೆ ಅತ್ಯಾಚಾರ ನದೇಯತ್ತೆ ಅದನ್ನು ಪ್ರಶ್ನಿಸಿದರೆ ಅವರ ಕೊಲೆಯಾಗತ್ತೆ. ಇದು ಕೇರಳದ ಕಮ್ಮ್ಯೂನಿಷ್ಟರ ದುರಾಡಳಿತ.
ಅಲ್ಲಿ ಹಿಂದುಗಳು ತಮ್ಮ ಹಬ್ಬವನ್ನು ಆಚರಿಸುವ ಹಾಗಿಲ್ಲ ಅವರ ಮೇಲೆ ದಾಳಿ ಮಾಡುತ್ತಾರೆ. ಅಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗುವ ಹಾಗಿಲ್ಲ ಅಂಥವರನ್ನು ಹೊಡೆದು ಹಾಕುತ್ತಾರೆ. ಮೀನುಗಳನ್ನು ಹಿಡಿದು ಜೀವನ ನಡೆಸುತ್ತಿದ್ದ ಅಮಾಯಕರು ಅಲ್ಲಿ ನೆಮ್ಮದಿಯಿಂದ ವಾಸಿಸುವಂತ್ತಿಲ್ಲ ಅದೂ ತಪ್ಪಾಗುವುದು.
ಬಸ್ ತಂಗುದಾಣಕ್ಕೆ ಅಯೋಧ್ಯೆ ಎಂದು ಹೆಸರಿಡುವಂತಿಲ್ಲ ಅವರ ಕತ್ತಿ ಕೊಡಲಿಗಳಿಂದ ಹಲ್ಲೆ ಮಾಡುತ್ತಾರೆ. ಅಲ್ಲಿ ಕೇಸರಿ ಕಾಣುವಂತಿಲ್ಲ ಅದನ್ನೂ ಸುಟ್ಟು ಹಾಕುತ್ತಾರೆ. ಅಲ್ಲಿ ಕಾಣ ಬೇಕಾದದ್ದು ಬರೀ ಕೆಂಪು.
ಹಾ!! ಪ್ರಾಯಶಃ ಅವರಿಗೆ ಕೆಂಪೆಂದರೆ ಅಷ್ಟು ಇಷ್ಟವಿರಬಹುದು ಅದಕ್ಕೆ ಅಲ್ಲಿ ಪ್ರತಿನಿತ್ಯ ರಕ್ತದೋಕುಳಿ ಆಡುತ್ತಾರೆ.
ಅರರೆ!!! ಆಶ್ಚರ್ಯವಾಯಿತೇ ಇದು ಯಾವ ಕಥೆ ಅಂತ. ಇದು ಯಾವುದೋ ಕಥೆಯಲ್ಲ ಇದು ಕೇರಳದ ನೈಜ ಚಿತ್ರಣ.
ಹಿಂಸೆ ಕ್ರೌರ್ಯ ಬರ್ಭರತೆಗಳೇ ಕಮ್ಯೂನಿಷ್ಟರ ಕಾರ್ಯ ವಿಧಾನ!
ಕೇರಳ ಕಮ್ಯುನಿಷ್ಟರ ಕರಾಳ ಕಥೆಗಳು. ಹೇಳುವುದು ಶಾಸ್ತ್ರ ಇಕ್ಕುವುದು ಗಾಳ ಅನ್ನುವ ಮಾತು ಇವರನ್ನು ನೋಡಿಯೆ ಬಂದಿರಬೇಕು. ಕೆಳಗಡೆ ಕೆಲವು ಕಥೆಗಳಿವೆ, ನೀವೇ ಓದಿ ನಿರ್ಧರಿಸಿ, ರಕ್ತ ಪಿಪಾಸುಗಳ ಐಕ್ಯತೆಯ ಭಾಷಣ ನಮಗೆ ಬೇಕೇ?
