News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಧಾರವಾಡದಲ್ಲಿ 6ನೇ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಆರಂಭ

’ಮಕ್ಕಳ ಸಾಹಿತ್ಯದ ಪ್ರತ್ಯೇಕ ಅಕ್ಯಾಡೆಮಿ ಅಗತ್ಯ’

ಧಾರವಾಡ: ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಅಭಿನಯ ಹಾಗೂ ಆಟೋಟಗಳು ಸೇರಿದಂತೆ ಮಕ್ಕಳಿಗಾಗಿಯೇ ಕರ್ನಾಟಕ ಸರ್ಕಾರ ಪ್ರತ್ಯೇಕ ಅಕ್ಯಾಡೆಮಿ ಸ್ಥಾಪಿಸುವುದು ಅಗತ್ಯವಿದೆ ಎಂದು 6ನೇಯ ಅಖಿಲ ಕರ್ನಾಟಕ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಆಗ್ರಹಿಸಿದರು.

ಕರ್ನಾಟಕ ಬಾಲವಿಕಾಸ ಅಕ್ಯಾಡೆಮಿ, ಬಸವೇಶ್ವರ ಧರ್ಮ ಫಂಡ್ ಸಂಸ್ಥೆ ಸಹಯೋಗದಲ್ಲಿ ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳ ಗುಬ್ಬಚ್ಚಿ ಗೂಡು ಪತ್ರಿಕೆಯ 6ನೇ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆ ಭಾಷಣ ಮಾಡಿದರು.

ರಾಜ್ಯದಲ್ಲಿ ಮಕ್ಕಳ ಕುರಿತಾದ ಸಾಹಿತ್ಯ ರಚನೆ ಕಡಿಮೆ ಇದೆ. ಮಕ್ಕಳ ಈ ಸಂಯುಕ್ತ ಅಕ್ಯಾಡೆಮಿ ಅನುಷ್ಠಾನಕ್ಕೆ ಶಿಕ್ಷಕರು, ಕ್ರಿಯಾಶೀಲ ವ್ಯಕ್ತಿಗಳು, ಪಾಲಕರು, ಸಾಹಿತಿ ಬಳಗ ಸರ್ಕಾರಕ್ಕೆ ಒತ್ತಾಯಿಸಲು ಸಾಮೂಹಿಕ ಹೋರಾಟ ನಡೆಸಬೇಕಿದೆ. ಈ ಅಮೂಲ್ಯ ವೇದಿಕೆಯಿಂದಲೇ ಅಕ್ಯಾಡೆಮಿ ಸ್ಥಾಪಿಸುವ ತನಕ ಹೋರಾಟ ನಿಲ್ಲಿಸಕೂಡದೆಂಬ ಉದ್ಘೋಷ ಹಾಕಿದರು.

dharwad

ಮಕ್ಕಳು ದೇಶದ ಆಸ್ತಿ. ಅವರಿಗೆ ಎಷ್ಟೊಂದು ಸಂಘ-ಸಂಸ್ಥೆಗಳು, ಅಕ್ಯಾಡೆಮಿಗಳು ಇದ್ದರೂ ಕಡಿಮೆಯೇ. ಮಕ್ಕಳ ಸಾಹಿತ್ಯ ರಚಿಸುವವರು ಹಳೆಯ ಪರಂಪರೆ ಸಾಹಿತ್ಯ ರಚನೆ ಬಿಟ್ಟು, ಮಕ್ಕಳ ಆಸಕ್ತಿ, ಅಭಿರುಚಿ, ಮನೋಧರ್ಮ ಅರಿತು ಅಧ್ಯಯನ ಮಾಡಿಕೊಂಡು ಹೊಸ ಸಾಹಿತ್ಯ ರಚನೆಯತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಾಗತಿಕ ಯುಗದಲ್ಲಿ ಪ್ರತಿ ಕ್ಷೇತ್ರದಲ್ಲೂ ಜಾಗತೀಕರಣ ಅಂತೀವಿ. ಆದರೆ, ಸಾಹಿತ್ಯ ಕ್ಷೇತ್ರ ಮಾತ್ರ ಜಾಗತೀಕರಣ ಆಗಿಲ್ಲ. ಹೀಗಾಗಿ ಮಕ್ಕಳಿಗೆ ಸಾಹಸ, ವೈಜ್ಞಾನಿಕ ಮನೋಭಾವ, ಕುತೂಹಲ, ಭಾವಾಭಿನಯ ಕಟ್ಟಿಕೊಡುವ ಕಥೆಗಳ ರಚನೆ ಸಾಹಿತಿಗಳಿಂದ ಆಗಬೇಕು. ಮಹಿಳೆಯರು, ಮಕ್ಕಳು, ಯುವಕರು ಈ ಪ್ರಯತ್ನದಲ್ಲಿ ತೊಡಗಬೇಕು ಎಂದರು.

