ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರಿಂದ ಪ್ರೇರಿತವಾದ ಮೂವರು ಸ್ವಯಂಸೇವಕರು ಸ್ವಾಮಿ ವಿವೇಕಾನಂದರ 154 ಜನ್ಮ ವರ್ಷಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಸ್ವಾಮೀಜಿಯವರಿಗೆ ಗೌರವ, ಪ್ರಣಾಮಗಳನ್ನು ಸಲ್ಲಿಸಲು ಪುಣೆಯಿಂದ ಕನ್ಯಾಕುಮಾರಿವರೆಗೆ ಸೈಕಲ್ ಪ್ರವಾಸವನ್ನು ಕೈಗೊಂಡಿದ್ದಾರೆ.
ಈ ಇಬ್ಬರು ಸೈಕಲ್ ಪ್ರವಾಸದ ಮೂಲಕ ಸ್ವಾಮಿ ವಿವೇಕಾನಂದ ಹಾಗೂ ಸೋದರಿ ನಿವೇದಿತಾ ಇವರ ಜೀವನ ಮತ್ತು ಸಂದೇಶಗಳನ್ನು ಬಿತ್ತರಿಸುವ , ವಿಶೇಷವಾಗಿ ಯುವಕರಿಗೆ ತಲುಪಿಸುವ ಗುರಿ ಹೊಂದಿದ್ದಾರೆ.
ಜೀವನದಲ್ಲಿ ಒಂದು ಗುರಿ ಇರಬೇಕು. ಅದರಲ್ಲೂ ಯುವಕರ ಜೀವನ ಸಾಹಸಮಯವಾಗಿರಬೇಕು ಎಂಬುದನ್ನು ತಿಳಿಯಪಡಿಸುತ್ತ, ಜನರು ಹೆಚ್ಚು ಹೆಚ್ಚಾಗಿ ಸೈಕಲ್ಗಳನ್ನು ಬಳಸುವುದರಿಂದ ಉಭಯತರವಾಗಿ ಎಂದರೆ, ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಉಂಟಾಗುವ ಆರೋಗ್ಯದ ಧನಾತ್ಮಕ ಪರಿಣಾಮದ ಬಗ್ಗೆ ತಿಳಿಸುವವರಿದ್ದಾರೆ. ಪರಿಸರ ಸುಧಾರಣೆಯ ಅರಿವನ್ನು ನೀಡಲಿದ್ದಾರೆ.
ಬೆಳಗಾವಿಯಿಂದ ಶಿಗ್ಗಾವಿಗೆ ಹೋಗುವಾಗ ಮಾರ್ಗ ಮಧ್ಯೆ ಹುಬ್ಬಳ್ಳಿಯಲ್ಲಿ ಸೈಕಲ್ ಸವಾರರನ್ನು ಸ್ವಾಗತಿಸಲಾಯಿತು. ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ರಘುವೀರಾನಂದಜಿ, ಸಾಹಿತ್ಯ ಭಂಡಾರದ ಸುಬ್ರಹ್ಮಣ್ಯ ಹಾಗೂ ಇತರರು ಉಪಸ್ಥಿತರಿದ್ದರು.
ಡಿ.24 ರಿಂದ 26 ರವರೆಗೆ ಪುಣೆಯಿಂದ ಬೆಳಗಾವಿಗೆ ಬಂದಿದ್ದು, ಜನವರಿ 10, 2017 ರಂದು ಕನ್ಯಾಕುಮಾರಿ ತಲುಪಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಾದ್ಯಂತ 14 ದಿನಗಳಲ್ಲಿ 1600 ಕಿ.ಮೀ ದೂರ ಕ್ರಮಿಸಲಿದ್ದು ಆತ್ಮೀಯರು ಇವರನ್ನು ಸ್ವಾಗತಿಸಲು ಆಯೋಜಕರು ಕೋರಿದ್ದಾರೆ.
ಸೈಕಲ್ ಸವಾರರ ಮಾಹಿತಿ:
• ಮಹೇಂದ್ರ ನಿರುತ್ತಿ ಅತಾಲೇ, ವಯಸ್ಸು: 23, 10ನೇ ತರಗತಿ, ಧ್ಯಾನ ಪ್ರಮೋದಿನಿ ಪ್ರಶಾಲ, ಪುಣೆ
ಬಿ.ಕಾಂ, ಸಾಹು ಕಾಲೇಜು, ಪುಣೆ ವಿಶ್ವವಿದ್ಯಾಲಯ
ಪೊಲೀಸ್ ಸಬ್ ಇನ್ಸ್ಪೆಕ್ಟ್ರ್ ಆಗಿ ಸೇವೆ ಸಲ್ಲಿಸಿದ್ದಾರೆ (2010-2013)
ಪುಣೆಯಲ್ಲಿ ಸೇಲ್ಸ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಪುಣೆಯ ರಾಮಕೃಷ್ಣ ಮಠದ ವಿವೇಕಾನಂದ ಬಾಲಕ ಸಂಘದ ಮೊದಲ ತಂಡದ ವಿದ್ಯಾರ್ಥಿ.