01. ಆತ ಎನೂ ಅರಿಯದ ಮುಗ್ಧ ಶಾಲಾ ಬಾಲಕ ಕಾರ್ತಿಕ್ ಕೇರಳಾದ ಇರತ್ತಿಯ ಎರಡನೇ ತರಗತಿಯಲ್ಲಿ ಒದುತ್ತಿದ್ದ. ಆತನ ತಾಯಿ ಭಾಜಪಾದ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದೇ ತಪ್ಪಾಗಿ ಹೊಯಿತು. ಕೆಂಪು ಉಗ್ರರು ಆ ಮುಗ್ಧ ಹುಡುಗನ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆದಿದ್ದರು. ಇದು ಯಾವುದೋ ಸಿನಿಮಾ ಕಥೆಯಲ್ಲ ಕೇರಳದಲ್ಲಿ ಮೇ 31 ರಂದು ನಡೆದ ಸತ್ಯ ಘಟನೆ. ಇಂತಹ ರಕ್ತ ಪಿಪಾಸು ಕೆಂಪು ಉಗ್ರರು ಬಂದು ಸೌಹಾರ್ದತೆಯ ಪಾಠ ಹೇಳುವ ಅಗತ್ಯವಿಲ್ಲ.
02. ಆಕೆ LLB ವ್ಯಾಸಾಂಗ ಮಾಡುತ್ತಿದ ಎರಣಾಕುಲಂನ ದಲಿತ ಕುಟುಂಬದ ಹುಡುಗಿ ಜಿಶಾ. ಏಪ್ರಿಲ್ 28 ರಂದು ತನ್ನ ಮನೆಯಲ್ಲಿಯೇ ಕೊಲೆಯಾಗಿ ಹೊಗಿದ್ದಳು. ತನಿಖೆಗೆ ವತ್ತಾಯಿಸಿದರೆ ಮೌನದಿಂದ ಕುಳಿತಿದ್ದ ಕೇರಳಾ ಸಿ.ಎಮ್ ಹಾಗು ಕೆಂಪು ಉಗ್ರರ ಸರ್ಕಾರ ಈಗ ಕರ್ನಾಟಕಕ್ಕೆ ಬಂದು ಸೌಹಾರ್ದತೆಯ ಮಾತನ್ನಾಡುವ ನಾಟಕಕ್ಕೆ ಸಿದ್ಧರಾಗಿದ್ದಾರೆ
03. ಅವರದ್ದು ಚಿಕ್ಕದಾದ ಚೊಕ್ಕದಾದ ಸುಖೀ ಕುಟುಂಬ. ತಲಚ್ಚೆರಿಯ 52 ವರ್ಷದ ಸಂತೋಷ್ ಅಂದು ಮನೆಯಲ್ಲಿ ಒಬ್ಬರೇ ಇದ್ದರು. ಹೆಂಡತಿ ಮಗಳು ರಜೆಯೆಂದು ತವರಿಗೆ ಹೊಗಿದ್ದರು. ಹೆಂಡತಿ ಮಕ್ಕಳು ಮನೆಗೆ ಮರಳಿ ಬಂದಾಗ ಮನೆ ಮನೆಯಾಗಿ ಉಳಿದಿರಲಿಲ್ಲ. ಮೌನ ಮಡುಗಟ್ಟಿತ್ತು. ಅಕ್ಕರೆ ತೋರಿಸಬೇಕಿದ್ದ ತಂದೆ ಸಂತೋಷ್ ಹೆಣವಾಗಿದ್ದ. ಆ ತಾಯಿ ಮಗಳ ಕಣ್ಣೀರ ಶಾಪ ಕೆಂಪು ಉಗ್ರರಿಗೆ ತಟ್ಟದೆ ಬಿಡದೇ?