ಕಾಯ್ದೆ ಜಾರಿಗೆ ಬರಲಿ
ಸಮ್ಮೇಳನಕ್ಕೆ ವಿದ್ಯುಕ್ತ್ ಚಾಲನೆ ನೀಡಿದ ಸಾಗರದ ಸಾಹಿತಿ ನಾ.ಡಿಜೋಜ ಮಾತನಾಡಿ, ಕರ್ನಾಟಕದ ಯಾವುದೇ ಸಾಹಿತಿ ಮಕ್ಕಳ ಕುರಿತಾತ ಸಾಹಿತ್ಯ ರಚಿಸದಿದ್ದರೆ, ಅವರನ್ನು ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿಗೆ ಪರಿಗಣಿಸಬಾರದು. ಇಂಥ ಕಾಯ್ದೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜಾರಿಯಲ್ಲಿದ್ದು, ಇಂಥ ಮಾದರಿಯು ಕರ್ನಾಟಕದಲ್ಲೂ ಜಾರಿಗೆ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.

ಇಂಗ್ಲಿಷ್ ಸಾಹಿತ್ಯದ ಪ್ರಭಾವ ಕನ್ನಡದ ಮೇಲಿದೆ ಎಂಬ ಆರೋಪವಿದೆ. ಇಂಗ್ಲಿಷ್ ಸಾಹಿತ್ಯಕ್ಕೂ ಮುನ್ನವೇ ಕನ್ನಡ ಸಾಹಿತ್ಯ ಇತ್ತೆಂಬುದಕ್ಕೆ ಮಕ್ಕಳ ಸಾಹಿತ್ಯವೇ ಕಾರಣ. ಅವರಿಗಿದ್ದ ಗಾದೆಗಳು, ಒಗಟು, ನೀತಿಕಥೆ ಒಳಗೊಂಡು ದುರ್ಗಸಿಂಹ ರಚಿಸಿದ ಪಂಚತಂತ್ರ ಗ್ರಂಥವೇ ಸಾಕ್ಷಿ. ಮರಾಠಿಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಸಿಕ್ಕ ಮನ್ನಣೆ ರಾಜ್ಯದಲ್ಲೂ ಸಿಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಕರ್ನಾಟಕ ಬಾಲವಿಕಾಸ ಅಕ್ಯಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಸಮ್ಮೇಳನದ ೬ನೇ ಸಂಚಿಕೆ ಬಿಡುಗಡೆ ಮಾಡಿದರು. ಚಿಲಿಪಿಲಿ ಪ್ರಕಾಶನದಿಂದ ಹೊರಂತದ ವಿವಿಧ ಸಾಹಿತಿಗಳು ರಚಿಸಿದ ವರದಿ ಆಚೇಗಿನ ಪಯಣ, ವೈಜ್ಞಾನಿಕ ಪರದಿಗಳು, ದೇವಮ್ಮನ ತೋಟ, ಪುಟ್ಟ ತಂಗಿ, ಪುಟ್ಟಿಯ ಬಯಕೆ ಸೇರಿದಂತೆ ಹಲವಾರು ಪುಸ್ತಕಗಳು ಲೋಕಾರ್ಪಣೆಗೊಂಡವು.

ಸಾಹಿತಿಗಳಾದ ನಿಂಗಣ್ಣ ಕುಂಟಿ, ಶಂಕರ ಹಲಗತ್ತಿ, ಅನಿಲ ದೇಸಾಯಿ, ಮಲ್ಲಿಕಾರ್ಜುನ ಚಿಕ್ಕಮಠ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಇದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top