ಪ.ಪೂ.ಶ್ರೀಮತ್ ಸ್ವಾಮಿ ರಂಗನಾಥಾನಂದಜಿ ಮಹಾರಾಜರವರಿಂದ ೨೦೦೨ ರಲ್ಲಿ ಮಂತ್ರದೀಕ್ಷೆ ಪಡೆದಿದ್ದಾರೆ.
ಸದ್ಯ ರಾಮಕೃಷ್ಣ ಮಠ ಪುಣೆಯಲ್ಲಿ ಇಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
• ಶ್ರೀಕಾಂತ ಭಜರಂಗ ಕಾಟಕೆ
ವಯಸ್ಸು:30, 10ನೇ ತರಗತಿ, ಸ್ವಗ್ರಾಮ ಮತ್ತು ಬಿಎಸ್ಸಿ, ಎಂಎಸ್ಸಿ (ವ್ಯವಸಾಯ)ದಲ್ಲಿ ಪದವಿಧರರು.
ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿರುತ್ತಾರೆ. (2010-13)
ಪುಣೆಯಲ್ಲಿ ಸೇಲ್ಸ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಪುಣೆಯ ರಾಮಕೃಷ್ಣ ಮಠಕ್ಕೆ2014 ರಲ್ಲಿ ಪರಿಚಿತಗೊಂಡರು.
ಪ.ಪೂ.ಶ್ರೀಮತ್ ವಾಗೀಶಾನಂದಜಿ ಮಹಾರಾಜರವರಿಂದ 2014 ರಲ್ಲಿ ಮಂತ್ರದೀಕ್ಷೆ ಪಡೆದಿದ್ದಾರ.
ರಾಮಕೃಷ್ಣ ಆಶ್ರಮ( ಆರ್ಐಎಂಎಸ್ಇ), ಮೈಸೂರು ಇಲ್ಲಿಪ್ರೇರಣಾತ್ಮಕ ವ್ಯಕ್ತಿತ್ವ ನಿರ್ಮಾಣ ಅಧಿವೇಶನಗಳುಳ್ಳ ಅಧ್ಯಾತ್ಮಿಕ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
• ಜ್ಯೋತಿಭಾ ಅಮೃತರಾವ್ ಜಾಧವ
ವಯಸ್ಸು: 36, ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿಯಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಗೇರ್ ಸೈಕಲ್ ಮತ್ತುಹೇಳಿ ಮಾಡಿಸಿದ (ಆದೇಶ ಮಾಡಿದ) ಸೈಕಲ್ಗಳ ರಿಪೇರಿ ಕೆಲಸದಲ್ಲಿ ಪರಿಣಿತಿ ಹೊಂದಿರುವರು.
ನರ್ಮದಾ ಪರಿಕ್ರಮ, ನೀಲಗಿರಿ ಪ್ರವಾಸ, ಹಿಮಾಲಯ, ಎಂಟಿಬಿ, ರಗ್ಗಡ್ ಸಹ್ಯಾದ್ರಿ, ಲೇಹನಿಂದ ಮನಾಲಿ ಪ್ರವಾಸ ಕೈಗೊಳ್ಳುವ ಸೈಕಲ್ ಸವಾರರಿಗೆ ಉಚಿತ ಸೈಕಲ್ ಕಾರ್ಯಗಾರ ನಡೆಸುತ್ತಾರೆ. ಬೆಳಗಾವಿ ರಾಕ್ ರೈಡರ್ಸ್ ಬೈಸಿಕಲ್ ಕ್ಲಬ್ನ ಸಂಸ್ಥಾಪಕರು.
2012 ರಲ್ಲಿ ಕೊಲ್ಲಾಪುರ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಶನ್ ಆಯೋಜಿಸಿದ ರಗ್ಗಡ್ ಸಹ್ಯಾದ್ರಿ ಸ್ಪರ್ಧೆಯಲ್ಲಿ 2 ನೇ ಬಹುಮಾನ ವಿಜೇತರು.
ಸ್ವಸ್ಥ ಜೀವನ ಶೈಲಿಗೆ ರಸ್ತೆ ದಟ್ಟಣೆ ಕಡಿಮೆಗೊಳಿಸಲು (ಜಾಗತಿಕ ತಾಪಮಾನ ನಿಭಾಯಿಸಲು) ಸೈಕಲ್ ಬಳಕೆ ಎಷ್ಟೊಂದು ಪರಿಣಾಮಕಾರಿ ಎನ್ನುವ ಬಗ್ಗೆ ಅರಿವು ನೀಡುತ್ತಾರೆ.
ರಾಮಕೃಷ್ಣ ಮಠ, ಪುಣೆ ಇವರ ನಿರ್ದೇಶನ ಹಾಗೂ ಆಶ್ರಯದಲ್ಲಿ ಈ ಸೈಕಲ್ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ರಾಮಕೃಷ್ಣ ಆಶ್ರಮ, ಬೆಳಗಾವಿ ಈ ಪ್ರವಾಸಕ್ಕೆ ಬೆಂಬಲ ನೀಡುವುದು. ಹೆಚ್ಚಿನ ಮಾಹಿತಿಗಾಗಿ ಸೈಕಲ್ ರ್ಯಾಲಿ ಸಂವಾಹಕರಾದ ಬ್ರಹ್ಮಚಾರಿ ವಸಂತ (7411597442) ಅವರನ್ನು ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.