04. ಆಕೆ 46 ವರ್ಷದ ವಿಮಲಕ್ಕ. ಪಾಲಕ್ಕಾಡಿನ ಕಂಜೊಕೊಡೆಯ ಹಿಂದು ಕಾರ್ಯಕರ್ತ ಕಣ್ಣನ್ ರವರ ಮುದ್ದಿನ ಮಡದಿ. ಅಕ್ಕಪಕ್ಕದವರೊಡನೆ ನಗು-ನಗುತ್ತ ಸದಾ ಸಹಾಯ ಹಸ್ತ ಚಾಚುವ ಮೂಲಕ ಎಲ್ಲರಿಗೂ ಪ್ರೀತಿ ಪೂರ್ವಕಳು. ಅಂದು 28 ಡೆಸೆಂಬರ್ 2016 ಮನೆಯವರು ಕೆಲಸಕ್ಕೆ ತೆರಳಿದ್ದರು ಮಕಳು ಶಾಲೆಗೆ ಹೊಗಿದ್ದರು. ಅಂದು ಸಂಜೆ ಅವರು ಮನೆಗೆ ಹಿಂದಿರುಗಿದಾಗ ಕಂಡ ಮನಃ ಕಲಕುವ ದೃಶ್ಯ ಕಣ್ಣೆದುರಿತ್ತು. ಮನೆಗೆ ಬೆಂಕಿ ತಗಲಿತ್ತು ಬೆಂಕಿಯ ನಡುವೆ ವಿಮಲಕ್ಕ ಸುಮಾರು 80% ಬೆಂದು ಹೊಗಿದ್ದಳು ಅವಳನ್ನು ರಕ್ಷಿಸಲು ಬಂದವರು ಸುಮಾರು ೬೦% ಬೆಂದಿದ್ದರು. ಹಾಗಾದರೆ ಅಲ್ಲಿ ನಡೆದದ್ಸೇನು ಗೊತ್ತೇ? ಕೆಂಪು ಉಗ್ರರು ಮನೆಯನ್ನೇ ಸುಟ್ಟು ಹಾಕಿದ್ದರು. ಹಾ ಹಾಗಿದ್ದರೆ ಅವಳು ಮಾಡಿದ ತಪ್ಪೇನು ಎಂದು ನೀವು ಕೇಳಬಹುದು ಆಕೆ ಎಲ್ಲರೊಡನೆ ನಗುನಗುತ್ತ ಸಹಾಯ ಹಸ್ತ ನೀಡುತಿದದ್ದು ತಪ್ಪಾಯಿತು, ಆಕೆಯ ಗಂಡ ಹಿಂದು ಕಾರ್ಯಕರ್ತನಾಗಿದ್ದೇ ತಪ್ಪಾಯಿತು ಈ ಕೆಂಪು ಉಗ್ರರಿಗೆ. ಇಂತಹ ರಕ್ತಬಿಜಾಸುರರಿಂದ ಐಕ್ಯತೆಯ ಪಾಠ ಮಂಗಳೂರಿಗೆ ಬೇಕಿಲ್ಲ.
05. ಆ ತಾಯಿಯ ಶಾಪ ತಟ್ಟದೇ ಹೊದೀತೇ??
ಅಂದು ಮೇ 22, 2002 ಸಂಘದ ಕಾರ್ಯಕರ್ತರಾದ ಉತ್ತಮನ್ ತಮ್ಮ ಕೆಲಸದ ನಿಮಿತ್ತ ತಲ್ಲಚೆರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಬಾಂಬ್ ಎಸೆದು ಅವರನ್ನು ಕೊಲೆ ಮಾಡಿದರು ಈ ಕೆಂಪು ಉಗ್ರರು. ಇಷ್ಟಾದರು ತೊಂದರೆ ತಪ್ಪಲಿಲ್ಲ ಮನೆಗೆ ಪದೇ ಪದೇ ನುಗ್ಗಿ ಗಲಾಟೆ ಮಾಡುತ್ತಿದ್ದರು. ಇತ್ತಿಚಿಗೆ ಅಕ್ಟೋಬರ್ 12 ಕ್ಕೆ ಅವರ 26 ವರ್ಷದ ಮಗ ರಮೀತ್ ನನ್ನು ಕೊಲೆ ಮಾಡಿದರು. ಇದು ನಡೆದದ್ದು ಕೇರಳ ಮುಖ್ಯಮಂತ್ರಿ ವಿಜಯನ್ ಪಿನರಾಯಿಯ ಕ್ಷೇತ್ರದಲ್ಲಿಯೇ. ಇಂತಹ ದುಷ್ಟರ ಬಾಯಿಂದ ಐಕ್ಯತೆಯ ಭಾಷಣವಂತೆ….
