ಧಾರವಾಡ: ಇಲ್ಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನಡೆದ 6ನೇ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕ ಬಾಲ ವಿಕಾಸ ಅಕ್ಯಾಡೆಮಿ ನಿಗಮ ಮಂಡಳಿಯಿಂದ ಪ್ರತೇಕ್ಷಿಸಿ, ಇತರ ಅಕ್ಯಾಡೆಮಿಗಳಂತೆ ಮಕ್ಕಳ ಸಾಹಿತ್ಯ, ಶಿಕ್ಷಣ-ಸಂಸ್ಕೃತಿಗೆ ದುಡಿದವರನ್ನೇ ಅಧ್ಯಕ್ಷರನ್ನಾಗಿ ಹಾಗೂ ಸದಸ್ಯರನ್ನಾಗಿ ನೇಮಿಸುವುದು ಮಹತ್ವದ ನಿರ್ಣಯ ಮಂಡಿಸಲಾಗಿದೆ.
ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಅಧ್ಯಕ್ಷ ಮಾಲತಿ ಪಟ್ಟಣಶೆಟ್ಟ ಸರ್ವಾಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಭಾನುವಾರದ ಸಮಾರೋಪ ಸಮಾರಂಭದಲ್ಲಿ 6 ಮಹತ್ವದ ನಿರ್ಣಯ ಮಂಡಿಸಿದ್ದು, ರೈತಗೀತೆ, ನಾಡಗೀತೆ ಗುರುತಿಸಿದಂತೆ ಕವಿ ಶಂ.ಗು.ಬಿರಾದಾರ ಅವರ ನಾವು ಎಳೆಯರು, ನಾವು ಗೆಳೆಯರ ಎಂಬ ಪದ್ಯೆವನ್ನು ಮಕ್ಕಳ ಧ್ಯೇಯ ಗೀತೆಯಾಗಿ ಪೋಷಿಸುವ ನಿರ್ಣಯ ಮಂಡಿಸಿತು.
ಸಂರಕ್ಷಿತ ತಾಣವಾಗಿಸಿ
ಮಕ್ಕಳ ಗ್ರಾಮ ಸಭೆಗಳನ್ನು ಅರ್ಥಪೂರ್ಣವಾಗಿ ನಡೆಸಲು ಕಾಯ್ದೆಯನ್ನು ಬದ್ಧಗೊಳಿಸುವುದು, ಕಪತ್ತಗುಡ್ಡ ಸಂರಕ್ಷಿತ ಪ್ರದೇಶವಾಗಿ ಮುಂದುವರೆಸಿ, ಮಕ್ಕಳ ಹಸಿರು ಪ್ರವಾಸ ತಾಣವಾಗಿ ಘೋಷಿಸುವುದು, ಮಕ್ಕಳ ಶಿಕ್ಷಣ, ಸಾಹಿತ್ಯ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕುರಿತಂತೆ ಪ್ರತ್ಯೇಕ ವಿವಿಯ ಸ್ಥಾಪನೆ ಮಾಡುವ ಅತ್ಯಂತ ಮಹತ್ವದ ನಿರ್ಣಯ ಕೈಗೊಂಡಿತು.
ಪ್ರತ್ಯೇಕ ಗೋಷ್ಠಿ
ಕೊನೆಯದಾಗಿ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಮಕ್ಕಳ ಗೋಷ್ಠಿ ಇಡುವುದು ನಿರ್ಣಯ ಕೈಗೊಂಡಿತ್ತು. ಸಮ್ಮೇಳನದ ಪ್ರಧಾನ ಸಂಚಾಲಕ ಶಂಕರ ಹಲಗತ್ತಿ ನಿರ್ಣಯ ಮಂಡಿಸಿದರು. ಸಮ್ಮೇಳನದಲ್ಲಿ ಸೇರಿದ ಮಕ್ಕಳು, ಸಾಹಿತಿಗಳು, ಶಿಕ್ಷಣ ತಜ್ಞರು, ಚಿಂತಕರು, ಪಾಲಕರು, ಯುವಕರು ಚಪ್ಪಾಳೆ ತಟ್ಟುವ ಮೂಲಕ ನಿರ್ಣಯಗಳಿಗೆ ಅಂಗೀಕಾರ ನೀಡಿದರು.
ಚಿಣ್ಣರ-ಚಿನ್ನ ಪ್ರಶಸ್ತಿ
ಕಿರಣ ಚಲವಾದಿ(ಬಾಗಲಕೋಟಿ), ಸ್ನೇಹಾ ಜಗದೀಶ(ಬೀದರ), ಪೂರ್ವಿ ಎಸ್.ಕೆ(ಯಲ್ಲಾಪೂರ), ಕಾವೇರಿ(ರಾಮನಗರ), ವೈಷ್ಣವಿ ರಾವ್(ಚಿಕ್ಕಮಗಳೂರ), ಮಣಿಕಂಠ (ಗದಗ), ಬಿ.ಪ್ರಕೃತಿ ರೂಪಾರಾವ್(ಚಿತ್ರದುರ್ಗ), ಕುಸುಮಾ ಬೊಯಿಕಕ್ಕೆರಾ(ಯಾದಗಿರಿ), ಅಶ್ವಿನಿ ಪರ್ವಾಪೂರ (ಕಲಘಟಗಿ), ವೈಷ್ಣವಿ ಶ್ರೀನಿವಾಸ ಜಡಿ(ಗುಲಬರ್ಗ) ವಿಶ್ವಪ್ರಸಾದ ಗಾಣಗಿ(ಖಾನಾಪೂರ),
ಅಲ್ಲದೇ, ಚಿನ್ಮಯಿ ಕುಂಬಾರ(ಕೊಪ್ಪಳ), ರೇಶ್ಮಾ ಜಿ.ಬಿ. (ಮಂಡ್ಯ), ಪ್ರತೀಕ್ಷಾ ಭಟ್(ಬೆಂಗಳೂರು), ಚಿತ್ರಶ್ರೀ ಆರ್.ಎಂ(ಬಳ್ಳಾರಿ), ಫಕ್ಕಿರೇಶ್ ತಳವಾರ(ಚಿಕ್ಕೋಡಿ), ಸಿರಿ.ಎಂ(ದಾವಣಗೇರಿ), ಚೈತ್ರ ಬ್ರಾಹ್ಮಣ(ಗಜೇಂದ್ರಗಡ), ಸೊನಾಲಿಕಾ ಪಾಟೀಲ(ಬೆಳಗಾವಿ), ಪುನಿತಎ.ಆರ್.(ತುಮಕೂರ),ಶಮಿಯಾ ಮಕಾಂದರ(ರಾಮದುರ್ಗ) ಅವರಿಗೆ ಚಿನ್ನರ ಚಿನ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಅಧ್ಯಕ್ಷ ಡಾ. ಮಾಲತಿ ಪಟ್ಟಣಶೆಟ್ಟಿ, ಕರ್ನಾಟಕ ಬಾಲವಿಕಾಸ ಅಕ್ಯಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಹಿರಿಯ ಸಂಶೋಧಕ ಹಾಗೂ ಸಾಹಿತಿ ಡಾ. ರೆಹಮತ್ ತರಿಕೇರಿ, ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ನೀಲಕಂಠಪ್ಪ ಅಸೂಟಿ ಅನೇಕರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.