06. ಮೇ 2, 2003, ಕೇರಳದ ಕೊಝೀಕೋಡ್ ನ ಮರದ್ ಬೀಚ್ ನಲ್ಲಿ ನಡೆದ ಕರಾಳ ಘಟನೆ. ಆ ಎಂಟು ಅಮಾಯಕರು ಆ ದಿನದ. ಮೀನನ್ನು ಹಿಡಿದು ಮನೆಗೆ ಹೋಗಬೇಕಿತ್ತು ಆದರೆ ಅವರು ಅಂದು ಅಲ್ಲಿಂದ ಹೊರಟದ್ದು ಮನೆಗಲ್ಲ ಮಸಣಕ್ಕೆ. ಆ ಬೆಸ್ತರ ಜೀವನ ಅಂದು ಇಲ್ಲಿಯೇ (ಸಮುದ್ರದ ದಡದಲ್ಲಿಯೇ) ಅಂತ್ಯ ಹಾಡಿತು. ಆ ಎಂಟು ಜನ ಅಮಾಯಕರು ಸಂಘ ಪರಿವಾರದವರಲ್ಲ ಅವರು ಭಾಜಪಾದ ಕಾರ್ಯಕರ್ತರೋ ಮುಖಂಡರೂ ಅಲ್ಲ. ತಮ್ಮ ಪಾಡಿಗೆ ಮೀನು ಹಿಡಿದು ಜೀವನ ಬಡೆಸುತಿದ್ದ ಸರಳ ಸಜ್ಜನ ಅಮಾಯಕರು. ಅವರು ಹಿಂದುವಾಗಿದ್ದೇ ತಪ್ಪಾಗಿ ಹೋಯಿತು ಅವರ ಜೀವನ ಆ ದಿನದಂದು ಕೊನೆಗೊಂಡಿತು. ಇನ್ನೂ ಅವರ ಕೊಲೆ ಮಾಡಿದವರಿಗೆ ಶಿಕ್ಷೆಯಾಗಿಲ್ಲ. ಅವರನ್ನು ರಕ್ಷಿಸುತ್ತಿರುವ ಈ ಕೆಂಪು ಉಗ್ರರು. ಇಂತಹ ದುಷ್ಟರಿಂದ ಐಕ್ಯತೆಯ ಮಾತು ಬೇಕೆ ನಮಗೆ ಯೋಚಿಸಿ ನೋಡಿ????
07. ಆತ ಆ ಮಕ್ಕಳನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೊಗುತ್ತಿದ್ದ, ಮಧ್ಯ ರಸ್ತೆಯಲ್ಲಿ ಆತನನ್ನು ಆರು ಮಂದಿ ಕೆಂಪು ಉಗ್ರರು ತಡೆದು ರಿಕ್ಷಾದಿಂದ ಇಳಿಸಿ ಅವನನ್ನು ಆ ಮಕ್ಕಳೆದುರೇ ಕೊಚ್ಚಿ ಹಾಕಿದ್ದರು. 28 ವರ್ಷದ ಹಿಂದು ಕಾರ್ಯಕರ್ತ ಬಿಜು ರಸ್ತೆಯ ಮಧ್ಯದಲ್ಲಿ ನೋವನ್ನು ಅನುಭವಿಸುತ್ತ ಅಲ್ಲಿಯೇ ಬಿದಿದ್ದ.
ಇದು ಇವರ ನಿಜವಾದ ಮುಖ ಇಂಥವರಿಂದ ಐಕ್ಯತೆಯ ಮಾತು ಬರಲು ಸಾಧ್ಯವಾಗುವುದು ಹೇಗೆ?
08. ಆತ ಮನೆಯ ಒಬ್ಬನೇ ಮಗ ಆತನಿಗಿನ್ನೂ 27 ವಾರ್ಷವಾಗಿತ್ತು. ವಯಸ್ಸಾದ ಕಾಲಕ್ಕೆ ತಂದೆ ತಾಯಿಗೆ ಆಶ್ರಯ ನೀಡಬೇಕಿತ್ತು , ತನ್ನ ಜೀವನದ ಕನಸುಗಳೂ ಹಾಗೇ ಕಣ್ಣೆದುರಿತ್ತು ಆದರೆ ಇವೆಲ್ಲವನ್ನು ನನಸು ಮಾಡುವ ಮುಂಚೆಯೇ ಆತನು ಕಣ್ಣು ಮುಚ್ಚಿದ್ದ. ಹೌದು ಇದು ಕೇರಳಾದ ಪಪಿನೇಸಿರಿಯ ಹಿಂದು ಯುವಕ ಸುಜಿತ್ ನ ಘಟನೆ. ಫೆಬ್ರವರಿ 2003 ೩ ಆತನನ್ನು ಅವರ ತಂದೆ ತಾಯಿಯ ಎದುರೇ ಬರ್ಬರವಾಗಿ ಹತ್ಯೆ ಮಾಡಿ ಹೋಗಿದ್ದರು ಆ ಕೆಂಪು ಉಗ್ರರು. ಆತ ಕಾನಂಘಾಡಿನ ರೈತ ಕುಮಾರನ್, ಅಂದು (ಜೂನ್ 30 1997) ರ ರಾತ್ರಿ ತನ್ನ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದ. ತಾಯಿ ಊಟವನ್ನು ಬಡಿಸುತ್ತಿದ್ದಳು, ಅಷ್ಟೊತ್ತಿಗೆ ನೀರು ಕೇಳಲು ಬಂದ ದುಷ್ಕರ್ಮಿಗಳು (ಕೆಂಪು ಉಗ್ರರು) ಆತನ ತಾಯಿ, ಹೆಂಡತಿ ಮಕ್ಕಳೆದುರಿನಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿದರು. ಆತ ಬಡ ರೈತ, ಹಿಂದುಯಾಗಿದ್ದೇ ತಪ್ಪಾಯಿತು ಈ ಪಾಪಿಗಳಿಗೆ ಅವನನ್ನು ಮನೆಯವರೆದುರೇ ಅಮಾನುಷವಾಗಿ ಕೊಂದುಹಾಕಿದ ಮಾರ್ಕ್ಸಿಸ್ಟ್ ಗಳು. ಅವರು ತಲಚ್ಚೇರಿಯ ಯುವಕರು ಸುಜೀಶ್ ಮತ್ತು ಸುನೀಲ್ 2002 ರಲ್ಲಿ ಸಿ.ಪಿ.ಎಂ. ತೊರೆದು ಭಾ.ಜ.ಪಾ.ಸೇರಿದ್ದರು ಆ ದ್ವೇಶವನ್ನು ತಡೆಯಲಾಗದೆ ಸೈದಾಂತಿಕವಾಗಿ ಎದುರಿಸಲಾಗದೆ ಅವರನ್ನು ಮಾರ್ಚ್ 2 ರ ರಾತ್ರಿ ಅವರು ತೋಟದಲ್ಲಿ ಮಲಗಿದ್ದಾಗಲೇ ಅವರನ್ನು ಕೊಚ್ಚಿ ಕೊಂದು ಹಾಕಿದರು. ಮರುದಿನ ಬೆಳಗ್ಗೆ ತೋಟಕ್ಕೆ ಕೆಲಸದವರು ಬಂದಾಗಲೇ ವಿಷಯ ತಿಳಿದು ಬಂದಿದ್ದು. ಅವರು ಪುಲ್ಲೂರು ಪೋಸ್ಟ್ ಆಫೀಸ್ ಪೋಸ್ಟ್ ಮಾಸ್ಟರ್ ದಾಮೋದರನ್ ೨೦೦೩ ಜೂನ್ 23 ರಂದು ಹತ್ಯೆಮಾಡಲಾಯಿತು.
2014 ಆಗಸ್ಟ್ 17 ಕಾರು ಚಾಲಕ ಸುರೇಶ್ ಕಾರ್ಯನಿಮಿತ್ತ ಕೂತುಪರಂಬುದೂರಿಗೆ ಹೊರಟಿದ್ದರು ಅಚಾನಕ್ಕಾಗಿ ಅಲ್ಲಿಗೆ ಬಂದ ಸಿ.ಪಿ.ಎಂ ಕಾರ್ಯಕರ್ತರು ಕಾರಿನ ಮೇಲೆ ದಾಳಿ ಮಾಡಿದರು ತಲೆಗೆ ಪೆಟ್ಟು ಬಿದ್ದು ಸಾವು ಬದುಕಿನ ನಡುವೆ ಹೋರಾಡಿದ ಅವರು ಎರಡು ದಿನದ ನಂತರ ನರಳುತ್ತಾ ತಮ್ಮ ಪ್ರಾಣವನ್ನು ಬಿಟ್ಟರು.
ಆತ ತಿಲ್ಲಂಕೇರಿಯ ಹಿಂದು ಯುವಕ ವಿನೀಷ್. ಇನ್ನೂ ಯವ್ವನದ ಪ್ರಾಯ ಬದುಕಿ ಬಹಳಷ್ಟು ಸಾಧನೆ ಮಾಡಬೇಕಾಗಿತ್ತು. ರಾಷ್ಟ್ರದ ಸೇವೆ ಸಲ್ಲಿಸಬೇಕಾಗಿತ್ತು ಆದರೆ ಬದುಕು ಅಲ್ಲಿಯೇ ಅಂತ್ಯ ಹಾಡಿತು. ಸೆಪ್ಟೆಂಬರ್ 3 ರಂದು ಕೆಲಸದ ನಿಮಿತ್ತ ತಿಲ್ಲಂಕೇರಿಯ ಪಂಚಾಯತಿ ಕಚೇರಿಯ ಬಳಿ ತೆರಳಿದ್ದಾಗ ಅಲ್ಲಿಗೆ ಬಂದ ಸಿ.ಪಿ.ಎಂ ಗುಂಡಾಗಳು ಅವನ ಮೇಲೆ ಮಾರಣಾಂತಿಕ ಹಲ್ಲೆ ಎಸೆಗಿದರು. ಅವನನ್ನು ರಕ್ಷಿಸಿದರೆ ಜೊಕೇ! ನಿಮಗೂ ಈ ಗತಿ ಬರಲಿದೆ ಎಂದು ಅದೇ ಶಸ್ತ್ರಗಳಿಂದ ಅಲ್ಲಿದ್ದ ಜನರನ್ನು ಬೆದರಿಸಿ ಪರಾರಿಯಾದರು. ಪೊಲೀಸರು ಬಂದ ನಂತರವೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು. ಸಾವು ಬದುಕಿನ ನಡುವೆ ನರಳಿದ ವಿನೀಶ್ ಅಸಹಾಯಕತೆಯಿಂದ ಪ್ರಾಣ ಬಿಟ್ಟನು.
ಅಂದು ಡಿಸೆಂಬರ್ 2, 2013 ಕಣ್ಣೂರಿನ ಜನಪ್ರಿಯ ಫೊಟೊಗ್ರಾಫರ್ ಅಂದು ತನ್ನ ಸ್ನೇಹಿತರೊಡನೆ ವಾಹನದಲ್ಲಿ ಸಾಗುತ್ತಿದ್ದಾಗ ವಾಹನಕ್ಕೆ ಬಾಂಬ್ ಸ್ಫೋಟಿಸಿದರು ನಂತರ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಅಷ್ಟಕ್ಕೂ ಆತನ ತಪ್ಪು ಏನೆಂದು ಗೊತ್ತೇ ಆತ ಹಿಂದೂ ಆಗಿದ್ದು. ಹಿಂದು ಕಾರ್ಯಕ್ರಮ ಒಂದರ ಫೊಟೊಗ್ರಾಫಿ ಮಾಡಿದ್ದು.
ಆತ ತ್ರಿಶೂರಿನ ತಲೆ ಹೊರೆ ಕಾರ್ಮಿಕ ಲಾರೆನ್ಸ್. ಅಂದು ತನ್ನ ದೈನಂದಿನ ಕೆಲಸ ಮುಗಿಸಿ ಸ್ನೇಹಿತರ ಜೊತೆ ಬಸ್ಸಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ ವೇಳೆ ಅಲ್ಲಿಗೆ ಬಂದ ಮಾರ್ಕ್ಸಿಸ್ಟ್ ಗುಂಪು ಅವರನ್ನು ಕೊಚ್ಚಿ ಹಾಕಿ ಕೊಲೆ ಮಾಡಿದ್ದರು. ಆತ ಹಿಂದುಗಳನ್ನು ಹಿಂದು ಸಂಘಟನೆಗಳನ್ನು ಬೆಂಬಲಿಸಿದ್ದೇ ತಪ್ಪಾಗಿ ಹೋಯಿತು. ಆತನ ಪ್ರಾಣವನ್ನೇ ತೆಗೆದರು.
ಇದು ಕೇವಲ ಒಂದಷ್ಟು ಉದಾಹರಣೆಗಳು. ಇಂತಹ ರಾಜಕೀಯ ಪ್ರೆರೇಪಿತ ಕೊಲೆಗಳು ಅಲ್ಲಿ ಪ್ರತಿ ತಿಗಳಿಗೆ 5, 6 ಎಂಬಂತೆ ನಡೆಯುತ್ತಲೇ ಇದೆ.
ಇನ್ನು ಹೆಣ್ಣು ಮಕ್ಕಳ ಕಥೆ ಕೇಳುವುದೇ ಬೇಡ ಪ್ರತಿ ಆರು ಘಂಟೆಗೊಮ್ಮೆ ಒಂದು ಅತ್ಯಾಚಾರ ನಡೆಯುತ್ತಿದೆ. ಇಂತಹ ಕರಾಳ ರಾಜ್ಯವಾಗಿದೆ ಕೇರಳ.
ಕೋಮು ಸೌಹಾರ್ದ, ಸೈದಾಂತಿಕ ಅಸಹಿಷ್ಣುತೆ, ಮಾನವ ಹಕ್ಕು ಸಂರಕ್ಷಣೆ, ಇತ್ಯಾದಿಗಳ ಬಗ್ಗೆ ಮಾತಾಡುವ ಕಥಾಕಥಿತ ಬುದ್ಧಿ ಜೀವಿಗಳು ಕೇರಳ ಕಮ್ಯೂನಿಷ್ಟರ ಈ ಹಿಂಸಾವಾದಿ ಕಾರ್ಯಶೈಲಿಯ ಬಗ್ಗೆ ಚಕಾರವೆತ್ತದೆ ಈಗ ಅವರನ್ನು ಪ್ರಚೋದಿಸಿ ಸಮರ್ಥಿಸುವ ದೇಶದ್ರೋಹಿಗಳ ಗುಂಪು ಸೃಷ್ಟಿಯಾಗುತ್ತಿದೆ.
ಇಂತಹ ದೇಶ ದ್ರೋಹಿ ರಕ್ತ ಪಿಪಾಸುಗಳು ಯಾರನ್ನೂ ಬಿಟ್ಟಿಲ್ಲ ಅದು ಮರದ್ ಬೀಚ್ ಬಳಿ ಇರುವ ಹಿಂದುಗಳಾಗಿರಬಹುದು ನಂದಪುರಂ ನ ಮುಸಲ್ಮಾನರಾಗಿರಬಹುದು ಎಲ್ಲರನ್ನು ಹಿಂಸಿಸಿದ್ದಾರೆ.
ದಲಿತರ ಹೆಸರು ಹೇಳಿಕೊಂಡು ನಾಟಕ ಮಾಡುವ ಇವರು ಅವರ ರಾಜ್ಯದ ದಲಿತರ ಮೇಲೆ ಅತ್ಯಾಚಾರ ಎಸಗುತ್ತಲೇ ಇದ್ದಾರೆ. ಇನ್ನು ಉಗ್ರರನ್ನು ಸಮರ್ಥಿಸಿಕೊಂಡು ಅವರ ಜೊತೆ ವೇದಿಕೆಯನ್ನು ಹಂಚಿದ್ದು ಹೊಸತ್ತೇನಲ್ಲ. ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ನೀಡಿದರೆ ಒಳ್ಳೆಯದು ಎಂದು ವ್ಯಂಗ್ಯ ನಾಡುವವರು ಇವರು.
ಇಷ್ಟೆಲ್ಲ ರಾಜಕೀಯ ಲೋಪದೋಷ ಕಪ್ಪು ಚುಕ್ಕಿ ರಕ್ತದ ಕೆಂಪು ಕಲೆ ಕರಾಳ ಛಾಯೆ ಇರುವ ದೇಶ ದ್ರೋಹಿ ನಾಯಕರಿಂದ ಐಕ್ಯತೆಯ ಮಾತು ಬರುವುದಾದರೂ ಹೇಗೆ??
ಇದು ದೇಶ ದ್ರೋಹಿ ಗುಂಪುಗಳಿಂದ ಪ್ರೇರೇಪಿತ ಪಿತೂರಿ ಸಂಚು ಈ ಸಂಚಿಗೆ ಮಂಗಳೂರಿನವರು ಬಲಿಯಾಗುವುದು ಬೇಡ. ಇಂತಹವರನ್ನು ಮಂಗಳೂರಿಗೆ ಬರದಂತೆ ಮಾಡಬೇಕು. ಇಂತಹ ರಕ್ತ ಪಿಪಾಸು ಕೆಂಪು ಉಗ್ರರಿಂದ ಮಂಗಳೂರಿಗೆ ಐಕ್ಯತೆಯ ಪಾಠ ಅಗತ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸೋಣ.
ಬನ್ನಿ ಫೆ. 25 ರ ಪ್ರತಿಭಟನೆಯಲ್ಲಿ ಪಾತ್ರರಾಗೋಣ. #GoBackPinarayi ಎಂದು ಜೋರಾಗಿ ಘರ್ಜಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.